Health Guidelines: ಚಳಿ ಚಳಿ ತಾಳೆನು ಈ ಚಳಿಯಾ, ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Health Guidelines: ಚಳಿ ಚಳಿ ತಾಳೆನು ಈ ಚಳಿಯಾ, ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Health Guidelines: ಚಳಿ ಚಳಿ ತಾಳೆನು ಈ ಚಳಿಯಾ, ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

do's and don'ts in winter season: ಆರೋಗ್ಯ ಇಲಾಖೆಯು ಈ ಶೀತ, ಚಳಿಗಾಲದ ವಾತಾವರಣದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಸಲಹೆಗಳನ್ನು ನೀಡಿದೆ. ಮಾಂಡೌಸ್‌ ಚಂಡಮಾರುತದಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಚಳಿ ಹೆಚ್ಚಾಗಿದ್ದು, ಅಲ್ಲಲ್ಲಿ ಮಳೆ, ಮಂಜು ಕವಿದ ವಾತಾವರಣವಿದೆ. ಇದರಿಂದ ಸಾಕಷ್ಟು ಜನರು ಆರೋಗ್ಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

Health Guidelines: ಚಂಡಮಾರುತದ ಪರಿಣಾಮ ಬದಲಾಗಿದೆ ರಾಜ್ಯದ ಹವಾಮಾನ, ಮಾರ್ಗಸೂಚಿ ಬಿಡುಗಡೆ
Health Guidelines: ಚಂಡಮಾರುತದ ಪರಿಣಾಮ ಬದಲಾಗಿದೆ ರಾಜ್ಯದ ಹವಾಮಾನ, ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ ಮಳೆ, ಶೀತ ಗಾಳಿ ಮತ್ತು ಅತಿ ಕಡಿಮೆ ತಾಪಮಾನವು ವರದಿಯಾಗಿದ್ದು ಹಾಗೂ ಮುಂಬರುವ ಚಳಿಗಾಲದ ದಿನಗಳಲ್ಲಿ ಎಲ್ಲ ಸಾರ್ವಜನಿಕರು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಆರೋಗ್ಯ ಇಲಾಖೆಯು ಈ ಶೀತ, ಚಳಿಗಾಲದ ವಾತಾವರಣದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಸಲಹೆಗಳನ್ನು ನೀಡಿದೆ. ಮಾಂಡೌಸ್‌ ಚಂಡಮಾರುತದಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಚಳಿ ಹೆಚ್ಚಾಗಿದ್ದು, ಅಲ್ಲಲ್ಲಿ ಮಳೆ, ಮಂಜು ಕವಿದ ವಾತಾವರಣವಿದೆ. ಇದರಿಂದ ಸಾಕಷ್ಟು ಜನರು ಆರೋಗ್ಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಚಳಿಗಾಲದ ದಿನಗಳಲ್ಲಿ ಸಾರ್ವಜನಿಕರು, ಮಕ್ಕಳು ( ನವಜಾತ ಶಿಶುಗಳು ಸೇರಿದಂತೆ), ಗರ್ಭಿಣಿಯರು, ವೃದ್ಧರು, ವಿಶೇಷವಾಗಿ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಆರೋಗ್ಯ ಸಲಹೆಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಸುಲಭವಾಗಿ ಜೀರ್ಣವಾಗುವ, ಬಿಸಿಬಿಸಿ ಆಹಾರ ಸೇವಿಸಬೇಕು. ಯಾವಾಗಲೂ ಸ್ವೆಟರ್‌, ಸಾಕ್ಸ್‌ ಧರಿಸಬೇಕು. ಮನೆಯ ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ ಎಂದು ಸೂಚಿಸಿದೆ. ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯುವುದು, ಜೀರ್ಣವಾಗುವ ಆಹಾರ ಅಥವಾ ತಾಜಾ ಆಹಾರವನ್ನು ಸೇವಿಸೋದು ಉತ್ತಮ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಏನು ಮಾಡಬೇಕು?

- ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯುವುದು

- ಜೀರ್ಣವಾಗುವ ಆಹಾರ ಅಥವಾ ತಾಜಾ ಆಹಾರವನ್ನು ಸೇವಿಸೋದು

- ಮನೆಯ ಹೊರಗೂ ಒಳಗೂ ಸ್ವೆಟರ್ ಹಾಗೂ ಕಿವಿ ಮುಚ್ಚುವ ಟೋಪಿ ಹಾಕಿಕೊಳ್ಳಿ

- ಸ್ನಾನಕ್ಕೆ ಬೆಚ್ಚಗಿನ ನೀರನ್ನೇ ಬಳಸುವುದು ಉತ್ತಮ

- ಅನಗತ್ಯವಾಗಿ ಹೊರಗಿನ ಓಡಾಟ ತಪ್ಪಿಸಿ

- ನೆಗಡಿ, ಕೆಮ್ಮ ಹಾಗೂ ಜ್ವರ ಇರುವವರಿಂದ ಅಂತರ ಕಾಯ್ದುಕೊಳ್ಳಿ

- ಕೈ-ಕಾಲುಗಳನ್ನು ಅಗಾಗ್ಗೆ ಸೋಪು ಬಳಸಿ ತೊಳೆಯಿರಿ

- ಜ್ವರ ಹಾಗೂ ಫ್ಲೂ ಲಕ್ಷಣಗಳಿದ್ದರೆ ವೈದ್ಯರ ಸಲಹೆ ಪಡೆದು ಔಷಧಿ ತೆಗೆದುಕೊಳ್ಳಿ ಎಂದು ಆರೋಗ್ಯ ಇಲಾಖೆಯು ಸಲಹೆ ನೀಡಿದೆ.

ಏನು ಮಾಡಬಾರದು?

ಆರೋಗ್ಯ ಇಲಾಖೆಯು ಮಾಡಿರುವ ಟ್ವೀಟ್‌ನಲ್ಲಿ ಈ ಚಳಿಗಾಲದಲ್ಲಿ ಆರೋಗ್ಯ ಕಾಳಜಿ ವಹಿಸುವ ಸಲುವಾಗಿ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳನ್ನು ತಿಳಿಸಿದೆ. ವಿಶೇಷವಾಗಿ, ಈ ಸಂದರ್ಭದಲ್ಲಿ ಏನು ಮಾಡಬಾರದು ಎನ್ನುವ ಸಲಹೆಗಳನ್ನು ನೀಡಿದೆ.

- ತಣ್ಣಗಿನ ಪಾನೀಯ, ಐಸ್ ಕ್ರೀಮ್ ಗಳನ್ನು ಸೇವಿಸಬಾರದು

- ಫ್ರಿಡ್ಜ್ ನಲ್ಲಿಟ್ಟ ನೀರು ಕುಡಿಯಬಾರದು

- ವೀಕೆಂಡ್ ಟೂರ್ ಹಾಗೂ ಗಿರಿಧಾಮಗಳಿಗೆ ಹೋಗುವುದನ್ನು ತಪ್ಪಿಸಿ

- ಹೆಚ್ಚಿನ ಮಸಾಲ ಇರೋ ಆಹಾರ & ಜಂಕ್ ಫುಡ್ ಅವಾಯ್ಡ್ ಮಾಡಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಚಳಿಗಾಲದಲ್ಲಿ ಆರೋಗ್ಯ ಸಂಬಂಧಿತ ತೊಂದರೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಹೃದಯದ ತೊಂದರೆ ಇರುವವರು, ಉಸಿರಾಟದ ತೊಂದರೆ ಇರುವವರು ಹೆಚ್ಚಿನ ಗಮನ ನೀಡಬೇಕು. ಯಾವುದೇ ಆರೋಗ್ಯ ತೊಂದರೆಗಳನ್ನು ಕಡೆಗಣಿಸದೆ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.

Whats_app_banner