DK Shivakumar beard:ಫಲಿತಾಂಶಕ್ಕೂ ಮುನ್ನ ಡಿಕೆಶಿ ಗಡ್ಡಕ್ಕೆ ಬಿತ್ತು ಕತ್ತರಿ; ಅಣ್ಣನ ಗಡ್ಡದ ವಿಚಾರಕ್ಕೆ ಕಣ್ಣೀರು ಹಾಕಿದ್ದ ಡಿಕೆ ಸುರೇಶ್
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar Beard:ಫಲಿತಾಂಶಕ್ಕೂ ಮುನ್ನ ಡಿಕೆಶಿ ಗಡ್ಡಕ್ಕೆ ಬಿತ್ತು ಕತ್ತರಿ; ಅಣ್ಣನ ಗಡ್ಡದ ವಿಚಾರಕ್ಕೆ ಕಣ್ಣೀರು ಹಾಕಿದ್ದ ಡಿಕೆ ಸುರೇಶ್

DK Shivakumar beard:ಫಲಿತಾಂಶಕ್ಕೂ ಮುನ್ನ ಡಿಕೆಶಿ ಗಡ್ಡಕ್ಕೆ ಬಿತ್ತು ಕತ್ತರಿ; ಅಣ್ಣನ ಗಡ್ಡದ ವಿಚಾರಕ್ಕೆ ಕಣ್ಣೀರು ಹಾಕಿದ್ದ ಡಿಕೆ ಸುರೇಶ್

DK Shivakumar trims his beard: ಚುನಾವಣೆ ಘೋಷಣೆಯಾಗುವ ಕೆಲ ದಿನಗಳ ಹಿಂದಿನಿಂದಲೇ ಡಿಕೆ ಶಿವಕುಮಾರ್ ಗಡ್ಡ ಬಿಟ್ಟಿದ್ದರು. ಬಿಜೆಪಿಯವರ ಕಾಟದಿಂದ ನಮ್ಮಣ್ಣ ಗಡ್ಡ ಬಿಟ್ಟಿದ್ದಾರೆ. ಮೇ 13ರಂದು ಅದಕ್ಕೆ ಉತ್ತರ ಸಿಗಲಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಕನಕಪುರದ ಮತದಾರರ ಎದುರು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಇದೀಗ ಡಿಕೆಶಿ ಗಡ್ಡ ತೆಗೆಸಿದ್ದಾರೆ.

ಡಿಕೆಶಿ ಗಡ್ಡಕ್ಕೆ ಬಿತ್ತು ಕತ್ತರಿ
ಡಿಕೆಶಿ ಗಡ್ಡಕ್ಕೆ ಬಿತ್ತು ಕತ್ತರಿ

ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election) ನಿನ್ನೆ ( ಮೇ 10) ಮತದಾನ ನಡೆದಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್​ ಬಹುಮತ ಪಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿವೆ. ಫಲಿತಾಂಶಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಗಡ್ಡ (DK Shivakumar beard) ತೆಗೆಸಿದ್ದಾರೆ.

ಚುನಾವಣೆ ಘೋಷಣೆಯಾಗುವ ಕೆಲ ದಿನಗಳ ಹಿಂದಿನಿಂದಲೇ ಡಿಕೆಶಿ ಗಡ್ಡ ಬಿಟ್ಟಿದ್ದರು. ಬಿಜೆಪಿಯವರ ಕಾಟದಿಂದ ನಮ್ಮಣ್ಣ ಗಡ್ಡ ಬಿಟ್ಟಿದ್ದಾರೆ. ಮೇ 13ರಂದು ಅದಕ್ಕೆ ಉತ್ತರ ಸಿಗಲಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಕನಕಪುರದ ಮತದಾರರ ಎದುರು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಆದರೆ ಫಲಿತಾಂಶಕ್ಕೆ ಮುನ್ನವೇ ಅವರು ಗಡ್ಡ ತೆಗೆಸಿರುವುದು ಕುತೂಹಲ ಮೂಡಿಸಿದೆ.

ಇಂದು ( ಮೇ 11) ಬೆಳಿಗ್ಗೆ ಕನಕಪುರದ ನಿವಾಸದಲ್ಲಿ ಕಟಿಂಗ್ ಮಾಡಿಸಿಕೊಂಡು ಗಡ್ಡವನ್ನು ಟ್ರಿಮ್‌ ಮಾಡಿಸಿಕೊಂಡ ಡಿಕೆಶಿ, ತಮ್ಮ ಸಹೋದರ ಸುರೇಶ್ ಜೊತೆಯಲ್ಲಿ ಕನಕಪುರದ ಪ್ರಸಿದ್ಧ ವಾಸು ಹೋಟೆಲ್‌ನಲ್ಲಿ ದೋಸೆ ಸವಿದರು.

ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಶಿವಕುಮಾರ್, ಈ ಬಾರಿಯ ಚುನಾವಣೆಯಲ್ಲಿ ಕನಕಪುರ ಕ್ಷೇತ್ರ ರಾಜ್ಯಕ್ಕೆ ಮಾದರಿ ಆಗಿದೆ. ಇಲ್ಲಿನ ಪ್ರತಿ ಮತದಾರರು ತಾವೇ ಶಿವಕುಮಾರ್ ಆಗಿ ಪ್ರಚಾರ ಮಾಡುತ್ತ ಮತ ಹಾಕಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಕೋಡಿಹಳ್ಳಿಯಲ್ಲಿ ಇರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಡಿಕೆ ಸಹೋದರರು ತಾಯಿ ಗೌರಮ್ಮರ ಕಾಲಿಗೆ ಬಿದ್ದು ನಮಸ್ಕರಿಸಿದರು. ತಾಯಿ ಜೊತೆ ಒಂದಿಷ್ಟು ಹೊತ್ತು ಮಾತನಾಡಿದರು. ಬಳಿಕ ಬೆಂಗಳೂರಿಗೆ ತೆರಳಿದರು.

ಅಣ್ಣನ ಗಡ್ಡದ ವಿಚಾರಕ್ಕೆ ಕಣ್ಣೀರು ಹಾಕಿದ್ದ ಡಿಕೆ ಸುರೇಶ್‌

ಕನಕಪುರದಲ್ಲಿ ಅಣ್ಣ ಡಿಕೆಶಿ ಪರ ಪ್ರಚಾರ ಮಾಡಿದ್ದ ಸಂಸದ ಡಿ.ಕೆ. ಸುರೇಶ್‌, ಕೆಲವರು ನಮ್ಮ ಅಣ್ಣನಿಗೆ ಗಡ್ಡ ಯಾಕೆ ತೆಗೆದಿಲ್ಲ ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ಈ ತಾಲೂಕಿನ ಜನರು ನೀಡಬೇಕು. ಬಿಜೆಪಿಯವರ ಕಾಟದಿಂದ ನಮ್ಮಣ್ಣ ಗಡ್ಡ ಬಿಟ್ಟಿದ್ದಾರೆ. ಮೇ 13ರಂದು ಅದಕ್ಕೆ ಉತ್ತರ ಸಿಗಲಿದೆ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದರು.

ಈ ಬಾರಿ ಕಾಂಗ್ರೆಸ್​ ಗೆಲ್ಲಿಸುವ ಶಪಥ ಮಾಡಿ ಡಿಕೆ ಶಿವಕುಮಾರ್​ ಗಡ್ಡ ಬಿಟ್ಟಿದ್ದಾರೆ ಎಂಬ ಊಹಾಪೋಹಗಳೂ ಹರಿದಾಡಿದ್ದವು. ಇದೀಗ ಗಡ್ಡ ತೆಗೆದದ್ದು ನೋಡಿದ್ರೆ ಅವರ ಶಪಥ ಈಡೇರಿತಾ ಎಂಬ ಪ್ರಶ್ನೆಗಳು ಮೂಡಿವೆ.

ವರದಿ: ಎಚ್​ ಮಾರುತಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ನಿನ್ನೆ( ಮೇ 10) ಮತದಾನ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಎಕ್ಸಿಟ್​ ಪೋಲ್ ಫಲಿತಾಂಶಗಳು ಕಾಂಗ್ರೆಸ್​​ಗೆ ಬಹುಮತ ಸಿಗುವ ಸಾಧ್ಯತೆಗಳಿವೆ ಎಂದು ತಿಳಿಸಿವೆ. ಯಾವ ಪಕ್ಷವೂ ಮ್ಯಾಜಿಕ್​ ನಂಬರ್​ 113 ಅನ್ನು ದಾಟಲ್ಲ ಎಂದು ಸೂಚಿಸಿವೆ. ಮತದಾನ-ಎಕ್ಸಿಟ್​ ಪೋಲ್ ಕುರಿತ ಮೀಮ್ಸ್ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Whats_app_banner