ದಾವಣಗೆರೆ: ಇಂದಿನಿಂದ ಫೆ 9 ರ ತನಕ ಮೂರು ದಿನ ರಾಷ್ಟ್ರೀಯ ಅಕ್ಷರ ಹಬ್ಬ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ, ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ದಾವಣಗೆರೆ: ಇಂದಿನಿಂದ ಫೆ 9 ರ ತನಕ ಮೂರು ದಿನ ರಾಷ್ಟ್ರೀಯ ಅಕ್ಷರ ಹಬ್ಬ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ, ಇಲ್ಲಿದೆ ವಿವರ

ದಾವಣಗೆರೆ: ಇಂದಿನಿಂದ ಫೆ 9 ರ ತನಕ ಮೂರು ದಿನ ರಾಷ್ಟ್ರೀಯ ಅಕ್ಷರ ಹಬ್ಬ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ, ಇಲ್ಲಿದೆ ವಿವರ

ರಾಷ್ಟ್ರೀಯ ಅಕ್ಷರ ಹಬ್ಬ: ದಾವಣಗೆರೆಯ ಶ್ಯಾಮನೂರು ರಸ್ತೆಯ ಎಂಬಿಎ ಕಾಲೇಜು ಅಡಿಟೋರಿಯಂನಲ್ಲಿ ಇಂದಿನಿಂದ ಮೂರು ದಿನ 'ರಾಷ್ಟ್ರೀಯ ಅಕ್ಷರ ಹಬ್ಬ' ನಡೆಯಲಿದೆ. ದಾವಣಗೆರೆ ಲಿಟರರಿ ಫೋರಂ ಮತ್ತು ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆಯ ಸಹಯೋಗದ ಕಾರ್ಯಕ್ರಮ ಇದಾಗಿದ್ದು, ಎಷ್ಟು ಗಂಟೆಗೆ ಏನು ಕಾರ್ಯಕ್ರಮ ಎಂಬಿತ್ಯಾದಿ ವಿವರ ಇಲ್ಲಿದೆ.

ದಾವಣಗೆರೆಯಲ್ಲಿ ಇಂದಿನಿಂದ ಫೆ 9 ರ ತನಕ ಮೂರು ದಿನ ರಾಷ್ಟ್ರೀಯ ಅಕ್ಷರ ಹಬ್ಬ
ದಾವಣಗೆರೆಯಲ್ಲಿ ಇಂದಿನಿಂದ ಫೆ 9 ರ ತನಕ ಮೂರು ದಿನ ರಾಷ್ಟ್ರೀಯ ಅಕ್ಷರ ಹಬ್ಬ (PC -Mamatha Arsikere / Pexels)

ರಾಷ್ಟ್ರೀಯ ಅಕ್ಷರ ಹಬ್ಬ: ದಾವಣಗೆರೆ ಲಿಟರರಿ ಫೋರಂ ಮತ್ತು ಅರಸೀಕೆರೆಯ ಅರಸೀ ಸಾಂಸ್ಕೃತಿಕ ವೇದಿಕೆಯ ಸಹಯೋಗದಲ್ಲಿ ದಾವಣಗೆರೆಯ ಶ್ಯಾಮನೂರು ರಸ್ತೆಯ ಎಂಬಿಎ ಕಾಲೇಜು ಅಡಿಟೋರಿಯಂನಲ್ಲಿ ಇಂದಿನಿಂದ ಮೂರು ದಿನ 'ರಾಷ್ಟ್ರೀಯ ಅಕ್ಷರ ಹಬ್ಬ' ನಡೆಯಲಿದೆ. ಇಂದು (ಫೆ 7) ಬೆಳಗ್ಗೆ 10.30 ರಿಂದ 12.30ರ ತನಕ ಉದ್ಘಾಟನೆ ನಡೆಯಲಿದ್ದು, ಸಾಹಿತಿ, ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಉದ್ಘಾಟಿಸಲಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ದೂರದರ್ಶನದ ಚಂದನ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥೆ ಆರತಿ ಎಚ್‌.ಎನ್‌., ಕತೆಗಾರ್ತಿ ಚಾಂದಿನಿ, ಚಿಂತಕ ಪ್ರೊ.ಎ.ಬಿ. ರಾಮಚಂದ್ರಪ್ಪ, ಪತ್ರಕರ್ತ ಬಿ.ಎನ್. ಮಲ್ಲೇಶ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ರಾಷ್ಟ್ರೀಯ ಅಕ್ಷರ ಹಬ್ಬದ ಉದ್ಘಾಟನಾ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಫೆ 9ರ ತನಕ ಮೂರು ದಿನಗಳ ಕಾಲ ರಾಷ್ಟ್ರೀಯ ಅಕ್ಷರ ಹಬ್ಬದಲ್ಲಿ ಕಥಾ ಸಮಯ, ಕವಿ ಸಮಯ, ರಂಗಸಮಯ ಸೇರಿ 9 ಗೋಷ್ಠಿಗಳು ನಡೆಯಲಿವೆ. ಪುಸ್ತಕ ಬಿಡುಗಡೆ ಹಾಗೂ ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಲಿದೆ. ದೇಶ ಹಾಗೂ ರಾಜ್ಯದ ವಿವಿಧೆಡೆಯಿಂದ ಸಾಹಿತಿಗಳು, ಬರಹಗಾರರು, ಚಿಂತಕರು ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಅಕ್ಷರ ಹಬ್ಬ - ಯಾವ ದಿನ ಏನು ಕಾರ್ಯಕ್ರಮ

ಫೆ 7 ರಂದು ಅಪರಾಹ್ನ 1.30ರಿಂದ 3 ಗಂಟೆ ತನಕ - ಕಥಾ ಸಮಯ

ಕೇಶವರೆಡ್ಡಿ ಹಂದ್ರಾಳ ಸಮನ್ವಯ ಮಾಡಲಿದ್ದು, ಕನ್ನಡ ಅನುವಾದದ ಓದನ್ನು ಶೃತಿ ಕೆ.ಸಿ. ಮಾಡಲಿದ್ದಾರೆ. ಶ್ರೀದೇವಿ ಕಳಸದ, ಆನಂದ ಋಗ್ವೇದಿ, ರಾಜಿ ತಾಹಿರ್‌ (ಕಶ್ಮೀರಿ), ಮುದಿರಾಜ್ ಬಾಣದ, ರೇಣುಕಾ ಕೊಡಗುಂಟಿ ಉಪಸ್ಥಿತರಿದ್ದು, ಶರಣಬಸವ ಕೆ ಗುಡದಿನ್ನಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ಅಪರಾಹ್ನ 3 ರಿಂದ 4.15ರ ತನಕ ರಂಗ ಸಮಯ

ಹಿರಿಯ ರಂಗಕರ್ಮಿ ಜಯಲಕ್ಷ್ಮಿ ಪಾಟೀಲ್ ಸಮನ್ವಯ ಮಾಡಿದರೆ, ರಂಗ ಕರ್ಮಿಗಳಾದ ಮಿತಾ ಮಿತ್ರ (ದೆಹಲಿ) , ಭರತ್ ಡಿಂಗ್ರಿ, ಟಿ ಎಚ್ ಲವ ಕುಮಾರ್, ಮಹಿಪಾಲ್ ರೆಡ್ಡಿ ಮುನ್ನೂರು ರಂಗ ಸಮಯದಲ್ಲಿ ಉಪಸ್ಥಿತರಿರಲಿದ್ದಾರೆ.

ಸಂಜೆ 4.15 ರಿಂದ ಕವಿಗೋಷ್ಠಿ

ಹಾವೇರಿಯ ಹಿರಿಯ ಕವಿ ಸತೀಶ್ ಕುಲಕರ್ಣಿ ಅವರು ಸಮನ್ವಯ ನೋಡಿಕೊಂಡರೆ, ಪಿ ಚಂದ್ರಿಕಾ ಆಶಯ ನುಡಿ ನೆರವೇರಿಸಲಿದ್ದಾರೆ. ಕವಿಗಳಾದ ಡಾ ಶಿವ ಕುಮಾರ್ ಎಂ. ಈ, ಮಧು ಬಿರಾದಾರ್‌, ಮಲ್ಲಮ್ಮ ಯಾಟಗಲ್, ರಾಮಪ್ಪ ಕೋಟಿಹಾಳ್‌, ಶಿಲ್ಪ ಮ್ಯಾಗೇರಿ, ರಾಮಾಂಜಿ, ವಿಶಾಲ್ ಮಾಸ್ಟರ್‌, ಶಮೀಮ ಕುತ್ತಾರ್‌, ಸಂತೋಷ ಅಂಗಡಿ, ರಾಘವೇಂದ್ರ ಕುಪ್ಪೆಲೂರು, ರಮ್ಯಾ ಮೂರ್ನಾಡು, ವೀರೇಶ್ ನಾಯಕ್, ರವಿರಾಜ್ ಸಾಗರ, ಡಾ ಜಿ ಸೋಮಣ್ಣ, ದೀಪಾ ಬುದ್ಧೆ, ಪಾಪುಗುರು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ದಾಕ್ಷಾಯಿಣಿ ಬಿರಾದಾರ್‌, ಕೊಟ್ರೇಶ್ ಕೊಟ್ಟೂರು, ಸಂತೋಷ್ ನಾಯಕ್‌ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಾರೆ. ಹೊ. ನ. ನೀಲಕಂಠೇಗೌಡ, ಅಲ್ಲಾಗಿರಿರಾಜ್ ಉಪಸ್ಥಿತಿ ಇರಲಿದೆ.

ಫೆ 8 ರಂದು ಕವಿ ಸಮಯ, ಮೌಖಿಕ ಸಾಹಿತ್ಯದ ಕಾಣ್ಕೆಗಳು

ಬೆಳಿಗ್ಗೆ 9 ರಿಂದ 11 -ಕವಿ ಸಮಯ

ಡಾ ಪದ್ಮ ಟಿ ಚಿನ್ಮಯಿ ಅವರು ಸಮನ್ವಯ ಮಾಡಲಿದ್ದು, ದಾದಾಪೀರ್‌ ನವಿಲೇಹಾಳ್ ಆಶಯ ನುಡಿಗಳನ್ನಾಡಲಿದ್ದಾರೆ. ಅಬ್ದುಲ್ ಹೈ ತೋರಣಗಲ್ಲು ಉಪಸ್ಥಿತರಿರಲಿದ್ದಾರೆ. ಕವಿಗಳಾದ ಮರ್ಸಿ ಮಾರ್ಗರೇಟ್‌, ಭಾರ್ಗವ್ ಠಕ್ಕರ್ (ಗುಜರಾತಿ), ಪ್ರಖೀನ್ ಕಬಿ (ಒಡಿಯಾ), ಶ್ರೀದೇವಿ ಕೆರೆಮನೆ, ರಮೇಶ್ ಗಬ್ಬೂರ್ ಕವಿ ಸಮಯದಲ್ಲ ಭಾಗವಹಿಸುವರು. ಶಿವಲಿಂಗಪ್ಪ ಹಂದ್ಯಾಳ್ ಮತ್ತು ಮಮತಾ ಅರಸೀಕೆರೆ ಕನ್ನಡ ಓದು ನಡೆಸಿಕೊಡಲಿದ್ದಾರೆ.

ಪೂರ್ವಾಹ್ನ 11 ರಿಂದ ಮೌಖಿಕ ಸಾಹಿತ್ಯದ ಕಾಣ್ಕೆಗಳು ಗೋಷ್ಠಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಮನ್ವಯ ನಡೆಸಲಿದ್ದಾರೆ. ಡಾ ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ ಮುಮ್ತಾಜ್ ಬೇಗಂ, ಸುಧಾ ಚಿದಾನಂದ ಗೌಡ, ಕವಿತಾ ಕರ್ಮಾಕರ್ (ಅಸ್ಸಾಮಿ), ಡಾ ಎಚ್ ಅರ್ ಸ್ವಾಮಿ, ಡಾ ಶುಭಾ ಮರವಂತೆ ಮಾತುಕತೆ ನಡೆಸಲಿದ್ದಾರೆ. ಶ್ರೀ ಹರ್ಷ ಕನ್ನಡ ಓದು ನಡೆಸಲಿದ್ದಾರೆ.

ಅಪರಾಹ್ನ 2 ರಿಂದ 3.30ರ ತನಕ ಕವಿ ಸಮಯ

ಡಾ ಪದ್ಮಿನಿ ನಾಗರಾಜು ಅವರು ಕವಿ ಸಮಯದ ಸಮನ್ವಯ ಮಾಡಲಿದ್ದಾರೆ. ವಿದ್ಯಾರಶ್ಮಿ ಪೆಲತ್ತಡ್ಕ ಆಶಯ ನುಡಿಗಳನ್ನಾಡಲಿದ್ದಾರೆ. ಕವಿಗಳಾದ ಡಾ ಯೋಗಿನಿ ಕೆಲ್ಮೆಯಾ (ಗುಜರಾತಿ), ನವನಾಥ್ ಖಾರತ್ (ಮರಾಠಿ), ಗೋಪಾಲ ತ್ರಾಸಿ (ಮುಂಬಯಿ), ಡಾ ಬೇಲೂರು ರಘುನಂದನ್, ವಿಲ್ಸನ್ ಕಟೀಲ್ ಕವಿ ಸಮಯದಲ್ಲಿ ಮಾತನಾಡಲಿದ್ದಾರೆ. ಡಾ. ಸದಾಶಿವ ದೊಡ್ಮನಿ ಉಪಸ್ಥಿತರಿರಲಿದ್ದಾರೆ. ಶೃತಿ ಕೆ.ಸಿ. ಅನುವಾದಿತ ಕವಿತೆಗಳನ್ನು ಓದುವರು.

ಸಂಜೆ 3.45 ರಿಂದ 5 ಗಂಟೆ ತನಕ ಕವಿ ಸಮಯ

ಶ್ರೀದೇವಿ ಕಳಸದ ಅವರು ಕವಿ ಸಮಯದ ಸಮನ್ವಯ ಮಾಡಿದರೆ ನಾಗರೇಖ ಗಾಂವಕರ್ ಆಶಯ ನುಡಿಗಳನ್ನಾಡಲಿದ್ದಾರೆ. ಜಾಜಿ ದೇವೇಂದ್ರಪ್ಪ ಉಪಸ್ಥಿತರಿರಲಿದ್ದು, ಕವಿಗಳಾದ ಶೋಖಿಯಾ ಜಾನ್ (ಕಶ್ಮೀರಿ), ಮನೋಜ್ ಬೋಗಾಟಿ (ಬಂಗಾಳಿ), ಮಂಜುಳಾ ಹುಲಿಕುಂಟೆ, ಡಾ ಸುಷ್ಮಾ ಶಂಕರ್ (ಮಲಯಾಳಂ) ಕವಿ ಸಮಯದಲ್ಲಿ ಮಾತನಾಡುವರು. ಅನುವಾದಿತ ಕವಿತೆಗಳನ್ನು ಉದಯ ಇಟಗಿ, ಜಯಲಕ್ಷ್ಮೀ ಪಾಟೀಲ್ ಓದಲಿದ್ಧಾರೆ.

ಸಂಜೆ 5 ರಿಂದ 6.30ರ ತನಕ ಕವಿಗೋಷ್ಠಿ

ಹೇಮಲತಾ ವಸ್ತ್ರದ ಅವರು ಕವಿಗೋಷ್ಠಿಯ ಸಮನ್ವಯ ಮಾಡಲಿದ್ದಾರೆ. ಡಾ ಸುಜಾತಾ ಚಲವಾದಿ ಆಶಯ ನುಡಿಗಳನ್ನಾಡಿದರೆ, ಪಿ ಆರ್ ವೆಂಕಟೇಶ್ ಉಪಸ್ಥಿತರಿರಲಿದ್ಧಾರೆ. ಕವಿಗಳಾದ ಆಶಾ ಜಗದೀಶ್‌, ಎ ಎಸ್ ಮಕಾನದಾರ್, ನಾಗರೇಖಾ ಗಾಂವಕರ್, ಆನಂದ್ ಎಸ್ ಗೊಬ್ಬಿ, ಟಿ ಸತೀಶ್ ಜವರೇಗೌಡ, ನಾಗರಾಜ್ ಕೋರಿ, ಅಜಯ್ ಬಣಕಾರ್‌, ಮಹೇಶ್ ಬಳ್ಳಾರಿ, ಸೋಮು ಕುದರಿಹಾಳ, ಸಿದ್ದು ಸತ್ಯಣ್ಣವರ, ವೀರೇಂದ್ರ ರಾವಿಹಾಳ್‌, ದೀಪಾ ಗೋನಾಳ್‌, ಡಾ ವಿಜಯಮಾಲಾ ನಾಗನೂರಿ, ಸಂಘಮಿತ್ರೆ ನಾಗರಘಟ್ಟ, ಮಾಲತಿ ಭಟ್, ಚೇತನ್ ನಾಗರಾಳ, ಹರ್ಷಿಯಾ ಭಾನು, ಲಕ್ಷ್ಮೀಕಾಂತ್ ಮಿರಜ್‌ಕರ್‌ ಭಾಗವಹಿಸಲಿದ್ದಾರೆ.

ಫೆ 9 ರಂದು ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರಧಾನ

ಬೆಳಗ್ಗೆ 10 ರಿಂದ 11ರ ತನಕ ಪುಸ್ತಕಗಳ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಮಲ್ಲಿಕಾರ್ಜುನ ಶೆಲ್ಲಿಕೇರಿ, ಕಂನಾಡಿಗ ನಾರಾಯಣ, ಹನಮಂತ ಹಾಲಿಗೇರಿ, ಶಾಂತಲಾ ದಾಮ್ಲೆ, ಮಮತಾ ಕೆ ಎನ್‌ ಅವರು ಕೃತಿಕಾರರಾದ ಡಾ ದಸ್ತಗೀರ್ ಸಾಬ್‌ದಿನ್ನಿ, ಶ್ರೀ ಹರ್ಷ ಸಾಲಿಮಠ, ಮಮತಾ ಅರಸೀಕೆರೆ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಜಿ ಎನ್ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪೂರ್ವಾಹ್ನ 11.15 ರಿಂದ ಅಪರಾಹ್ನ 1 ಗಂಟೆ ತನಕ ವಿಚಾರ ಗೋಷ್ಠಿ

ವರ್ತಮಾನ ಸಾಹಿತ್ಯದ ಸೃಜನಶೀಲ ಬಿಕ್ಕಟ್ಟುಗಳು ಕುರಿತಾದ ವಿಚಾರ ಗೋಷ್ಠಿಯಲ್ಲಿ ಡಾ ನೆಲ್ಲುಕುಂಟೆ ವೆಂಕಟೇಶ್ ಸಮನ್ವಯ ಮಾಡಲಿದ್ದು, ಡಾ ತಾರಿಣಿ ಶುಭದಾಯಿನಿ, ಬಿ ಎಲ್ ರಾಜು, ಸುಶೀರ್ ಸೈನ್‌ (ಒಡಿಯಾ), ಅನಿಲ್ ಧ್ಯಾನಿ (ತೆಲುಗು), ಹನುಮಂತ್ ಹಾಲಿಗೇರಿ ಮಾತುಕತೆ ನಡೆಸುವರು. ಲಿಂರಾಜ್ ಸೊಟ್ಟಪ್ಪನವರ್ ಕನ್ನಡ ಓದು ನಡೆಸಿಕೊಡಲಿದ್ದಾರೆ.

ಫೆ 9 ರಂದು ರಾಷ್ಟ್ರೀಯ ಅಕ್ಷರ ಹಬ್ಬ ಸಮಾರೋಪ

ಫೆ.9ರಂದು ಅಪರಾಹ್ನ 2.30 ರಿಂದ ಸಂಜೆ 4 ಗಂಟೆ ತನಕ ರಾಷ್ಟ್ರೀಯ ಅಕ್ಷರ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ, ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಸಮಾರೋಪ ನುಡಿಗಳನ್ನಾಡಲಿದ್ದಾರೆ. 'ಪ್ರಜಾವಾಣಿ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ರೈತ ಮುಖಂಡ ತೇಜಸ್ವಿ ಪಟೇಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಣಿ ಹುಡೇದ ಉಪಸ್ಥಿತರಿರಲಿದ್ದು, ವಿಜಯ ಕರ್ನಾಟಕ ಪತ್ರಿಕೆಯ ದಾವಣಗೆರೆ, ಚಿತ್ರದುರ್ಗ ಬ್ಯೂರೋ ಮುಖ್ಯಸ್ಥ ಸದಾನಂದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.

Whats_app_banner