ಕನ್ನಡ ಸುದ್ದಿ / ಕರ್ನಾಟಕ /
Davanagere News: ಹದಿನೈದು ದಿವಸ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ; ಅರಣ್ಯ ಇಲಾಖೆಯ ಯಶಸ್ವೀ ಕಾರ್ಯಾಚರಣೆ
Leopard in Cage: ಚನ್ನಗಿರಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆಯಿಂದ ಇಡಲಾಗಿದ್ದ ಬೋನಿಗೆ ಬಂಧಿಯಾಗಿದೆ. ಕಳೆದ ಹದಿನೈದು ದಿವಸಗಳಿಂದ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಏಳು ಶ್ವಾನಗಳನ್ನು ಬಲಿ ಪಡೆದಿತ್ತು.
ಹದಿನೈದು ದಿವಸ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ.
ದಾವಣಗೆರೆ: ಕಳೆದ 15 ದಿನಗಳಿಂದ ಚನ್ನಗಿರಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಚನ್ನಗಿರಿ ತಾಲೂಕಿನ ಗರಗ ಗ್ರಾಮದಲ್ಲಿ ಬೆಳಿಗ್ಗೆ ಸೆರೆ ಸಿಕ್ಕಿದೆ.
ಅರಣ್ಯ ಇಲಾಖೆಯಿಂದ ಇಡಲಾಗಿದ್ದ ಬೋನಿಗೆ ಚಿರತೆ ಬಂಧಿಯಾಗಿದೆ. ಕಳೆದ ಹದಿನೈದು ದಿವಸಗಳಿಂದ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಏಳು ಶ್ವಾನಗಳನ್ನು ಬಲಿ ಪಡೆದಿತ್ತು. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರಿಂದ ಜನರು ಒಂಟಿಯಾಗಿ ಓಡಾಡಲು ಹೆದರುವಂತಾಗಿತ್ತು.
ಗ್ರಾಮದ ಜನರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಚಿರತೆ ಹೆಜ್ಜೆ ಗುರುತು ಪತ್ತೆ ಮಾಡಿ ಬೋನು ಇಟ್ಟಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಬೋನಿನ ಒಳಗಡೆ ಶ್ವಾನ ಇರಿಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೆ. ಚಿರತೆ ಸೆರೆ ಹಿನ್ನಲೆ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯನ್ನ ಭದ್ರ ದಟ್ಟಾರಣ್ಯದಲ್ಲಿ ಬಿಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.