ಹುಬ್ಬಳ್ಳಿ ಮಂದಿಗೆ ಇಷ್ಟು ರೈಲು ಬೇಕ್ರೀ ಸೋಮಣ್ಣ: ಹುಬ್ಬಳ್ಳಿ-ಬೆಂಗಳೂರು ವಂದೇ ಭಾರತ್, ಹುಬ್ಬಳ್ಳಿ-ಮುಂಬೈ ಸ್ಲೀಪರ್ ರೈಲು ಆಗ್ರಹ-dharwad news hubballi people demand to v somanna for more trains hubli to bengaluru vande bharat sleeper train prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ ಮಂದಿಗೆ ಇಷ್ಟು ರೈಲು ಬೇಕ್ರೀ ಸೋಮಣ್ಣ: ಹುಬ್ಬಳ್ಳಿ-ಬೆಂಗಳೂರು ವಂದೇ ಭಾರತ್, ಹುಬ್ಬಳ್ಳಿ-ಮುಂಬೈ ಸ್ಲೀಪರ್ ರೈಲು ಆಗ್ರಹ

ಹುಬ್ಬಳ್ಳಿ ಮಂದಿಗೆ ಇಷ್ಟು ರೈಲು ಬೇಕ್ರೀ ಸೋಮಣ್ಣ: ಹುಬ್ಬಳ್ಳಿ-ಬೆಂಗಳೂರು ವಂದೇ ಭಾರತ್, ಹುಬ್ಬಳ್ಳಿ-ಮುಂಬೈ ಸ್ಲೀಪರ್ ರೈಲು ಆಗ್ರಹ

V Somanna: ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಮತ್ತು ಶ್ರೀ ಸಿದ್ದಾರೂಡ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ರೈಲ್ವೆ ಬೇಡಿಕೆಗಳ ಮನವಿ ಸಲ್ಲಿಸಿದೆ.

ಹುಬ್ಬಳ್ಳಿ-ಬೆಂಗಳೂರು ವಂದೇ ಭಾರತ್, ಹುಬ್ಬಳ್ಳಿ-ಮುಂಬೈ ಸ್ಲೀಪರ್ ರೈಲು ಆಗ್ರಹ
ಹುಬ್ಬಳ್ಳಿ-ಬೆಂಗಳೂರು ವಂದೇ ಭಾರತ್, ಹುಬ್ಬಳ್ಳಿ-ಮುಂಬೈ ಸ್ಲೀಪರ್ ರೈಲು ಆಗ್ರಹ

ಹುಬ್ಬಳ್ಳಿ: ವಾಣಿಜ್ಯ ನಗರಿಗೆ ರೈಲುಗಳ ಸಂಚಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿ ಮತ್ತು ಪುಣೆ ನಡುವೆ ವಂದೇ ಭಾರತ್ ಎಕ್ಸ್​​ಪ್ರೆಸ್​ಗೆ ಚಾಲನೆ ನೀಡಿದ್ದರು. ಇದೀಗ ಹುಬ್ಬಳ್ಳಿ ಜನತೆ ಮತ್ತಷ್ಟು ರೈಲ್ವೆ ಬೇಡಿಕೆಗಳನ್ನು ಇಟ್ಟಿದ್ದಾರೆ. 

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಮತ್ತು ಶ್ರೀ ಸಿದ್ದಾರೂಡ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ರೈಲ್ವೆ ಬೇಡಿಕೆಗಳ ಮನವಿ ಸಲ್ಲಿಸಿದೆ.

ಬೇಡಿಕೆಗಳ ಪಟ್ಟಿ ಹೀಗಿದೆ ನೋಡಿ

ಇಂದು (ಸೆಪ್ಟೆಂಬರ್​ 16) ಬೆಳಗಾವಿಯಲ್ಲಿ ವಿ ಸೋಮಣ್ಣ ಅವರನ್ನು ಭೇಟಿ ಮಾಡಿದ ನಿಯೋಗ, ಈ ಭಾಗದ ರೇಲ್ವೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ. ಹುಬ್ಬಳ್ಳಿಯಿಂದ ಬೆಳಿಗ್ಗೆ 5 ಗಂಟೆಗೆ ವಂದೇ ಭಾರತ್​​ ರೈಲು ಆರಂಭಿಸಿ 11 ರೊಳಗೆ ರಾಜಧಾನಿ ಬೆಂಗಳೂರು ತಲುಪುವಂತಾಗಬೇಕು.

ಹುಬ್ಬಳ್ಳಿಯಿಂದ ಶಿರಡಿಗೆ ನೇರ ಸಂಪರ್ಕದ ರೈಲು ಸೌಲಭ್ಯ ಕಲ್ಪಿಸಬೇಕು. ಹುಬ್ಬಳ್ಳಿ-ಬೆಂಗಳೂರು ಮತ್ತು ಹುಬ್ಬಳ್ಳಿ-ಮುಂಬೈ ನಡುವೆ ವಂದೇ ಭಾರತ್​​ ಸ್ಲೀಪರ್​​ ಕೋಚ್ ರೈಲು ಪ್ರಾರಂಭಿಸಬೇಕು ಎಂದು ನಿಯೋಗ ಸಲ್ಲಿಸಿದ ಬೇಡಿಕೆ ಪಟ್ಟಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ, ಗದಗ-ಲಕ್ಷ್ಮೇಶ್ವರ -ಯಳವಿಗಿ - ಹಾವೇರಿ ನಡುವೆ ಹೊಸ ರೈಲು ಮಾರ್ಗದ ಶಂಕು ಸ್ಥಾಪನೆ ಮಾಡಲು ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಅಲ್ಲದೇ ದಿ.ಸುರೇಶ ಅಂಗಡಿಯವರ ಕನಸಿನ ಯೋಜನೆಯಾದ ಧಾರವಾಡ - ಕಿತ್ತೂರ- ಬೆಳಗಾವಿ ರೈಲು ಮಾರ್ಗ ಆರಂಭಿಸಬೇಕೆಂದು ಒತ್ತಾಯಿಸಲಾಯಿತು.

ಬೇಡಿಕೆಗಳ ಬಗ್ಗೆ ಪೂರಕವಾಗಿ ಸ್ಪಂದಿಸಿದ ಸಚಿವ ಸೋಮಣ್ಣ, ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ವಿಶ್ವಾಸ ನೀಡಿದ್ದಾರೆ. ನಿಯೋಗದಲ್ಲಿ ಮಾಜಿ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಗಿರೀಶ ಸುಂಕದ, ಗೌತಮಚಂದ ಗುಲೇಚಾ, ಪ್ರಕಾಶ ಕಟಾರಿಯಾ, ಸುಭಾಸ ಡಂಕ ಹಲವರಿದ್ದರು.

mysore-dasara_Entry_Point