ಯುವತಿಯರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ದಾವಣಗೆರೆ ಬಸ್ ಕಂಡಕ್ಟರ್ಗೆ ಬಿತ್ತು ಚಪ್ಪಲಿ ಏಟು VIDEO
ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ ವಿನಯ್ ಜನರಿಂದ, ಮಹಿಳೆಯರಿಂದ ಧರ್ಮದೇಟು, ಚಪ್ಪಲಿ ಏಟು ತಿಂದ ವ್ಯಕ್ತಿ. ಖಾಸಗಿ ಬಸ್ಸಿನಲ್ಲಿ ನಿರ್ವಾಹಕನಾಗಿ, ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈತ ಮಹಿಳೆಯರು, ವಿದ್ಯಾರ್ಥಿನಿಯರ ಜೊತೆಗೆ ಅನುಚಿತ ವರ್ತನೆ ತೋರುತ್ತಿದ್ದ. ಅವರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಸಂದೇಶ ಕಳಿಸುತ್ತಿದ್ದ ಎನ್ನಲಾಗಿದೆ.
ದಾವಣಗೆರೆ: ಯುವತಿಯರಿಗೆ ಕರೆ ಮಾಡಿ ಕಾಡಿಸುತ್ತಿದ್ದ ಬಸ್ ಕಂಡಕ್ಟರ್ ಒಬ್ಬನಿಗೆ ಯುವತಿ ಕುಟುಂಬಸ್ಥರು ಧರ್ಮದೇಟು ಕೊಟ್ಟ ಘಟನೆ ದಾವಣಗೆರೆ ನಗರದ ಪಿ.ಜೆ. ಬಡಾವಣೆಯಲ್ಲಿ ಇಂದು ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ರೆಂಡಿಂಗ್ ಸುದ್ದಿ
ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ ವಿನಯ್ ಜನರಿಂದ, ಮಹಿಳೆಯರಿಂದ ಧರ್ಮದೇಟು, ಚಪ್ಪಲಿ ಏಟು ತಿಂದ ವ್ಯಕ್ತಿ. ಖಾಸಗಿ ಬಸ್ಸಿನಲ್ಲಿ ನಿರ್ವಾಹಕನಾಗಿ, ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈತ ಮಹಿಳೆಯರು, ವಿದ್ಯಾರ್ಥಿನಿಯರ ಜೊತೆಗೆ ಅನುಚಿತ ವರ್ತನೆ ತೋರುತ್ತಿದ್ದ. ಅವರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಸಂದೇಶ ಕಳಿಸುತ್ತಿದ್ದ ಎನ್ನಲಾಗಿದೆ.
ಕಂಡಕ್ಟರ್ ಆಗಿದ್ದ ವಿನಯ್ ಬಸ್ಸಿನಲ್ಲೂ ಮಹಿಳಾ ಪ್ರಯಾಣಿಕರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅಲ್ಲದೇ, ದಾವಣಗೆರೆ ತಾ. ಮಾಯಕೊಂಡ ಹೋಬಳಿಯ ಇಬ್ಬರು ಯುವತಿಯರಿಗೆ ಕರೆ ಮಾಡಿ, ಅಸಭ್ಯವಾಗಿ ವರ್ತನೆ ಮಾಡಿದ್ದನು. ಇದರಿಂದ ರೋಸಿ ಹೋಗಿದ್ದ ಯುವತಿಯರು ತಮ್ಮ ಕುಟುಂಬಸ್ಥರು, ಹಿರಿಯರ ಗಮನಕ್ಕೆ ವಿಚಾರ ತಂದಿದ್ದರು.
ಪದೇ ಪದೇ ಫೋನ್ ಮಾಡಿ ತೊಂದರೆ ಕೊಡುತ್ತಿದ್ದ, ವಿಡಿಯೋ ಕಾಲ್ ಮಾಡುವಂತೆ ಪೀಡಿಸುತ್ತ, ತಾನೂ ವಿಡಿಯೋ ಕಾಲ್ ಮಾಡಿ ಪೀಡಿಸುತ್ತಿದ್ದ. ವಿನಯ್‌ನನ್ನು ಉಪಾಯದಿಂದ ದಾವಣಗೆರೆ ಅಕ್ಕ ಮಹಾದೇವಿ ರಸ್ತೆಗೆ ಕರೆಸಿಕೊಂಡು, ಅಲ್ಲಿಂದ ಎವಿಕೆ ಕಾಲೇಜು ಪಕ್ಕದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಬಳಿ ಕರೆಸಿಕೊಳ್ಳಲಾಗಿತ್ತು.
ಯುವತಿಯರು ತನ್ನನ್ನು ಕರೆಸಿಕೊಳ್ಳುತ್ತಿದ್ದಾರೆಂಬ ಸಾಕಷ್ಟು ನಿರೀಕ್ಷೆಯೊಂದಿಗೆ ಬಂದಿದ್ದ ವಿನಯ್ ಕಾಣಿಸುತ್ತಿದ್ದಂತೆಯೇ ಯುವತಿಯರು ಪಾಲಕರು, ಗ್ರಾಮಸ್ಥರು, ಸ್ಥಳೀಯರು, ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಆತನ ಮೊಬೈಲ್ ಕಸಿದುಕೊಂಡು ಇಟ್ಟುಕೊಂಡ ಪಾಲಕರು ಪೊಲೀಸ್ ಠಾಣೆಗೆ ಹೋಗಿ ಮೊಬೈಲ್ ಕಳುವಾದ ಬಗ್ಗೆ ದೂರು ನೀಡು ಎಂಬುದಾಗಿ ಹೇಳು ಹೇಳುತ್ತಲೇ ಚಪ್ಪಲಿಯಿಂದ ಹೊಡೆಯುತ್ತಾ, ಕಪಾಳ ಮೋಕ್ಷ ಮಾಡುತ್ತಾ ಆತನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವಿನಯ್‌ನ ಹೆತ್ತವರ ಮುಂದೆಯೇ ಹೋಗಿ ಆತನ ವರ್ತನೆ ಬಗ್ಗೆ ದೂರುವುದಾಗಿ ಕೆಲ ಪಾಲಕರು ಹೇಳಿದರು. ದಾರಿಹೋಕರೂ ಸಹ ವಿನಯ್‌ನ ವರ್ತನೆ ಕೇಳಿ, ತಮ್ಮದೂ ಒಂದೆರೆಡು ಒದೆ ಇರಲಿ ಎಂಬುದಾಗಿ ಧರ್ಮದೇಟು ಹಾಕಿ ಹೋಗಿದ್ದಾರೆ.
ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆಟೋ ಚಾಲಕರು, ಸಾರ್ವಜನಿಕರು, ಮಹಿಳೆಯರು, ನೊಂದ ವಿದ್ಯಾರ್ಥಿನಿಯರ ಪಾಲಕರ ಕೈಗೆ ಸಿಕ್ಕ ವಿನಯ್ ಹಣ್ಣುಗಾಯಿ ನೀರುಗಾಯಿ ಆಗುವಂತೆ ಧರ್ಮದೇಟು ತಿಂದಿದ್ದಾನೆ. ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲವಾದರೂ, ಘಟನೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.