Dharwad Crime: ನಿದ್ರೆಗೆ ಭಂಗ ತಂದ ಕೋಪ, 1 ವರ್ಷದ ಹೆಣ್ಮಗುವನ್ನು ಗೋಡೆಗಪ್ಪಳಿಸಿ ಕೊಂದ 35 ವರ್ಷದ ಅಪ್ಪ; ಧಾರವಾಡ ಯಾದವಾಡದಲ್ಲಿ ಕಂಸ ಕೃತ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Dharwad Crime: ನಿದ್ರೆಗೆ ಭಂಗ ತಂದ ಕೋಪ, 1 ವರ್ಷದ ಹೆಣ್ಮಗುವನ್ನು ಗೋಡೆಗಪ್ಪಳಿಸಿ ಕೊಂದ 35 ವರ್ಷದ ಅಪ್ಪ; ಧಾರವಾಡ ಯಾದವಾಡದಲ್ಲಿ ಕಂಸ ಕೃತ್ಯ

Dharwad Crime: ನಿದ್ರೆಗೆ ಭಂಗ ತಂದ ಕೋಪ, 1 ವರ್ಷದ ಹೆಣ್ಮಗುವನ್ನು ಗೋಡೆಗಪ್ಪಳಿಸಿ ಕೊಂದ 35 ವರ್ಷದ ಅಪ್ಪ; ಧಾರವಾಡ ಯಾದವಾಡದಲ್ಲಿ ಕಂಸ ಕೃತ್ಯ

ಕಂಸ ಕೃತ್ಯವನ್ನು ನೆನಪಿಸುವಂತಹ ಅಪರಾಧ ಕೃತ್ಯ ಧಾರವಾಡದ ಯಾದವಾಡ ಗ್ರಾಮದಲ್ಲಿ ನಡೆದಿದೆ. ನಿದ್ರೆಗೆ ಭಂಗ ಉಂಟುಮಾಡಿದಳು ಎಂಬ ಕಾರಣಕ್ಕೆ ಕೋಪಗೊಂಡ ಅಪ್ಪನೊಬ್ಬ ಒಂದು ವರ್ಷದ ಮಗಳನ್ನೇ ಗೋಡೆಗೆ ಬಡಿದು ಕೊಂದ ಪೈಶಾಚಿಕ ಕೃತ್ಯ ನಡೆದಿದೆ.

ನಿದ್ರೆಗೆ ಬಂದ ತಂದಳೆಂಬ ಕೋಪದಲ್ಲಿ ಅಪ್ಪನೊಬ್ಬ ಒಂದು ವರ್ಷದ ಹೆಣ್ಣುಮಗುವನ್ನು ಗೋಡೆಗಪ್ಪಳಿಸಿ ಕೊಂದ ಹೃದಯ ವಿದ್ರಾವಕ ಘಟನೆ ಧಾರವಾಡದ ಯಾದವಾಡದಲ್ಲಿ ನಡೆದಿದೆ. (ಸಾಂಕೇತಿಕ ಚಿತ್ರ)
ನಿದ್ರೆಗೆ ಬಂದ ತಂದಳೆಂಬ ಕೋಪದಲ್ಲಿ ಅಪ್ಪನೊಬ್ಬ ಒಂದು ವರ್ಷದ ಹೆಣ್ಣುಮಗುವನ್ನು ಗೋಡೆಗಪ್ಪಳಿಸಿ ಕೊಂದ ಹೃದಯ ವಿದ್ರಾವಕ ಘಟನೆ ಧಾರವಾಡದ ಯಾದವಾಡದಲ್ಲಿ ನಡೆದಿದೆ. (ಸಾಂಕೇತಿಕ ಚಿತ್ರ)

ಧಾರವಾಡ: ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದ್ದು, ಆದರೆ, ಧಾರವಾಡ ತಾಲೂಕಿನ ಯಾದವಾಡದಲ್ಲಿ ಆದರೆ ಈ ಜಗಳ ಒಂದು ವರ್ಷದ ಹೆಣ್ಣು ಮಗುವಿನ ಪ್ರಾಣವನ್ನೇ ಬಲಿ ಪಡೆದಿದೆ. ಕ್ರೂರಿ ತಂದೆಯನ್ನು ಹಿಡಿದು ಧರ್ಮದೇಟು ನೀಡಿದ ಗ್ರಾಮಸ್ಥರು, ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.

ಪತ್ನಿಯೊಂದಿಗೆ ಜಗಳ ಮಾಡಿ ಮಲಗಿದ್ದ ಪತಿಗೆ ತನ್ನದೇ ಒಂದು ವರ್ಷದ ಮಗಳ ಅಳು ಕೇಳಲಾಗದೇ, ಆ ಹಸುಗೂಸನ್ನು ಗೋಡೆಗೆ ಬಡಿದು ಕೊಂದ ಹೃದಯ ವಿದ್ರಾವಕ ಘಟನೆ ಇದು. ಅಪ್ಪನ ಕೈಯಿಂದಲೇ ಮೃತಪಟ್ಟ ಹಸುಗೂಸನ್ನು ಶ್ರೇಯಾ (1) ಎಂದು ಗುರುತಿಸಲಾಗಿದೆ. ಆರೋಪಿ ತಂದೆಯ ಹೆಸರು ಶಂಭುಲಿಂಗಯ್ಯ ರಾಪುರಮಠ (38).

ಕೂಲಿ ಕಾರ್ಮಿಕ ಶಂಭುಲಿಂಗಯ್ಯನ ಅಮಾನವೀಯ ಕೃತ್ಯದಿಂದಾಗಿ ಗಂಭೀರ ಗಾಯಗೊಂಡಿದ್ದ ಎಳೆಯ ಕಂದಮ್ಮ ಚಿಕಿತ್ಸೆ ಫಲಿಸದೇ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಅಸುನೀಗಿದ್ದು, ಈ ಕುರಿತಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಸುಗೂಸಿನ ಮೇಲೇಕೆ ತಿರುಗಿತು ಅಪ್ಪನ ಕೋಪ

ಯಾದವಾಡ ಗ್ರಾಮದ ಶಂಭುಲಿಂಗಯ್ಯ ಮುಗದ ಗ್ರಾಮದ ಸವಿತಾ ಅವರು ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟಿದ್ದು, ಶ್ರೇಯಾ ಸೇರಿ ಇಬ್ಬರು ಮಕ್ಕಳಿದ್ದಾರೆ. ಈ ದಾಂಪತ್ಯದಲ್ಲಿ ಸಾಕಷ್ಟು ವಿರಸವಿದ್ದು, ಪದೇಪದೆ ಜಗಳ ನಡೆಯುತ್ತಲೇ ಇತ್ತು.

ಆದರೆ ಮಂಗಳವಾರ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದ ಶಂಭುಲಿಂಗಯ್ಯ, ಪತ್ನಿ ಸವಿತಾಳೊಂದಿಗೆ ಜಗಳವಾಡಿದ್ದ. ಅಲ್ಲದೇ ಹಲ್ಲೆ ನಡೆಸಿ ಬಳಿಕ ಕ್ರುದ್ಧನಾಗಿಯೇ ಮಲಗಿದ್ದ. ನಸುಕಿನ 2 ಗಂಟೆ ಹೊತ್ತಿಗೆ ಮಗು ಶ್ರೇಯಾ ಎದ್ದು ಅಳಲಾರಂಭಿಸಿದ್ದಳು. ಇದರಿಂದ ಎಚ್ಚರಗೊಂಡ ಶಂಭುಲಿಂಗಯ್ಯ, “ನೆಮ್ಮದಿಯಿಂದ ನಿದ್ರೆ ಮಾಡಲೂ ಬಿಡುತ್ತಿಲ್ಲ ಈ ಮಗು” ಎನ್ನುತ್ತ ಸಿಡಿಮಿಡಿಗೊಂಡು ಎದ್ದು ಸವಿತಾ ಬಳಿ ಬಂದಿದ್ದಾನೆ. ಅದೇ ಸಿಟ್ಟಿನ ಭರದಲ್ಲಿ ಮಗುವಿನ ಎರಡೂ ಕಾಲುಗಳನ್ನು ಹಿಡಿದು ಮೇಲಕ್ಕೆತ್ತಿ ತಲೆ ನೆಲಕ್ಕೆ ತಾಗುವಂತೆ, ಗೋಡೆಗೂ ಬಡಿದು ಹಲ್ಲೆ ಮಾಡಿದ್ದ. ಇದರಿಂದಾಗಿ ಹಸುಗೂಸು ಶ್ರೇಯಾ ಗಂಭೀರ ಗಾಯಗೊಂಡಿದ್ದಳು.

ವಿಷಯ ತಿಳಿದು ಮುಗ ಗ್ರಾಮದಿಂದ ಸವಿತಾಳ ಪಾಲಕರು ಬರುವ ತನಕವೂ ಆರೋಪಿ ಶಂಭುಲಿಂಗಯ್ಯ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿರಲಿಲ್ಲ. ಉಳಿದವರನ್ನೂ ಕರೆದೊಯ್ಯಲು ಬಿಟ್ಟಿರಲಿಲ್ಲ. ಬುಧವಾರ ಬೆಳಗ್ಗೆ ಈ ವಿಷಯ ತಿಳಿದ ಗ್ರಾಮಸ್ಥರು ಅಲ್ಲಿಗೆ ತೆರಳಿ ಶಂಭುಲಿಂಗಯ್ಯನನ್ನು ಹಿಡಿದು ಧರ್ಮದೇಟು ನೀಡಿದ್ದರು. ಪೊಲೀಸರಿಗೂ ಮಾಹಿತಿ ನೀಡಿದ್ದರು. ಕೂಡಲೇ ಮಗುವನ್ನು ಕಿಮ್ಸ್‌ಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದರು.

ಆದರೆ, ತಲೆಗೆ ತೀವ್ರ ಗಾಯವಾಗಿದ್ದ ಕಾರಣ ಹಸಗೂಸು ಶ್ರೇಯಾ ಚಿಕಿತ್ಸೆ ಫಲಿಸದೇ ಗುರುವಾರ (ಫೆ.29) ಮೃತಪಟ್ಟಿದ್ದಾಳೆ. ಮಗುವನ್ನು ಆಸ್ಪತ್ರೆಗೆ ಸೇರಿಸುವ ವಿಚಾರವಾಗಿ ಶಂಭುಲಿಂಗಯ್ಯ ಕುಟುಂಬದವರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸವಿತಾಳ ಸೋದರ ಕಲ್ಲಯ್ಯ ಆರೋಪಿಸಿ, ದೂರು ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner