ಉಪರಾಷ್ಟ್ರಪತಿ ಜಗದೀಪ್ ಧನಕರ್ ಧರ್ಮಸ್ಥಳ ಭೇಟಿ ಹಿನ್ನೆಲೆ, ಭಕ್ತರ ದರ್ಶನ ಸಮಯದಲ್ಲಿ ವ್ಯತ್ಯಾಸ: ಆಡಳಿತ ಮಂಡಳಿ ಪ್ರಕಟಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಉಪರಾಷ್ಟ್ರಪತಿ ಜಗದೀಪ್ ಧನಕರ್ ಧರ್ಮಸ್ಥಳ ಭೇಟಿ ಹಿನ್ನೆಲೆ, ಭಕ್ತರ ದರ್ಶನ ಸಮಯದಲ್ಲಿ ವ್ಯತ್ಯಾಸ: ಆಡಳಿತ ಮಂಡಳಿ ಪ್ರಕಟಣೆ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಧರ್ಮಸ್ಥಳ ಭೇಟಿ ಹಿನ್ನೆಲೆ, ಭಕ್ತರ ದರ್ಶನ ಸಮಯದಲ್ಲಿ ವ್ಯತ್ಯಾಸ: ಆಡಳಿತ ಮಂಡಳಿ ಪ್ರಕಟಣೆ

Dakshina Kannada: ಧರ್ಮಸ್ಥಳದಲ್ಲಿ (ಜ.7) ಹೊಸದಾಗಿ ನಿರ್ಮಾಣವಾಗಿರುವ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸನ್ನು ಉಪರಾಷ್ಟ್ರಪತಿಗಳಾದ ಜಗದೀಪ್‌ ಧನಕರ್‌ ಅವರು ಇಂದು ಉದ್ಘಾಟಿಸುತ್ತಿದ್ದು ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಭಕ್ತರ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸವಾಗಲಿದೆ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಪ್ರಕಟಣೆ ಹೊಡಿಸಿದೆ.

ಜನವರಿ 7 ರಂದು ಧರ್ಮಸ್ಥಳಕ್ಕೆ ಭೇಟಿ ನೀಡುತಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌
ಜನವರಿ 7 ರಂದು ಧರ್ಮಸ್ಥಳಕ್ಕೆ ಭೇಟಿ ನೀಡುತಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ದಕ್ಷಿಣ ಕನ್ನಡ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇಂದು ದಕ್ಷಿಣ ಕನ್ನಡದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದು ಭದ್ರತಾ ದೃಷ್ಟಿಯಿಂದ ಭಕ್ತರಿಗೆ ದೇವರ ದರ್ಶನದಲ್ಲಿ ವ್ಯತ್ಯಾಸವಾಗಲಿದೆ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ಶ್ರೀ ಸಾನಿಧ್ಯ ಉದ್ಘಾಟಿಸಲಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಇಂದು ಧರ್ಮಸ್ಥಳದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆಗೊಳ್ಳಲಿದೆ. ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ಇಂದು (ಜ.7) ಮಧ್ಯಾಹ್ನ 2 ಗಂಟೆಗೆ ಕಾಂಪ್ಲೆಕ್ಸ್‌ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಗ್ರಾಮಾಭಿವೃದ್ಧಿ ಯೋಜನೆ 2024-25 ರ ಜ್ಞಾನದೀಪ ಕಾರ್ಯಕ್ರಮ ಕೂಡಾ ಆರಂಭವಾಗಲಿದೆ. ಆದ್ದರಿಂದ ಉಪರಾಷ್ಟ್ರಪತಿಗಳ ಭದ್ರತಾ ವ್ಯವಸ್ಥೆಯ ದೃಷ್ಟಿಯಿಂದ ಭಕ್ತರಿಗೆ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸವಾಗಬಹುದು ಎಂದು ದೇವಸ್ಥಾನದ ಆಡಳಿಗೆ ಮಂಡಲಿ ಮಾಹಿತಿ ನೀಡಿದೆ.

ದಿನಾಂಕ 7-01-2025 ಮಂಗಳವಾರದಂದು ಘನವೆತ್ತ ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಜಗದೀಪ್‌ ಧನ್‌ಕರ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯ ದೃಷ್ಟಿಯಿಂದ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸವಾಗಬಹುದು ಭಕ್ತಾಧಿಗಳು ಸಹಕರಿಸಬೇಕಾಗಿ ವಿನಂತಿ ಎಂದು ಶ್ರೀ ಧರ್ಮಸ್ಥಳ ಇನ್ಸ್‌ಟಾಗ್ರಾಮ್‌ ಖಾತೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ತಿರುಪತಿ ಮಾದರಿಯಲ್ಲಿ ನಿರ್ಮಾಣಗೊಂಡ ಶ್ರೀ ಸಾನಿಧ್ಯ

ಶ್ರೀ ಸಾನಿಧ್ಯವು, ಧರ್ಮಸ್ಥಳಕ್ಕೆ ಬರುವ ಭಕ್ತರಿಗಾಗಿ ತಿರುಪತಿ ಮಾದರಿಯಲ್ಲಿ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಯ ನೂತನ ಸಂಕೀರ್ಣವಾಗಿದೆ. 2,75,177 ಚದರ ಅಡಿಯಲ್ಲಿ ನಿರ್ಮಾಣಗೊಂಡಿದ್ದು, 2 ಅಂತಸ್ಥಿನ ಶ್ರೀ ಸಾನಿಧ್ಯ ಸಂಕೀರ್ಣದಲ್ಲಿ ಒಟ್ಟು 16 ವಿಶಾಲ ಭವನಗಳಿವೆ. ಏಕಕಾಲದಲ್ಲಿ 600 ಜನ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ. ಭಕ್ತರಿಗೆ ಮಾರ್ಗದರ್ಶನ ನೀಡಲು ಡಿಜಿಟಲ್ ಸೂಚನಾ ಫಲಕಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪ್ರತಿ ಭವನದಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಇಂದು ಉದ್ಘಾಟನೆ ಆಗಲಿರುವ ಕಾಂಪ್ಲೆಕ್ಸ್‌ನಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಗಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌,ಪತ್ನಿ ಸುದೇಶ್ ಧನಕರ್, ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ, ಹೇಮಾವತಿ ವೀರೇಂದ್ರ ಹೆಗ್ಗಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Whats_app_banner