ಕನ್ನಡ ಸುದ್ದಿ  /  Karnataka  /  Delhi Aiims New Director From Karnataka: Who Is Doctor M Srinivas Details Here

Delhi AIIMS new Director from Karnataka: ದೆಹಲಿ ಏಮ್ಸ್‌ನ ಹೊಸ ನಿರ್ದೇಶಕ ಕನ್ನಡಿಗ; ಯಾರು ಈ ಡಾ.ಎಂ.ಶ್ರೀನಿವಾಸ್‌?

Delhi AIIMS new Director from Karnataka: ಡಾ ಶ್ರೀನಿವಾಸ್ ಪ್ರಸ್ತುತ ಹೈದರಾಬಾದ್‌ನ ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಆಗಿದ್ದಾರೆ. ಡಾ ಎಂ ಶ್ರೀನಿವಾಸ್ ದೆಹಲಿಯ ಏಮ್ಸ್ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಡಾ ರಣದೀಪ್ ಗುಲೇರಿಯಾ ಅವರ ಅಧಿಕಾರಾವಧಿ ನಿನ್ನೆ ಕೊನೆಗೊಂಡಿದೆ.

ದೆಹಲಿಯ ಏಮ್ಸ್‌ ಮತ್ತು ಒಳಚಿತ್ರದಲ್ಲಿ ಹೊಸ ನಿರ್ದೇಶಕ ಕರ್ನಾಟಕ ಡಾ.ಎಂ.ಶ್ರೀನಿವಾಸ್‌
ದೆಹಲಿಯ ಏಮ್ಸ್‌ ಮತ್ತು ಒಳಚಿತ್ರದಲ್ಲಿ ಹೊಸ ನಿರ್ದೇಶಕ ಕರ್ನಾಟಕ ಡಾ.ಎಂ.ಶ್ರೀನಿವಾಸ್‌

ಬೆಂಗಳೂರು: ದೇಶದ ಪ್ರತಿಷ್ಠಿತಿ ದೆಹಲಿ ಏಮ್ಸ್‌ (All Indian Institute of Medical Sciences (AIIMS), New Delhi)ನ ಮುಂದಿನ ನಿರ್ದೇಶಕರಾಗಿ ಡಾ.ಎಂ.ಶ್ರೀನಿವಾಸ್‌ ಆಯ್ಕೆಯಾಗಿದ್ದಾರೆ. ಡಾ.ರಣದೀಪ್‌ ಗುಲೇರಿಯಾ ಅವರ ಅಧಿಕಾರಾವಧಿ ನಿನ್ನೆ ಕೊನೆಗೊಂಡಿದ್ದು, ಅವರಿಂದ ತೆರವಾದ ನಿರ್ದೇಶಕ ಸ್ಥಾನವನ್ನು ಡಾ.ಎಂ.ಶ್ರೀನಿವಾಸ್‌ ತುಂಬಲಿದ್ದಾರೆ.

ಡಾ.ಗುಲೇರಿಯಾ ಅವರು 2017ರ ಮಾರ್ಚ್‌ 28ರಂದು ಏಮ್ಸ್‌ ನಿರ್ದೇಶಕರಾಗಿ ಅಧಿಕಾರ ವಹಿಸಿದ್ದರು. ಅವರ ಅವಧಿ ಪೂರ್ಣಗೊಂಡ ಬಳಿಕ ಎರಡು ಬಾರಿ ಮೂರು ಮೂರು ತಿಂಗಳ ಮಟ್ಟಿಗೆ ಅವರ ಅಧಿಕಾರಾವಧಿ ವಿಸ್ತರಣೆಯಾಗಿತ್ತು.

ಲಭ್ಯ ಮಾಹಿತಿ ಪ್ರಕಾರ, ಡಾ.ಎಂ.ಶ್ರೀನಿವಾಸ್‌ ಅವರ ನೇಮಕ ಆದೇಶ ಸೆ.9ರಂದೇ ರೆಡಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿಗಳ ಕ್ಯಾಬಿನೆಟ್‌ ಕಮಿಟಿ ಏಮ್ಸ್‌ ನಿರ್ದೇಶಕ ಸ್ಥಾನಕ್ಕೆ ಶಿಫಾರಸು ಆಗಿರುವ ಹಲವರ ವಿವರಗಳನ್ನು ಪರಿಶೀಲಿಸಿ ಡಾ.ಶ್ರೀನಿವಾಸ್‌ ಹೆಸರನ್ನು ಜೂನ್‌ 20ರಂದು ಅಂತಿಮಗೊಳಿಸಿತ್ತು.

ನೇಮಕಾತಿ ಆದೇಶದ ಪ್ರಕಾರ ಡಾ.ಎಂ.ಶ್ರೀನಿವಾಸ್‌ ಅವರ ಅಧಿಕಾರಾವಧಿ ಹೊಣೆಗಾರಿಕೆ ವಹಿಸಿದ ದಿನದಿಂದ ಐದು ವರ್ಷ ಅಥವಾ 65 ವರ್ಷಗಳ ತನಕ ಅಥವಾ ಮುಂದಿನ ಆದೇಶದ ತನಕ ಈ ಮೂರರಲ್ಲಿ ಯಾವುದು ಮೊದಲೋ ಅದು ಎಂಬ ಉಲ್ಲೇಖವಿದೆ.

ವರದಿಗಳ ಪ್ರಕಾರ, ತಿರುವನಂತಪುರದ ಶ್ರೀ ಚಿತ್ರ ತಿರುನಾಳ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಮೆಡಿಕಲ್‌ ಸೈನ್ಸಸ್‌ ಆಂಡ್‌ ಟೆಕ್ನಾಲಜಿಯ ನಿರ್ದೇಶಕ ಡಾ.ಸಂಜಯ್‌ ಬೆಹಾರಿ ಅವರ ಹೆಸರು ಈ ಸ್ಥಾನಕ್ಕೆ ಪರಿಗಣಿಸಲ್ಪಟ್ಟ ಇನ್ನೊಂದು ಹೆಸರು. ಡಾ.ಸಂಜಯ್‌ ಅಥವಾ ಡಾ.ಬೆಹಾರಿ ಈ ಹುದ್ದೆಗಾಗಿ ಅರ್ಜಿ ಸಲ್ಲಿಸಿರಲಿಲ್ಲ.

ಇದಕ್ಕೂ ಮುನ್ನ ಮಾರ್ಚ್‌ ತಿಂಗಳಲ್ಲಿ ಡಾ.ಪ್ರಮೋದ್‌ ಗಾರ್ಗ್‌, ಡಾ.ನಿಖಿಲ್‌ ಟಂಡನ್‌, ಡಾ.ರಾಜೇಶ್‌ ಮಲ್ಹೋತ್ರಾ ಹೆಸರುಗಳು ಈ ಹುದ್ದೆಯ ರೇಸ್‌ನಲ್ಲಿದ್ದವು.

ಯಾರು ಈ ಡಾ.ಎಂ.ಶ್ರೀನಿವಾಸ್?

ಪ್ರತಿಷ್ಠಿತ ದೆಹಲಿ ಏಮ್ಸ್‌ನ ಹೊಸ ನಿರ್ದೇಶಕ ಡಾ.ಎಂ.ಶ್ರೀನಿವಾಸ್‌ ಅವರು ಕರ್ನಾಟಕದವರು. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಯಾದಗಿರಿಯವರು. ಡಾ.ಶ್ರೀನಿವಾಸ್ ಹಿಂದುಳಿದ ಜಿಲ್ಲೆ ಯಾದಗಿರಿಯ ಶಕ್ತಿ ಕೇಂದ್ರವಾಗಿರುವ ಯಾದಗಿರಿ ನಗರದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರು. ಚಿಕ್ಕನಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಶ್ರೀನಿವಾಸ್ ಅವರು ಯಾದಗಿರಿ ನಗರದ ಎಂಪಿಎಸ್​ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನ್ಯೂ ಕನ್ನಡ ಶಾಲೆಯಲ್ಲಿ ಪ್ರೌಢ ಶಿಕ್ಷಣ, ನಗರದ ಜೂನಿಯರ್ ಕಾಲೇಜಲ್ಲಿ ಪಿಯು ಶಿಕ್ಷಣ ಪಡೆದರು. ನಂತರ ಬಳ್ಳಾರಿಯಲ್ಲಿ ಎಂಬಿಬಿಎಸ್, ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಲ್ಲಿ ಎಂಎಸ್ ಅಧ್ಯಯನ ಮಾಡಿದರು. ದೆಹಲಿಯ ಏಮ್ಸ್ ನಲ್ಲಿ ಎಂಸಿಎಚ್ ವ್ಯಾಸಂಗ ಮಾಡಿದರು.

ಯಾದಗಿರಿಯ ಶಾಸ್ತ್ರೀ ವೃತ್ತದ ಸಮೀಪದ ನಿವಾಸಿ ಆಗಿದ್ದರು. ತಂದೆ ಆಶೆಪ್ಪ ಹಾಗೂ ತಾಯಿ ಸರೋಜಾ. ಒಬ್ಬ ಸಹೋದರ ನಾಗರಾಜ್ ಪ್ರಸ್ತುತ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಹೈದರಾಬಾದ್​ನ ESIC ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ ಶ್ರೀನಿವಾಸ್ ಅವರು 2016 ರಲ್ಲಿ ಹೈದರಾಬಾದ್‌ನ ಇಎಸ್‌ಐಸಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಸೇರುವ ಮೊದಲು ಏಮ್ಸ್-ದೆಹಲಿಯಲ್ಲಿ ಪೀಡಿಯಾಟ್ರಿಕ್ ಸರ್ಜರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.

IPL_Entry_Point