ನಕಲಿ ಮತದಾರರ ಗುರುತಿನ ಚೀಟಿ ಸಮಸ್ಯೆ ಬಗೆಹರಿಸಿದ ಚುನಾವಣಾ ಆಯೋಗ; ಎರಡು ಕಾರ್ಡ್‌ ಗುರುತಿನ ಚೀಟಿ ವಿತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ನಕಲಿ ಮತದಾರರ ಗುರುತಿನ ಚೀಟಿ ಸಮಸ್ಯೆ ಬಗೆಹರಿಸಿದ ಚುನಾವಣಾ ಆಯೋಗ; ಎರಡು ಕಾರ್ಡ್‌ ಗುರುತಿನ ಚೀಟಿ ವಿತರಣೆ

ನಕಲಿ ಮತದಾರರ ಗುರುತಿನ ಚೀಟಿ ಸಮಸ್ಯೆ ಬಗೆಹರಿಸಿದ ಚುನಾವಣಾ ಆಯೋಗ; ಎರಡು ಕಾರ್ಡ್‌ ಗುರುತಿನ ಚೀಟಿ ವಿತರಣೆ

ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಕೆಲವು ಕಾರಣದಿಂದ ಸಮಸ್ಯೆ ಆಗಿರುವವರಿಗೆ ಕೇಂದ್ರ ಚುನಾವಣೆ ಆಯೋಗವು ಪರಿಹಾರ ನೀಡಲು ಮುಂದಾಗಿದೆ. ಇಂತಹವರಿಗೆ ಹೊಸ ಚೀಟಿ ಸಿಗಲಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

 ಕೇಂದ್ರ ಚುನಾವಣಾ ಆಯೋಗವು ಮತದಾರರ ಚೀಟಿ ಗೊಂದಲ ಇರುವವರ ಸಮಸ್ಯೆ ಬಗೆಹರಿಸಲು ಮುಂದಾಗಿದೆ.
ಕೇಂದ್ರ ಚುನಾವಣಾ ಆಯೋಗವು ಮತದಾರರ ಚೀಟಿ ಗೊಂದಲ ಇರುವವರ ಸಮಸ್ಯೆ ಬಗೆಹರಿಸಲು ಮುಂದಾಗಿದೆ.

ದೆಹಲಿ: ಒಂದೇ ಸಂಖ್ಯೆಯನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ಸಮಸ್ಯೆಯನ್ನು ಚುನಾವಣಾ ಆಯೋಗ ಪರಿಹರಿಸಿದೆ. ಅಂತಹ ಕಾರ್ಡ್‌ ಗಳನ್ನು ಹೊಂದಿರುವ ಮತದಾರರಿಗೆ ಹೊಸಸಂಖ್ಯೆಗಳೊಂದಿಗೆ ಹೊಸ ಗುರುತಿನ ಚೀಟಿ ನೀಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 20 ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದೂ ಹೇಳಿದೆ.ಒಂದೇ ರೀತಿಯ ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ಸಂಖ್ಯೆಯಿರುವ ಮತದಾರರ ಗುರುತಿನ ಚೀಟಿಗಳು ಅತಿ ಕಡಿಮೆ ಸಂಖ್ಯೆಯಲ್ಲಿವೆ. ಇಂತಹ ಗುರುತಿನ ಚೀಟಿಗಳು ಭಾರಿ ಪ್ರಮಾಣದಲ್ಲೇನೂ ಇಲ್ಲ. 10.50 ಲಕ್ಷ ಮತಗಟ್ಟೆಗಳ ಪೈಕಿ ನಾಲ್ಕು ಮತಗಟ್ಟೆಗಳಲ್ಲಿಒಂದು ಇರಬಹುದು. ಇದರಿಂದ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾ ಆಯೋಗದ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೂತ್‌ ಮಟ್ಟದಲ್ಲಿ ನಡೆದ ಪರಿಶೀಲನೆ ಸಂದರ್ಭದಲ್ಲಿ ಒಂದೇ ರೀತಿಯ ಎಪಿಕ್ ಸಂಖ್ಯೆಯಿರುವ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಮತದಾರರು ನೈಜ ಮತದಾರರಾಗಿದ್ದಾರೆ. ಆದರೆ ಅವರು ಬೇರೆ ಬೇರೆ ಮತ ಕ್ಷೇತ್ರದ ಮತ್ತು ಬೇರೆ ಬೇರೆ ಮತಗಟ್ಟೆಗೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ನಕಲಿ ಮತದಾರರ ಗುರುತಿನ ಚೀಟಿ ಅಕ್ರಮ ಕುರಿತು ತನಿಖೆ ನಡೆಸಲು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು. ಆಗ ನಕಲಿ ಗುರುತಿನ ಚೀಟಿ ಪತ್ತೆಗೆ ಆಯೋಗ ಮುಂದಾಗಿತ್ತು. ಈ ಸಮಸ್ಯೆ ದಶಕಗಳಿಂದ ಇದ್ದು, ಮುಂದಿನ ಮೂರು ತಿಂಗಳೊಳಗಾಗಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದೆ.

ಚುನಾವಣಾ ಆಯೋಗವು, ಈ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 4,123 ವಿಧಾನ ಸಭಾ ಕ್ಷೇತ್ರಗಳ 10.50 ಲಕ್ಷ ಮತದಾನ ಕ್ಷೇತ್ರದ, 99 ಕೋಟಿ ಮತದಾರರ ಗುರುತಿನ ಚೀಟಿಯನ್ನು ಪರಿಶೀಲನೆ ನಡೆಸಿತ್ತು.

ಪ್ರತಿ ಮತಗಟ್ಟೆಗೆ ಸರಾಸರಿ 1,000 ಮತದಾರರಿರುತ್ತಾರೆ. 2005 ರಿಂದಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಆ ಸಂದರ್ಭದಲ್ಲಿ ಕ್ಷೇತ್ರವಾರು ಪರಿಶೀಲನೆ ನಡೆಸಲಾಗುತ್ತಿತ್ತು. 2008 ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಾದ ನಂತರ ಮತದಾರರ ಕ್ಷೇತ್ರಗಳು ಬದಲಾಗಿವೆ. ಆಗ ಹೊಸ ಕ್ಷೇತ್ರಗಳಿಗೆ ಬದಲಾದ ಮತದಾರರು ಎರಡೆರಡು ಗುರುತಿನ ಚೀಟಿಗಳನ್ನು ಹೊಂದುವಂತಾಗಿದೆ ಎಂದು ಆಯೋಗದ ಮೂಲಗಳು ಹೇಳಿವೆ.

ಚುನಾವಣಾ ಆಯೋಗ ದಾಖಲೆಗಳ ಆಧಾರದ ಮೇಲೆ ಪ್ರತಿಕ್ರಿಯೆ ನೀಡಿತ್ತು. ಆದರೆ ನಾವು ನಕಲಿ ಕಾರ್ಡ್‌ ಗಳು ಇರುವುದನು ಗಮನದಲ್ಲಿಟ್ಟುಕೊಂಡು ಮಾತನಾಡಿದ್ದೆವು ಎಂದು ಟಿಎಂಸಿ ಮುಖಂಡರೊಬ್ಬರು ಹೇಳಿದ್ದಾರೆ.

ವರದಿ:ಎಚ್‌. ಮಾರುತಿ, ಬೆಂಗಳೂರು

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.