ಕನ್ನಡ ಸುದ್ದಿ  /  Karnataka  /  Delhi News Railway Recruitment Board Appointing Rsi Constable 4660 Posts To Work In Railway Protection Special Force Kub

Railway Recruitment: ರೈಲ್ವೆ ರಕ್ಷಣಾ ದಳದಲ್ಲಿ 4660 ಹುದ್ದೆಗಳ ನೇಮಕ, ಮೇ 14 ಅರ್ಜಿ ಸಲ್ಲಿಕೆಗೆ ಕಡೆಯ ದಿನ

ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ನೇಮಕ ಮಂಡಳಿಯು ಆರ್‌ಎಸ್‌ಐ ಹಾಗೂ ಕಾನ್ಸ್‌ಟೇಬಲ್‌ ಹುದ್ದೆಗೆ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಿದೆ.

ರೈಲ್ವೆ ವಿಶೇಷ ರಕ್ಷಣಾ ದಳಕ್ಕೆ ಸೇರಿಕೊಳ್ಳಲು ಅವಕಾಶವಿದೆ.
ರೈಲ್ವೆ ವಿಶೇಷ ರಕ್ಷಣಾ ದಳಕ್ಕೆ ಸೇರಿಕೊಳ್ಳಲು ಅವಕಾಶವಿದೆ.

ದೆಹಲಿ: ರೈಲ್ವೆ ನೇಮಕಾತಿ ಮಂಡಳಿ(RRB)ಯು ರೈಲ್ವೇ ರಕ್ಷಣಾ ವಿಶೇಷ ದಳದಲ್ಲಿ( RCSF) ನಲ್ಲಿ ಸಬ್‌ ಇನ್ಸ್‌ ಪೆಕ್ಟರ್‌ ಹಾಗೂ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 4660 ಹುದ್ದೆಗಳಿಗೆ ರೈಲ್ವೇ ನೇಮಕಾತಿ ಮಂಡಳಿಯು ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ ಖಾಲಿ ಹುದ್ದೆಗಳಲ್ಲಿ 4208 ಕಾನ್ಸ್‌ಟೇಬಲ್ ಹುದ್ದೆಗಳು ಮತ್ತು 452 ಸಬ್-ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅವಕಾಶವನ್ನು ನೀಡಲಾಗಿದೆ. ಅಧಿಕೃತ ಅಧಿಸೂಚನೆಯಲ್ಲಿ ಸಬ್‌ ಇನ್ಸ್‌ ಪೆಕ್ಟರ್‌ ಹಾಗೂ ಕಾನ್ಸ್‌ ಟೇಬಲ್‌ ಹುದ್ದೆಗಳ ನೇಮಕಾತಿಗೆ ಬೇಕಾದ ಅರ್ಹತೆಗಳ ವಿವರಗಳನ್ನು ನೀಡಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು , 2024 ರ ಏಪ್ರಿಲ್ 15 ರಿಂದ ಆರಂಭವಾಗಲಿದೆ. ಮೇ 14 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ರೈಲ್ವೇ ನೇಮಕಾತಿ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ ಹಾಗೂ ತತ್ಸಮಾನ ಹುದ್ದೆಯಲ್ಲಿ ತೇರ್ಗಡೆಯಾದವರು ರೈಲ್ವೆ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದವರು ಸಬ್‌ಇನ್ಸ್‌ಪೆಕ್ಟರ್‌ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹರು.

ಅರ್ಜಿದಾರರು ಖಾಲಿ ಹುದ್ದೆಗಳು, ಪ್ರಮುಖ ದಿನಾಂಕಗಳು, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಪರೀಕ್ಷೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರವೇಶಿಸಲು 15 ಏಪ್ರಿಲ್ 2024 ರಂದು ಅಥವಾ ನಂತರ RRB ಗಳ ಅಧಿಕೃತ ವೆಬ್‌ಸೈಟ್‌ನಲ್ಲಿ CEN ಸಂಖ್ಯೆ RPF 01/2024 ಮತ್ತು CEN ಸಂಖ್ಯೆ RPF 02/2024 ಅನ್ನು ಉಲ್ಲೇಖಿಸಲು ಸೂಚಿಸಲಾಗಿದೆ. ಮಾದರಿ, ಮತ್ತು ಆನ್‌ಲೈನ್ ಅಪ್ಲಿಕೇಶನ್‌ಗಳ ಸಲ್ಲಿಕೆಗೆ ಸಹ ಇದರಲ್ಲಿ ಏಪ್ರಿಲ್‌ 15 ರಿಂದ ಲಭ್ಯವಾಗಲಿವೆ. ಪರೀಕ್ಷಾ ದಿನಾಂಕವನ್ನು ನಂತರ ತಿಳಿಸಲಾಗುತ್ತದೆ.

ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ರೈಲ್ವೆ ಇಲಾಖೆಯೂ ಕೂಡ ಒಂದು. ರೈಲ್ವೆಯು ಈಗಾಗಲೇ ಸುರಕ್ಷತೆಗೆ ಇನ್ನಿಲ್ಲದ ಒತ್ತು ನೀಡಿದೆ. ಈಗಾಗಲೇ ರೈಲ್ವೆ ರಕ್ಷಣಾ ದಳವು ಕೆಲಸ ಮಾಡುತ್ತಿದ್ದು, ಈ ತಂಡವನ್ನು ಸೇರಿಕೊಳ್ಳಲು ಅವಕಾಶವಿದೆ. ಈ ಮೂಲಕ ಉತ್ತಮ ಸಂಸ್ಥೆ, ದೇಶದ ರಕ್ಷಣೆಯ ಭಾಗವಾಗಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಹುದ್ದೆಗಳು ಸಹಕಾರಿಯಾಗಲಿವೆ. ಒಳ್ಳೆಯ ವೇತನವನ್ನೂ ಪಡೆಯಬಹುದು ಎಂದು ಮಂಡಳಿ ಪ್ರಕಟಣೆಯು ತಿಳಿಸಿದೆ.

ಅರ್ಜಿ ಸಲ್ಲಿಕೆ ಹೀಗೆ

  • ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
  • ಇದರಲ್ಲಿ ಆರ್‌ಎಸ್‌ಐ ಹಾಗೂ ಕಾನ್ಸ್‌ಟೇಬಲ್‌ ಹುದ್ದೆಯ ವಿವರ ಕ್ಲಿಕ್ಕಿಸಿ
  • ನಮೂನೆಯಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ದಾಖಲಿಸಿ
  • ನೀವು ಆಯ್ಕೆ ಮಾಡಿಕೊಳ್ಳುವ ಪರೀಕ್ಷಾ ಕೇಂದ್ರದ ವಿವರವನ್ನೂ ಸಲ್ಲಿಸಿ
  • ಜನ್ಮ ದಿನಾಂಕ, ಶಿಕ್ಷಣ, ಅನುಭವ ಎಲ್ಲಾ ಮಾಹಿತಿಗಳನ್ನು ಸಲ್ಲಿಸಿ
  • ನೀವು ಅಪ್ಡೇಟ್‌ ಮಾಹಿತಿಯನ್ನೆಲ್ಲಾ ಒಂದು ಕಡೆ ಡೌನ್‌ಲೋಡ್‌ ಮಾಡಿಕೊಳ್ಳಿ.