Davanagere News: ಸನಾತನ ಧರ್ಮ ನಿರ್ಮೂಲನೆ ಅಸಾಧ್ಯ; ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಹಾಸ
ಕನ್ನಡ ಸುದ್ದಿ  /  ಕರ್ನಾಟಕ  /  Davanagere News: ಸನಾತನ ಧರ್ಮ ನಿರ್ಮೂಲನೆ ಅಸಾಧ್ಯ; ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಹಾಸ

Davanagere News: ಸನಾತನ ಧರ್ಮ ನಿರ್ಮೂಲನೆ ಅಸಾಧ್ಯ; ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಹಾಸ

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸನಾತನ ಧರ್ಮವನ್ನು ನಾಶ ಮಾಡುತ್ತೇವೆ ಎನ್ನುವ ಹೇಳಿಕೆ ಇದೇ ಮೊದಲಲ್ಲ.

ಸನಾತನ ಧರ್ಮ ನಿರ್ಮೂಲನೆ ಅಸಾಧ್ಯ; ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಹಾಸ
ಸನಾತನ ಧರ್ಮ ನಿರ್ಮೂಲನೆ ಅಸಾಧ್ಯ; ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಹಾಸ

ದಾವಣಗೆರೆ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದವರೇ ಸರ್ವನಾಶ ಆಗಿರುವುದನ್ನು ಈಗಾಗಲೇ ಜನರೇ ನೋಡಿದ್ದಾರೆ ಎಂದು ದಾವಣಗೆರೆಯ ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಹಾಸ ಅಸಮಾಧಾನ ಹೊರಹಾಕಿದ್ದಾರೆ.

ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸನಾತನ ಧರ್ಮವನ್ನು ನಾಶ ಮಾಡುತ್ತೇವೆ ಎನ್ನುವ ಹೇಳಿಕೆ ಇದೇ ಮೊದಲಲ್ಲ. ಇಂಥ ಹಲವರು ಈ ರೀತಿಯ ಹೇಳಿಕೆ ನೀಡಿ ತಾವೆ ಸರ್ವನಾಶ ಆಗಿರುವುದನ್ನು ಜಗತ್ತು ಈಗಾಗಲೇ ಕಂಡಿದೆ. ಸನಾತನ ಧರ್ಮಕ್ಕೆ ಅಳಿವೆಂಬುದೇ ಇಲ್ಲ ಎಂದವರು ಹೇಳಿದರು.

ಹಿಂದೆ ಹಿರಣ್ಯಾಕ್ಷ, ಹಿರಣ್ಯ ಕಶ್ಯಪುನಂತ ಅಸುರರೇ ಸುರರನ್ನು ನಾಶ ಮಾಡಲು ಮುಂಧಾದರು. ಆದರೆ, ಅದರ ಕಥೆ ಏನಾಯಿತೆಂಬುದು ತಿಳಿದಿರುವ ವಿಚಾರ. ಅಚರಂತೆ ಈಗ ಸನಾತನ ಧರ್ಮಕ್ಕೆ ಅಂತ್ಯ ಹಾಡುವುದಾಗಿ ಮಾತನಾಡುವವರು ಕೂಡ ನಾಶವಾಗುತ್ತಾರೆ ಎಂದರು.

ಭಗವಂತನ ಸೇವೆ ಮಾಡುವುದೇ, ಯಾರಿಗೂ ಕೆಡುಕನ್ನು ಬಯಸವೇ ಇರುವುದೇ ಸನಾತನ ಧರ್ಮದ ಮೂಲ ಅರ್ಥ, ಇದನ್ನು ತಿಳಿಯದವರು ಧರ್ಮದ ಕುರಿತು ಮನಬಂದಂತೆ ಮಾತನಾಡುವುದು ಸಹಜ. ಧರ್ಮದಲ್ಲಿ ಅಸ್ಪೃಶ್ಯತೆ ಎಂಬ ಕಪ್ಪುಚುಕ್ಕೆ ಇರಬಹುದು ಅದರ ಹೊರತಾಗಿ ವೃತ್ತಿ, ಮಾಡುವ ಪುಣ್ಯ ಕೆಲಸಗಳಿಂದ ಮನುಷ್ಯ ಗುರುತಿಸಿಕೊಳ್ಳುತ್ತಾನೆ ಹೊರತು ಜಾತಿಯಿಂದಲ್ಲ ಎಂಬುದನ್ನು ತೆಗೆದುಹಾಕುವಂತಿಲ್ಲ ಎಂದರು.

ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ

ಇಸ್ಕಾನ್‌ನಲ್ಲಿ ಇದೇ ಸೆ.7 ಮತ್ತು 8ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ನಗರದ ಎಂಸಿಸಿ ಎ ಬ್ಲಾಕ್‌ನಲ್ಲಿರುವ ತೊಗಟವೀರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸೆ.7 ರಂದು ಬೆಳಿಗ್ಗೆ 6ರಿಂದ ಸಂಕೀರ್ತನೆ, ಶ್ರೀ ರಾಧಾ-ಕೃಷ್ಣ ಅಭಿಷೇಕ, ಲೀಲಾ ಪುರುಷೋತ್ತಮ ಅವರಿಂದ ನೃತ್ಯೋಲ್ಲಾಸ, ರಾತ್ರಿ 8:30ಕ್ಕೆ ಪ್ರವಚನ, 9:30ಕ್ಕೆ ತೊಟ್ಟಿಲೋತ್ಸವ, ರಾತ್ರಿ 10 ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹಾಮಂಗಳಾರತಿ ಇದೆ ಹಾಗೂ ಸೆ.8ರಂದು ಶ್ರೀಲ ಪ್ರಭುಪಾದರ ವ್ಯಾಸ ಪೂಜಾ ಮಹೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.

Whats_app_banner