ಕನ್ನಡ ಸುದ್ದಿ  /  Karnataka  /  Dharwad Near Road Accident, Five Killed, Four Injured

Dharwad Accident: ಧಾರವಾಡದಲ್ಲಿ ಕಾರು ಲಾರಿ ನಡುವೆ ಭೀಕರ ಅಪಘಾತ, ಐವರ ದುರ್ಮರಣ

ಅಗ್ನಿಪಥ್‌ಗೆ ಆಯ್ಕೆಗೊಂಡಿದ್ದ ಮಂಜುನಾಥ್ ಮುದ್ದೋಜಿ ಎಂಬ ಯುವಕನನ್ನು ಹುಬ್ಬಳ್ಳಿಗೆ ಬಿಟ್ಟು ಕಾರಿನಲ್ಲಿದ್ದವರು ವಾಪಸ್‌ ಬರುತ್ತಿದ್ದರು. ಈ ಸಮಯದಲ್ಲಿ ಪಾದಚಾರಿಯನ್ನು ತಪ್ಪಿಸಲು ಹೋಗಿ ಕಾರು ಲಾರಿಯೊಂದಕ್ಕೆ ಹಿಂಭಾಗದಿಂದ ಡಿಕ್ಕಿ ಹೊಡೆದಿದೆ.

Dharwad Accident: ಧಾರವಾಡದಲ್ಲಿ ಕಾರು ಲಾರಿ ನಡುವೆ ಭೀಕರ ಅಪಘಾತ, ಐವರ ದುರ್ಮರಣ
Dharwad Accident: ಧಾರವಾಡದಲ್ಲಿ ಕಾರು ಲಾರಿ ನಡುವೆ ಭೀಕರ ಅಪಘಾತ, ಐವರ ದುರ್ಮರಣ

ಧಾರವಾಡ: ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟು, ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ತೇಗೂರ ಗ್ರಾಮದ ಬಳಿ ನಿನ್ನೆ ಸಂಜೆ ಅಪಘಾತ ನಡೆದಿತ್ತು.

ಅಗ್ನಿಪಥ್‌ಗೆ ಆಯ್ಕೆಗೊಂಡಿದ್ದ ಮಂಜುನಾಥ್ ಮುದ್ದೋಜಿ ಎಂಬ ಯುವಕನನ್ನು ಹುಬ್ಬಳ್ಳಿಗೆ ಬಿಟ್ಟು ಕಾರಿನಲ್ಲಿದ್ದವರು ವಾಪಸ್‌ ಬರುತ್ತಿದ್ದರು. ಈ ಸಮಯದಲ್ಲಿ ಪಾದಚಾರಿಯನ್ನು ತಪ್ಪಿಸಲು ಹೋಗಿ ಕಾರು ಲಾರಿಯೊಂದಕ್ಕೆ ಹಿಂದಿನಿಂದ ಗುದ್ದಿದೆ ಎಂದು ಹೇಳಲಾಗಿದೆ.

ಲಾರಿಯೊಂದಕ್ಕೆ ಹಿಂಬದಿಯಿಂದ ಕಾರು ಗುದ್ದಿದ್ದು, ಕಾರಿನಲ್ಲಿದ್ದ ನಾಗಪ್ಪ ಈರಪ್ಪ ಮುದ್ದೊಜಿ(29)ಮಹಂತೇಶ್ ಬಸಪ್ಪ ಮುದ್ದೊಜಿ (40) ಬಸವರಾಜ್ ಶಿವಪುತ್ರಪ್ಪ ನರಗುಂದ(35) ನಿಚ್ಚಣಕಿ ಗ್ರಾಮದ ಶ್ರೀಕುಮಾರ್ ನರಗುಂದ (05) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ ಈರಣ್ಣಾ ಗುರುಸಿದ್ದಪ್ಪ ರಾಮನಗೌಡರ್ (35) ಪಾದಚಾರಿಯೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ನಾಲ್ಕು ಮಂದಿಗೆ ಗಂಭೀರ ಗಾಯಗೊಂಡಿದೆ ಎಂದು ಹೇಳಲಾಗಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಗರಗ್ ಠಾಣೆ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿದೆ. ಕಾರು ಅತಿವೇಗದಲ್ಲಿ ಅಪಘಾತವಾಗಿದೆ. ಘಟನೆಯಲ್ಲಿ ಗಾಯಗೊಂಡವರಲ್ಲಿ ಇಬ್ಬರ ಹೆಸರು ಶ್ರವಣಕುಮಾರ್‌ ನರಗುಂದ, ಮಡಿವಾಳಪ್ಪ ರಾಜು ಅಳ್ನಾವರ ಎಂದು ತಿಳಿದುಬಂದಿದೆ. ಇವರಲ್ಲಿ ಶ್ರವಣಕುಮಾರ ಏಳು ವರ್ಷದ ಬಾಲಕ. ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರು ಬೆಳಾಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದವರಾಗಿದ್ದು, ತಮ್ಮ ಕುಟುಂಬದ ವ್ಯಕ್ತಿ ಸೇನೆಗೆ ಸೇರಿದ ಖುಷಿಯಲ್ಲಿ ವಾಪಸ್‌ ಬರುತ್ತಿರುವಾಗ ಈ ಘಟನೆ ನಡೆದಿದ್ದಾರೆ. ಅಗ್ನಿಪಥಕ್ಕೆ ಆಯ್ಕೆಯಾಗಿದ್ದ ಯುವಕನನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಹಿಂತುರುಗಿ ಬರುವಾಗ ಈ ದುರ್ಘಟನೆ ನಡೆದಿದೆ.

ದುಬೈನಲ್ಲಿ ನಡೆದ ಅಪಘಾತದಲ್ಲಿ ರಾಯಚೂರಿನ ನಾಲ್ವರು ಸಾವು

ದುಬೈನಲ್ಲಿ ಬಸ್‌ ಮತ್ತು ಕಂಟೇನರ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ರಾಯಚೂರು ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ದುಬೈಗೆ ಉಮ್ರಾ ಯಾತ್ರೆಗೆ ತೆರಳಿದ ರಾಯಚೂರಿನ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರು ರಾಯಚೂರಿನ ಆಶಾಪುರ ರಸ್ತೆಯ ದ್ವಾರಕಾನಗರದವರು.

ರಾಯಚೂರು ಕೃಷಿ ವಿವಿಯಲ್ಲಿ ಕುಲಪತಿಗಳ ಆಪ್ತ ಸಹಾಯಕರಾಗಿದ್ದ ಶಫಿ ಸುಳ್ಳೇದ್ (53), ಅವರ ಪತ್ನಿ ಸಿರಾಜ್ ಬೇಗಂ (45), ಪುತ್ರಿ ಶಿಫಾ (20), ತಾಯಿ ಬೇಬಿ ಜಾನ್ (64) ಮೃತಪಟ್ಟಿದ್ದಾರೆ. ಪುತ್ರ ಸಮೀರ್‌ ಗಾಯಗೊಂಡಿದ್ದಾರೆ. ಈ ಕುಟುಂಬವು ಇದೇ ತಿಂಗಳು ಫೆಬ್ರವರಿ ಹದಿನಾಲ್ಕರಂದು ಮೆಕ್ಕಾ ಮದೀನಕ್ಕೆ ಹೋಗಿದ್ದರು.

ಮೆಕ್ಕಾ ಮದೀನಾ ಪವಿತ್ರಾ ಯಾತ್ರೆಗೆ ತೆರಳಿದ ಬಳಿಕ ಈ ಅಪಘಾತ ಸಂಭವಿಸಿರುವ ಕಾರಣ ದುಬೈನಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

IPL_Entry_Point