ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದಾವಣಗೆರೆಯಿಂದ 15 ಕೆಜಿ ಬೆಳ್ಳಿ ಇಟ್ಟಿಗೆ ಸಮರ್ಪಣೆ; ಇದರ ಹಿಂದಿದೆ 1990ರ ರಕ್ತಸಿಕ್ತ ಕಥೆ
ಕನ್ನಡ ಸುದ್ದಿ  /  ಕರ್ನಾಟಕ  /  ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದಾವಣಗೆರೆಯಿಂದ 15 ಕೆಜಿ ಬೆಳ್ಳಿ ಇಟ್ಟಿಗೆ ಸಮರ್ಪಣೆ; ಇದರ ಹಿಂದಿದೆ 1990ರ ರಕ್ತಸಿಕ್ತ ಕಥೆ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದಾವಣಗೆರೆಯಿಂದ 15 ಕೆಜಿ ಬೆಳ್ಳಿ ಇಟ್ಟಿಗೆ ಸಮರ್ಪಣೆ; ಇದರ ಹಿಂದಿದೆ 1990ರ ರಕ್ತಸಿಕ್ತ ಕಥೆ

Davangere news: ಗುಂಡೇಟಿನಿಂದ ಸಾವನ್ನಪ್ಪಿದ ಎಂಟು ಜನರ ಹೆಸರನ್ನು ಬೆಳ್ಳಿ ಇಟ್ಟಿಗೆಯ ಮೇಲೆ ಕೆತ್ತಿಸಲಾಗಿದೆ. ಘಟನೆಯ ಹಿನ್ನೆಲೆ ಇಲ್ಲಿದೆ..

ಅಯೋಧ್ಯೆಯ ರಾಮ ಮಂದಿರಕ್ಕೆ ದಾವಣಗೆರೆಯಿಂದ ಬೆಳ್ಳಿ ಇಟ್ಟಿಗೆ ಸಮರ್ಪಣೆ
ಅಯೋಧ್ಯೆಯ ರಾಮ ಮಂದಿರಕ್ಕೆ ದಾವಣಗೆರೆಯಿಂದ ಬೆಳ್ಳಿ ಇಟ್ಟಿಗೆ ಸಮರ್ಪಣೆ

ದಾವಣಗೆರೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀರಾಮನ ಮಂದಿರಕ್ಕೆ ದಾವಣಗೆರೆಯಿಂದ 15 ಲಕ್ಷ ಮೌಲ್ಯದ ಸುಮಾರು 15 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಸಮರ್ಪಿಸಲಾಯಿತು.

ನಗರದ ಶ್ರೀ ಅಭಿನವ ರೇಣುಕಾಮಂದಿರದಲ್ಲಿ ಬೆಳ್ಳಿ ಇಟ್ಟಿಗೆ ಸಮರ್ಪಣಾ ಕಾರ್ಯಕ್ರಮ ಆಯೋಜಿಸುವ ಮೂಲಕ ಹಿಂದೂ ಮುಖಂಡರು, ಶಾಸಕರು, ಸಂಸದರ ನೇತೃತ್ವದಲ್ಲಿ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ರವಾನಿಸಲಾಯಿತು.

ಇದರ ಹಿಂದಿದೆ ರಕ್ತಸಿಕ್ತ ಕಥೆ

1990 ರಲ್ಲಿ ಹಿಂದೂ ಮುಖಂಡ ಶಿವಾಜಿರಾವ್ ಘಾಟ್ಗೆ ಎಂಬ ವ್ಯಕ್ತಿಯು ದಾವಣಗೆರೆಯಲ್ಲಿ ರಾಮಜ್ಯೋತಿ ರಥಯಾತ್ರೆ ಬರುತ್ತದೆ ಎಂದು ಸಂದೇಶ ರವಾನಿಸುವ ವೇಳೆ ಆತನನ್ನು ಮತ್ತೊಂದು ಕೋಮಿನವರು ಬರ್ಬರವಾಗಿ ಹತ್ಯೆಗೈದಿದ್ದರು. ಇದರಿಂದ ಬಹುಸಂಖ್ಯಾತರು ಸಿಡಿದೆದ್ದಿದ್ದರು. ಆಗ ಎರಡು ಕೋಮಿನ ನಡುವೆ ರಾಮಜ್ಯೋತಿ ರಥಯಾತ್ರೆಯಲ್ಲಿ ಗಲಭೆ ನಡೆದಿತ್ತು.

ಅಂದು ಕೋಮುಗಲಭೆಯಲ್ಲಿ ನಡೆದ ಗೋಲಿಬಾರ್ ವೇಳೆ ಶಿವಾಜಿರಾವ್ ಘಾಟ್ಗೆ ಸೇರಿ ಎಂಟು ಜನರು ಮೃತಪಟ್ಟಿದ್ದರು. ಸುಮಾರು 40 ಕ್ಕೂ ಅಧಿಕ ಮಂದಿ ಆ್ಯಸಿಡ್ ದಾಳಿಗೆ ಒಳಗಾದರು, ಹಾಗೂ 70 ಜನರು ಗುಂಡೇಟಿನಿಂದ ಗಾಯಗೊಂಡಿದ್ದರು. ರಾಮಕೃಷ್ಣ ಸಾವಳಗಿ, ಅಂಬರೀಶ, ಚಂದ್ರಶೇಖರ ಶಿಂಧೆ, ದುರುಗಪ್ಪ, ಶಿವಾಜಿರಾವ್ ಘಾಟ್ಗೆ, ಆರ್.ಜಿ. ಶ್ರೀನಿವಾಸ, ಚಿನ್ನಪ್ಪ, ಕೆ.ಹೆಚ್. ನಾಗರಾಜ್ ಇವರುಗಳು ಗುಂಡೇಟಿಗೆ ಬಲಿಯಾಗಿದ್ದರು.

ಗುಂಡೇಟಿನಿಂದ ಸಾವನ್ನಪ್ಪಿದ ಈ ಎಂಟು ಜನರ ಹೆಸರನ್ನು ಬೆಳ್ಳಿ ಇಟ್ಟಿಗೆಯ ಮೇಲೆ ಕೆತ್ತಿಸಲಾಗಿದೆ. ಈ ಇಟ್ಟಿಗೆ ಮಾಡಿಸಲು ಹಿಂದೂಗಳಿಂದ ದೇಣಿಗೆ ಸಂಗ್ರಹಿಸಿ, ಮಹಾರಾಷ್ಟ್ರದ ಕೊಲ್ಲೂರಿನಲ್ಲಿ ಈ ಇಟ್ಟಿಗೆಯನ್ನು ತಯಾರಿಸಲಾಗಿದೆ.

ವರದಿ: ಅದಿತಿ, ದಾವಣಗೆರೆ

Whats_app_banner