ಧಾರವಾಡ: ರಾತ್ರಿ ನಗುನಗುತ್ತಲೇ ಇದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು
ಕನ್ನಡ ಸುದ್ದಿ  /  ಕರ್ನಾಟಕ  /  ಧಾರವಾಡ: ರಾತ್ರಿ ನಗುನಗುತ್ತಲೇ ಇದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು

ಧಾರವಾಡ: ರಾತ್ರಿ ನಗುನಗುತ್ತಲೇ ಇದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು

ಧಾರವಾಡ: ರಾತ್ರಿ ನಗುನಗುತ್ತಲೇ ಎಲ್ಲರೊಂದಿಗೆ ಬೆರೆತು ಮಾತನಾಡಿದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಬೆಳಗ್ಗೆ ಎದ್ದಿರಲಿಲ್ಲ. ದಂಪತಿ ಜತೆಯಾಗಿಯೇ ಇಹಲೋಕ ಯಾನ ಮುಗಿಸಿರುವುದು ವಿಶೇಷ.

ಈಶ್ವರ ಅರೇರಾ ಮತ್ತು ಪಾರವ್ವ ಅರೇರಾ ಎಂಬ ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ರಾತ್ರಿ ನಗುನಗುತ್ತ ಇದ್ದು, ಬೆಳಗಾಗುತ್ತಲೇ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು.
ಈಶ್ವರ ಅರೇರಾ ಮತ್ತು ಪಾರವ್ವ ಅರೇರಾ ಎಂಬ ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ರಾತ್ರಿ ನಗುನಗುತ್ತ ಇದ್ದು, ಬೆಳಗಾಗುತ್ತಲೇ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು.

ಧಾರವಾಡ: ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ಜೀವಗಳೆರಡು ಒಂದಾಗಿ ಬದುಕಿ ಜೊತೆಯಾಗಿಯೇ ಇಹಲೋಕ ತ್ಯಜಿಸಿದ್ದಾರೆ. ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿ ಈಶ್ವರ ಆರೇರ (82 ) ಹಾಗೂ ಅವರ ಪತ್ನಿ ಪಾರವ್ವಾ ಆರೇರ(73) ಸೋಮವಾರ (ಫೆ 17) ಬೆಳಗಿನ ಜಾವ ತಮ್ಮನಿವಾಸದಲ್ಲಿಯೆ ಇಹಲೋಕ ತ್ಯಜಿಸಿದ್ದಾರೆ.

ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ

ಈಶ್ವರ ಅರೇರಾ ಮತ್ತು ಪಾರವ್ವ ಅರೇರಾ ಎಂಬ ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ರಾತ್ರಿ ನಗುನಗುತ್ತ ಇದ್ದು, ಸೋಮವಾರ ಬೆಳಗಾಗುತ್ತಲೇ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು. ಮೃತರು ನಾಲ್ವರು ಪುತ್ರಿಯರು 12 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ದಂಪತಿಗಳು ಅಗಲಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಪಾರವ್ವ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರವಿವಾರ ರಾತ್ರಿ ಕೂಡ ಇಬ್ಬರು ಒಟ್ಟಿಗೆ ಊಟ ಮಾಡಿ ನಗು ನಗುತ್ತಲೇ ಇದ್ದವರು, ಬೆಳಕಾಗುವಷ್ಟರಲ್ಲಿಯೇ ಇಹ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸಾವಿನಲ್ಲಿ ಒಂದಾದ ದಂಪತಿಗಳನ್ನು ನೋಡಿ ದೇವರ ಹುಬ್ಬಳ್ಳಿ ಗ್ರಾಮಸ್ಥರಿಗೂ ಕೂಡ ಮಮ್ಮಲ ಮರುಗಿದ್ದು, ಇಂದು ಸಂಜೆಯೇ ಅವರ ಅಂತ್ಯಕ್ರಿಯೆ ನೆರವೇರಿದೆ.

ಜೊತೆಯಾಗಿಯೇ ಇಹಲೋಕ ಪಯಣ ಮುಗಿಸಿದ ದಂಪತಿ ಪ್ರಕರಣ ಇದೇ ಮೊದಲಲ್ಲ

ಲಖಣಗಾಂವ ಗ್ರಾಮದ ರತ್ನಾಬಾಯಿ- ವೈಜಿನಾಥ ಕುಂಬಾರ ದಂಪತಿ

ಭಾಲ್ಕಿ ತಾಲೂಕು ಲಖಣಗಾಂವ ಗ್ರಾಮದಲ್ಲಿ 2022ರ ಮೇ 5ರಂದು ರತ್ನಾಬಾಯಿ- ವೈಜಿನಾಥ ಕುಂಬಾರ ದಂಪತಿ ಒಂದೇ ದಿನ ಮೃತಪಟ್ಟಿದ್ದರು. ವೈಜಿನಾಥ ಕುಂಬಾರ (85) ನಸುಕಿನ ಜಾವ 3 ಗಂಟೆಗೆ ಮೃತಪಟ್ಟರೆ ನಸುಕಿನ 4 ಗಂಟೆಗೆ ಅವರ ಪತ್ನಿ ರತ್ನಾಬಾಯಿ ಮೃತಪಟ್ಟರು. ಭಾಲ್ಕಿ ತಾಲೂಕು ರೈತ ಸಂಘದ ನಾಯಕ ಬಾಬುರಾವ್ ಕುಂಬಾರ ಅವರ ಅಪ್ಪ ಅಮ್ಮ ಇವರು.

ಕುಸಗಲ್‌ ಗ್ರಾಮದ ಅನ್ನಪೂರ್ಣ- ಶಂಕರಪ್ಪ ಹೊಂಬಳ ದಂಪತಿ

ಹುಬ್ಬಳ್ಳಿ ತಾಲೂಕು ಕುಸಗಲ್ ಗ್ರಾಮದ ಶಂಕರಪ್ಪ ಹೊಂಬಳ - ಅನ್ನಪೂರ್ಣ ಹೊಂಬಳ ದಂಪತಿ 2024ರ ಸೆಪ್ಟೆಂಬರ್‌ 23 ರಂದು ಒಂದೇ ದಿನ ಮೃತಪಟ್ಟಿದ್ದಾರೆ. ಶಂಕರಪ್ಪ ಹೊಂಬಳ (72) ಬೆಳಿಗ್ಗೆ 6 ಗಂಟೆಗೆ ಮೃತಪಟ್ಟರೆ ಅನ್ನಪೂರ್ಣ ಅವರು ನಂತರ ಕೆಲವೇ ಗಂಟೆಗಳಲ್ಲಿ ಮೃತಪಟ್ಟದ್ದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner