ಬ್ಯಾಂಕ್‌ ದರೋಡೆ ಮಾಡಿ 17 ಕೆ ಜಿ ಬಂಗಾರ ಕದ್ದ ದರೋಡೆಕೋರರನ್ನು ಬಂಧಿಸಿದ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಬ್ಯಾಂಕ್‌ ದರೋಡೆ ಮಾಡಿ 17 ಕೆ ಜಿ ಬಂಗಾರ ಕದ್ದ ದರೋಡೆಕೋರರನ್ನು ಬಂಧಿಸಿದ ಪೊಲೀಸರು

ಬ್ಯಾಂಕ್‌ ದರೋಡೆ ಮಾಡಿ 17 ಕೆ ಜಿ ಬಂಗಾರ ಕದ್ದ ದರೋಡೆಕೋರರನ್ನು ಬಂಧಿಸಿದ ಪೊಲೀಸರು

ದಾವಣಗೆರೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನ್ಯಾಮತಿ ಶಾಖೆಯಿಂದ ಕಳುವಾಗಿದ್ದ ಚಿನ್ನವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ದೊಡ್ಡ ದೊಡ್ಡ ಬ್ಯಾಂಕ್‌ ದರೋಡೆ ಮಾಡುತ್ತಿದ್ದ ದರೋಡೆಕೋರರನ್ನು ಬಂಧಿಸಿದ್ದಾರೆ.

17 ಕೆ ಜಿ ಬಂಗಾರ ಕದ್ದ ದರೋಡೆಕೋರರನ್ನು ಬಂಧಿಸಿದ ಪೊಲೀಸರು
17 ಕೆ ಜಿ ಬಂಗಾರ ಕದ್ದ ದರೋಡೆಕೋರರನ್ನು ಬಂಧಿಸಿದ ಪೊಲೀಸರು

ದಾವಣಗೆರೆ: 2024ರ ಅಕ್ಟೋಬರ್ 28 ರಂದು ದಾವಣಗೆರೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನ್ಯಾಮತಿ ಶಾಖೆಯಿಂದ ಕಳುವಾಗಿದ್ದ ಚಿನ್ನವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕರ್ನಾಟಕ ಪೊಲೀಸರು ಆರು ಮಂದಿ ದರೋಡೆಕೋರರ ತಂಡವನ್ನು ಹಿಡಿದು ಬಂಧಿಸಿದ್ದಾರೆ. 17.7 ಕೆಜಿ ಕದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ಮಧುರೈ ಜಿಲ್ಲೆಯ ಉಸಲಂಪಟ್ಟಿ ಪಟ್ಟಣದ ಬಾವಿಯಲ್ಲಿ ಈ ಚಿನ್ನ ಪತ್ತೆಯಾಗಿದೆ. ಕದ್ದ ಚಿನ್ನದ ಆಭರಣಗಳೊಂದಿಗಿನ ಲಾಕರ್ ಬಾವಿಯಲ್ಲಿ ಪತ್ತೆಯಾಗಿದೆ.

ಚಿನ್ನ ಕದ್ದ ಆರೋಪಿಗಳನ್ನು ವಿಜಯಕುಮಾರ್ (30), ಆತನ ಸಹೋದರ ಅಜಯ್‌ಕುಮಾರ್ (28), ಅಭಿಷೇಕ (23), ಚಂದ್ರು (23), ಮಂಜುನಾಥ್ (32) ಮತ್ತು ಪರಮಾನಂದ (30) ಎಂದು ಗುರುತಿಸಲಾಗಿದೆ. ತನಿಖೆಯ ಸಮಯದಲ್ಲಿ, ದಕ್ಷಿಣ ಭಾರತದಲ್ಲಿ ಹಲವಾರು ಬ್ಯಾಂಕ್ ದರೋಡೆಗಳನ್ನು ನಡೆಸುತ್ತಿದ್ದ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಕಕ್ರಾಲಾದಿಂದ ಬ್ಯಾಂಕ್ ದರೋಡೆಕೋರರ ಮತ್ತೊಂದು ತಂಡವನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದು ವಾರದ ಬೇಸಿಗೆ ಶಿಬಿರ ಆಯೋಜಿಸಿದ ತೇಜಸ್ವಿ ಸೂರ್ಯ; 2500 ಮಕ್ಕಳು ಭಾಗಿ

ಜಯ್‌ಕುಮಾರ್ ಮತ್ತು ಅಜಯ್‌ಕುಮಾರ್ ಸಹೋದರ ಮತ್ತು ಪರಮಂದ ಅವರ ಸಹೋದರಿಯ ಪತಿ. ಈ ಮೂವರು ಸಹ ಮೂಲತಃ ತಮಿಳುನಾಡಿನವರು. ಹಲವು ವರ್ಷಗಳಿಂದ ನ್ಯಾಮತಿ ಎಂಬ ಊರಿನಲ್ಲಿ ಸಿಹಿತಿಂಡಿಗಳ ವ್ಯಾಪಾರ ನಡೆಸುತ್ತಿದ್ದರು. ಇತರ ಮೂವರು ಆರೋಪಿಗಳಾದ ಅಭಿಷೇಕ, ಚಂದ್ರು ಮತ್ತು ಮಂಜುನಾಥ್ ನ್ಯಾಮತಿಯವರೇ ಆಗಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರಂಭದಲ್ಲಿ, ದರೋಡೆಯಲ್ಲಿ ಕಾಕ್ರಾಲಾ ಗ್ಯಾಂಗ್ ಭಾಗಿಯಾಗಿದೆ ಎಂದು ಪೊಲೀಸರು ತೀರ್ಮಾನಿಸಿದ್ದರು.

ಕಕ್ರಾಲಾ ಮತ್ತು ನೆರೆಯ ಪಟ್ಟಣಗಳಲ್ಲಿ ಸುಮಾರು ಐದರಿಂದ ಆರು ಬ್ಯಾಂಕ್ ಅಪರಾಧಿಗಳ ತಂಡಗಳಿವೆ. ದೇಶಾದ್ಯಂತ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕಳೆದ ಒಂದು ದಶಕದಿಂದ ಬ್ಯಾಂಕ್ ಕಳ್ಳತನ ಮತ್ತು ದರೋಡೆಗಳನ್ನು ಈ ಗ್ಯಾಂಗ್ ಮಾಡುತ್ತಿದೆ. ಇದರಲ್ಲಿ ನವೆಂಬರ್ 2024 ರಲ್ಲಿ ವಾರಂಗಲ್‌ನ ರಾಯಪರಥಿಯಲ್ಲಿರುವ ಎಸ್‌ಬಿಐ ಶಾಖೆಯಿಂದ ಚಿನ್ನ ಕಳ್ಳತನವೂ ಸೇರಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಕಕ್ರಾಲಾ ಗ್ಯಾಂಗ್‌ನ ಕಾರ್ಯಾಚರಣೆಯ ವಿಧಾನವು ನ್ಯಾಮತಿ ಬ್ಯಾಂಕ್ ಕಳ್ಳತನದೊಂದಿಗೆ ಹೆಚ್ಚಿನ ಸಾಮ್ಯತೆ ಹೊಂದಿತ್ತು. ಯಾಕೆಂದರೆ ಎರಡೂ ದರೋಡೆಗಳು ಸಹ ದೊಡ್ಡ ಪ್ರಮಾಣದ್ದಾಗಿತ್ತು. ದೊಡ್ಡ ದೊಡ್ಡ ಬ್ಯಾಂಕ್‌ಗಳನ್ನೇ ಗುರಿಯಾಗಿಸಿಕೊಂಡು ಈ ತಂಡಗಳು ಕಳ್ಳತನ ನಡೆಸುತ್ತಿದ್ದವು. ಇದಲ್ಲದೆ, ಕಿಟಕಿಯ ಮೂಲಕ ಪ್ರವೇಶ, ಗ್ಯಾಸ್ ಕಟ್ಟರ್‌ಗಳ ಬಳಕೆ ಮಾಡುತ್ತಿದ್ದರು. ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಿ ಕಳುವು ಮಾಡುತ್ತಿದ್ದರು.

ನವೆಂಬರ್ 2024 ರಿಂದ ಫೆಬ್ರವರಿ 2024 ರವರೆಗೆ, ತನಿಖಾ ತಂಡಗಳು ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ, ಮುಖ್ಯವಾಗಿ ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶದಾದ್ಯಂತ ಈ ಗ್ಯಾಂಗ್ ಸದಸ್ಯರನ್ನು ಬಂಧಿಸಲು ಪ್ರಯತ್ನಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಗಳ ಮಾಹಿತಿಯ ಆಧಾರದ ಮೇಲೆ, ಈ ತಿಂಗಳ ಆರಂಭದಲ್ಲಿ ಕಾಕ್ರಾಲಾ ಗ್ಯಾಂಗ್‌ನ ಐದು ಸದಸ್ಯರನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುಡ್ಡು ಕಾಲಿಯಾ, ಅಸ್ಲಂ, ಹಜರತ್ ಅಲಿ, ಕಮ್ರುದ್ದೀನ್ ಮತ್ತು ಬಾಬು ಸಹನ್ ಎಂಬುವವರನ್ನು ಬಂಧಿಸಿದ್ದಾರೆ.

ಕಕ್ರಾಲಾ ಗ್ಯಾಂಗ್ ಬಂಧನ

ಉತ್ತರ ಪ್ರದೇಶದ ಕಕ್ರಾಲಾ ಗ್ಯಾಂಗ್ ಸದಸ್ಯರು 2014 ಮತ್ತು 2024 ರ ನಡುವೆ ಕರ್ನಾಟಕದಲ್ಲಿ ಹಲವಾರು ಆಸ್ತಿ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದರು. ಅವುಗಳಲ್ಲಿ ಗಮನಾರ್ಹವಾದವುಗಳೆಂದರೆ 2022 ರ ನವೆಂಬರ್‌ನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್, ಹೊಸಹಳ್ಳಿ ಶಾಖೆಯಿಂದ 15 ಕೆಜಿ ಚಿನ್ನ ದರೋಡೆ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್, ಬೇವೂರು ಶಾಖೆಯಿಂದ 4 ಕೆಜಿ ಚಿನ್ನ ದರೋಡೆ ಮಾಡಿರುವುದು ಎಂದು ಪೊಲೀಸರು ತಿಳಿಸಿದ್ದಾರೆ.