ದರ್ಶನ್ ತೂಗುದೀಪ್ ಕೇಸ್‌; ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌, ಸೋದರ ಮಾವ ಶ್ರೀನಿವಾಸ್ ವಿಷಾದ
ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್ ತೂಗುದೀಪ್ ಕೇಸ್‌; ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌, ಸೋದರ ಮಾವ ಶ್ರೀನಿವಾಸ್ ವಿಷಾದ

ದರ್ಶನ್ ತೂಗುದೀಪ್ ಕೇಸ್‌; ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌, ಸೋದರ ಮಾವ ಶ್ರೀನಿವಾಸ್ ವಿಷಾದ

ದರ್ಶನ್ ತೂಗುದೀಪ್ ಕೇಸ್‌; ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌ ವಿಚಾರಕ್ಕೆ ಅವರ ಸೋದರ ಮಾವ ಶ್ರೀನಿವಾಸ್ ಸ್ಪಂದಿಸಿದ್ದಾರೆ. ಕೃತ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ಹಳೆಯ ನೋವಿನ ಘಟನೆಗಳನ್ನು ನೆನಪಿಸಿಕೊಂಡಿರುವುದಾಗಿ ವರದಿ ಹೇಳಿದೆ.

ದರ್ಶನ್ ತೂಗುದೀಪ್ ಕೇಸ್‌; ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌ ಬಗ್ಗೆ ಸೋದರ ಮಾವ ಶ್ರೀನಿವಾಸ್ ವಿಷಾದ ವ್ಯಕ್ತಪಡಿಸಿದ್ದಾರೆ.
ದರ್ಶನ್ ತೂಗುದೀಪ್ ಕೇಸ್‌; ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲು ಸೇರಿದ ದರ್ಶನ್‌ ಬಗ್ಗೆ ಸೋದರ ಮಾವ ಶ್ರೀನಿವಾಸ್ ವಿಷಾದ ವ್ಯಕ್ತಪಡಿಸಿದ್ದಾರೆ.

ಕೊಡಗು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಟ ದರ್ಶನ್ ತೂಗುದೀಪ ಅವರ ಸೋದರ ಮಾವ ಟಿ ಎಲ್ ಶ್ರೀನಿವಾಸ್, ಎತ್ತಿ ಆಡಿಸಿ ಬೆಳೆಸಿದ ದರ್ಶನ್ ವಿರುದ್ಧ ಇಂತಹ ಆರೋಪ ಬರಬಾರದಿತ್ತು ಎಂದು ಖೇದ ವ್ಯಕ್ತಪಡಿಸಿದ್ದಾರೆ.

ದರ್ಶನ್ ತೂಗುದೀಪ ಅವರ ತಾಯಿ ಮೀನಾ ಅವರ ತವರು ಪೊನ್ನಂಪೇಟೆ. ಟಿಎಲ್ ಶ್ರೀನಿವಾಸ್ ಅವರು ಮೀನಾರ ಸಹೋದರ. ರೇಣುಕಾಸ್ವಾಮಿ ಹತ್ಯೆ ವಿಚಾರವಾಗಿ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ್ದ ಟಿಎಲ್ ಶ್ರೀನಿವಾಸ್, ದರ್ಶನ್ ಮತ್ತು ಅವರ ತಾಯಿಯಿಂದ ಅವರಿಗೆ ಆಗಿರುವ ನೋವುಗಳನ್ನೂ ನೆನಪಿಸಿಕೊಂಡಿದ್ದಾರೆ.

ದರ್ಶನ್ ಹೀಗಾಗಿ ಹೋದ, ಆಗಬಾರದಿತ್ತು- ಟಿಎಲ್ ಶ್ರೀನಿವಾಸ್ ಖೇದ

“ಎತ್ತಿ ಆಡಿಸಿ ಬೆಳೆಸಿದ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು ಬೇಸರ ತಂದಿದೆ. ಮಾತುಕತೆ ಮೂಲಕ ಬಗೆಹರಿಸಬಹುದಾದ ವಿಚಾರಗಳನ್ನೆಲ್ಲ ರಂಪ ರಾದ್ಧಾಂತ ಮಾಡಿ ಸಂಬಂಧಗಳನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದು ದರ್ಶನ್ ಒಬ್ಬರೇ ಅಲ್ಲ, ಅವರ ತಾಯಿ ಮೀನಾ ಕೂಡ ಹಾಗೆಯೇ ಇದ್ದಾರೆ. ದರ್ಶನ್ ದೊಡ್ಡ ನಟನಾಗಿ ಬೆಳೆದ ನಂತರ ನಮ್ಮ ಸಂಪರ್ಕ ಕಡಿಮೆಯಾಗಿದೆ” ಎಂದು ಟಿ ಎಲ್ ಶ್ರೀನಿವಾಸ್‌ ಹೇಳಿದ್ದಾಗಿ ವರದಿ ವಿವರಿಸಿದೆ.

ಆದಾಗ್ಯೂ, ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿ ಆಕೆ ರಾಜಾಜಿನಗರದ ಆಸ್ಪತ್ರೆಗೆ ದಾಖಲಾದಾಗ ನಾವು ಹೋಗಿ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿ ಬಂದಿದ್ದೆವು. ಅದಾದ ಬಳಿಕ ದರ್ಶನ್ ಭೇಟಿ ಮಾಡಿಲ್ಲ. ಅವರ ಮನೆಗೂ ಹೋಗಿಲ್ಲ. ಆದರೆ ಈಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು ನೋವಿನ ಸಂಗತಿ ಎಂದು ಟಿಎಲ್ ಶ್ರೀನಿವಾಸ್ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಆಸ್ತಿವ್ಯಾಜ್ಯ ಕೋರ್ಟ್‌ನಲ್ಲಿದೆ - ಟಿಎಲ್ ಶ್ರೀನಿವಾಸ್ ನೋವಿನ ನುಡಿ

ತವರಿನ ಆಸ್ತಿ ವಿಚಾರಕ್ಕೂ ದರ್ಶನ್ ಅಮ್ಮ ಮೀನಾ ಜಗಳ ಮಾಡಿಕೊಂಡಿದ್ದರು. ದರ್ಶನ್ ತಾನು ಹುಟ್ಟಿದ ಅಜ್ಜಿ - ತಾತನ ಮನೆಯನ್ನು ಕೆಡವಿ ನೆಲಸಮಗೊಳಿಸಿ ಸೋದರ ಮಾವಂದಿರನ್ನು ಬೀದಿಪಾಲು ಮಾಡಿದ್ದ ಆರೋಪವನ್ನೂ ಎದುರಿಸುತ್ತಿದ್ದಾರೆ.

ಆಸ್ತಿ ಪಾಲು ಮಾಡುವ ವಿಚಾರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾಗಿತ್ತು. ಆದರೆ ಆಸ್ತಿ ಪಾಲು ಮಾಡುವ ವಿಚಾರವನ್ನು ಏಕಾಕಿ ದೊಡ್ಡದು ಮಾಡಿ ಮನೆಯನ್ನೇ ನೆಲಸಮ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗಿ ಬಂತು. ಅವರ ವಿರುದ್ಧ ದೂರು ದಾಖಲಿಸಿದೆವು. ಹತ್ತು ವರ್ಷಗಳ ಹಿಂದಿನ ಪ್ರಕರಣ ಈಗ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಟಿಎಲ್ ಶ್ರೀನಿವಾಸ್ ಹೇಳಿದ್ದಾಗಿ ವರದಿ ವಿವರಿಸಿದೆ.

ಇದಲ್ಲದೆ, ಹಿಂದೊಮ್ಮೆ ಕೊಡಗಿನಲ್ಲಿ ಹೋಮ್ ಸ್ಟೇಯಲ್ಲಿ ಬಂದಿಳಿದಿದ್ದ ದರ್ಶನ್‌ ಅಲ್ಲಿದ್ದ ಮಹಿಳೆಯ ಮೇಲೆ ಕ್ರೌರ್ಯ ತೋರಿದ್ದರು. ದರ್ಶನ್‌ ಮತ್ತು ಸ್ನೇಹಿತರ ಬಳಗ ಅಲ್ಲಿ ಉಳಿದುಕೊಂಡಿದ್ದಾಗ ಮಹಿಳೆಯ ಮೇಲೆ ಹಲ್ಲೆ ನಡೆಸಿ ಸಿಗರೇಟ್‌ನಿಂದ ಸುಟ್ಟು ಕಿರುಕುಳ ಕೊಟ್ಟ ಪ್ರಸಂಗವೂ ನಡೆದಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾಗಿ ವರದಿ ಹೇಳಿದೆ.

Whats_app_banner