Drinking water supply scheme: ಗ್ರಾಮೀಣ ಮನೆಗಳಿಗೆ ಮುಂದಿನ ವರ್ಷದೊಳಗೆ ಕುಡಿಯುವ ನೀರು ಪೂರೈಕೆ- ಸಚಿವ ಗೋವಿಂದ ಎಂ ಕಾರಜೋಳ
ಕನ್ನಡ ಸುದ್ದಿ  /  ಕರ್ನಾಟಕ  /  Drinking Water Supply Scheme: ಗ್ರಾಮೀಣ ಮನೆಗಳಿಗೆ ಮುಂದಿನ ವರ್ಷದೊಳಗೆ ಕುಡಿಯುವ ನೀರು ಪೂರೈಕೆ- ಸಚಿವ ಗೋವಿಂದ ಎಂ ಕಾರಜೋಳ

Drinking water supply scheme: ಗ್ರಾಮೀಣ ಮನೆಗಳಿಗೆ ಮುಂದಿನ ವರ್ಷದೊಳಗೆ ಕುಡಿಯುವ ನೀರು ಪೂರೈಕೆ- ಸಚಿವ ಗೋವಿಂದ ಎಂ ಕಾರಜೋಳ

Drinking water supply scheme: ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಲ್ಲ ಗ್ರಾಮೀಣ ಮನೆಗಳಿಗೆ 2024 ರೊಳಗಾಗಿ ಸೇವಾ ಮಟ್ಟದಂತೆ ಸುಸ್ಥಿರ ಜಲ ಮೂಲಗಳಿಂದ ಶುದ್ಧ ಕುಡಿಯುವ ನೀರನ್ನು ನಳ ನೀರು ಸಂಪರ್ಕ ಮೂಲಕ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ರಾಜ್ಯದಲ್ಲಿ ಎಲ್ಲ ತಾಲೂಕುಗಳಲ್ಲಿ ಪ್ರಾರಂಭವಾಗಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

<p>ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ&nbsp;</p>
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ&nbsp;

ಬೆಂಗಳೂರು:̧ ಮುಂದಿನ ವರ್ಷದೊಳಗೆ ರಾಜ್ಯದ ಎಲ್ಲಾ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ವಿಧಾನ ಪರಿಷತ್‌ಗೆ ತಿಳಿಸಿದರು.

ಅವರು, ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ ಕೇಶವ ಪ್ರಸಾದ್ ಎಸ್., ಕೆ.ಎ. ತಿಪ್ಪೇಸ್ವಾಮಿ, ಹಾಗೂ ಪ್ರಕಾಶ್ ಕೆ ರಾಥೋಡ್ ಅವರು ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತ ಈ ವಿಚಾರ ತಿಳಿಸಿದರು.

ಕೇಂದ್ರ ಸರ್ಕಾರವು 2019ರ ಆಗಸ್ಟ್‌ 15ರಂದು “ಜಲ-ಜೀವನ್ ಮಿಷನ್” ಯೋಜನೆಯನ್ನು ಘೋಷಿಸಿತು. ಈ ಯೋಜನೆಯ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದ ಎಲ್ಲಾ ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕವನ್ನು ಒದಗಿಸಲು ಉದ್ದೇಶಿಸಲಾಗಿದೆ. ಸದರಿ ಯೋಜನೆಯ ಕಾರ್ಯಕಾರಿ ಮಾರ್ಗಸೂಚಿಯನ್ನು ಅದೇ ವರ್ಷ ಡಿಸೆಂಬರ್‌ ತಿಂಗಳಲ್ಲಿ ಪ್ರಕಟಿಸಲಾಗಿದೆ ಎಂದು ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಎಲ್ಲ ಗ್ರಾಮೀಣ ಮನೆಗಳಿಗೆ 2024ರೊಳಗಾಗಿ ಸೇವಾ ಮಟ್ಟದಂತೆ ಸುಸ್ಥಿರ ಜಲ ಮೂಲಗಳಿಂದ ಶುದ್ಧ ಕುಡಿಯುವ ನೀರನ್ನು ನಳ ನೀರು ಸಂಪರ್ಕ ಮೂಲಕ ಒದಗಿಸುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ರಾಜ್ಯದಲ್ಲಿ ಎಲ್ಲ ತಾಲೂಕುಗಳಲ್ಲಿ ಪ್ರಾರಂಭವಾಗಿವೆ ಎಂದು ತಿಳಿಸಿದರು.

ಜಲಜೀವನ್ ಮಿಷನ್ ಮಾರ್ಗಸೂಚಿಯನ್ವಯ ಬೃಹತ್ ನೀರು ಸರಬರಾಜಿನ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಶೇಕಡ 50, ರಾಜ್ಯ ಸರ್ಕಾರದಿಂದ ಶೇಕಡ 50 ಅನುದಾನ ಹಂಚಿಕೆಯಾಗಿದೆ. ಸಮುದಾಯದಿಂದ ಯಾವುದೇ ವಂತಿಗೆ ಪಡೆಯುವುದಿಲ್ಲ. ಎಫ್.ಹೆಚ್.ಟಿ.ಸಿ (ಸಾಮಾನ್ಯ) ಕಾಮಗಾರಿಗಳಿಗೆ ಕೇಂದ್ರದ ಪಾಲು ಶೇಕಡ 45 ರಾಜ್ಯದ ಪಾಲು ಶೇಕಡ 45, ಸಮುದಾಯದ ವಂತಿಗೆ ಶೇಕಡ 10 ಹಾಗೂ ಎಫ್.ಹೆಚ್.ಟಿ.ಸಿ (ಎಸ್.ಸಿ / ಎಸ್.ಟಿ) ಕಾಮಗಾರಿಗಳಿಗೆ ಕೇಂದ್ರದ ಪಾಲು ಶೇಕಡ 47.5, ರಾಜ್ಯದ ಪಾಲು ಶೇಕಡ 47.5 ಹಾಗೂ ಸಮುದಾಯದ ವಂತಿಗೆ ಶೇಕಡ 5 ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಶೇಕಡ 62 ಕಾಮಗಾರಿಗಳು ಪ್ರಗತಿಯಲ್ಲಿವೆ.

ಬಹುಗ್ರಾಮಗಳ ಕುಡಿಯುವ ನೀರು ಪೂರೈಸಲು ಸಾಧ್ಯವಾದಷ್ಟು ಮೇಲ್ಮೈನೀರನ್ನು (Surface Water) ತೆಗೆದುಕೊಳ್ಳಲಾಗಿದೆ. ಎಲ್ಲಿ ಮೇಲ್ಮೈ ನೀರು (Surface Water) ಇಲ್ಲವೋ ಅಂತಹ ಸ್ಥಳಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಿ, ನೀರನ್ನು ಪರೀಕ್ಷೆ ಮಾಡಿ ಶುದ್ದೀಕರಿಸಿ ನೀರು ಒದಗಿಸಲಾಗುವುದು. ನಿಗದಿತ ಅವಧಿಯೊಳಗೆ ಗುರಿ ತಲುಪಿ ರಾಜ್ಯದ ಎಲ್ಲ ಗ್ರಾಮೀಣ ಮನೆಗಳ ಜನರಿಗೆ ಸುರಕ್ಷಿತ ಹಾಗೂ ಶುದ್ದ ಕುಡಿಯುವ ನೀರಿನ್ನು ಪೂರೈಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.

ಗಮನಿಸಬಹುದಾದ ಸುದ್ದಿ

Facial recognition at Tirupati: ಮಾ.1ರಿಂದ ತಿರುಪತಿಯಲ್ಲಿ ಫೇಷಿಯಲ್‌ ರೆಕಗ್ನಿಶನ್‌ ಬಳಕೆ; ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ?

ತಿರುಪತಿಯಲ್ಲಿರುವ ವಿಶ್ವಪ್ರಸಿದ್ಧ ವೆಂಕಟೇಶ್ವರ ದೇಗುಲ (Lord Venkateswara shrine, Tirupati) ದಲ್ಲಿ ಮಾರ್ಚ್ 1 ರಿಂದ ಮುಖ ಗುರುತಿಸುವಿಕೆ ತಂತ್ರಜ್ಞಾನ (facial recognition technology) ವನ್ನು ಪರಿಚಯಿಸಲಾಗುತ್ತಿದೆ. ಟೋಕನ್ ರಹಿತ ದರ್ಶನ ಮತ್ತು ವಸತಿ ಹಂಚಿಕೆ ವ್ಯವಸ್ಥೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಆಲೋಚನೆಯು ಹೆಚ್ಚಿನ ಸಂಖ್ಯೆಯ ಯಾತ್ರಿಕರಿಗೆ ಹೆಚ್ಚು ಪರಿಣಾಮಕಾರಿ ಸೇವೆಗಳನ್ನು ಒದಗಿಸುವುದಕ್ಕೆ ಇದು ನೆರವಾಗುವ ಉದ್ದೇಶದಿಂದ ಕೂಡಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಹೇಳಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner