ಕನ್ನಡ ಸುದ್ದಿ / ಕರ್ನಾಟಕ /
ಆಕಾಂಕ್ಷ ಸಾವು ಆತ್ಮಹತ್ಯೆ: ಪ್ರಕರಣ ದಾಖಲಿಸಿದ ಪಂಜಾಬ್ ಪೊಲೀಸ್
ಧರ್ಮಸ್ಥಳದ ಯುವತಿ ಆಕಾಂಕ್ಷ ಎಸ್.ನಾಯರ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪ್ರೇಮ ವೈಫಲ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಧರ್ಮಸ್ಥಳದ ಯುವತಿ ಆಕಾಂಕ್ಷ ಎಸ್. ನಾಯರ್
ಮಂಗಳೂರು: ಪಂಜಾಬಿನಲ್ಲಿ ಧರ್ಮಸ್ಥಳದ ಯುವತಿ ಆಕಾಂಕ್ಷ ಎಸ್.ನಾಯರ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸರ್ಟಿಫಿಕೇಟ್ ಪಡೆಯಲು ಹೋದ ಆಕೆ ತಾನು ಕಲಿತ ಫಗ್ವಾರ ಎಲ್ ಪಿಯು ಕಾಲೇಜಿನ ಮಹಡಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಲೇಜಿಗೆ ಹೋದ ಆಕೆ ಅಲ್ಲಿನ ಕೇರಳ ಮೂಲದ ಪ್ರಾಧ್ಯಾಪಕರನ್ನು ಭೇಟಿ ಮಾಡಲು ಹೋಗಿದ್ದು, ಈ ವೇಳೆ ಅವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕೆಯ ಅಣ್ಣ ಆಕರ್ಷ್ ನಾಯರ್ ನೀಡಿದ ದೂರಿನಂತೆ ಪ್ರಾಧ್ಯಾಪಕ ವಿರುದ್ಧ ಪ್ರಕರಣ ದಾಖಲಾಗಿದೆ. ಆಕೆಯ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದ್ದು, ಬಳಿಕ ದೇಹವನ್ನು ಊರಿಗೆ ತರಲಾಗುವುದು ಎಂದು ತಿಳಿದುಬಂದಿದೆ.