ಜಿಟಿಟಿಸಿ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ 32 ಕಾಲೇಜುಗಳಲ್ಲಿ ಅವಕಾಶ, ಆಧುನಿಕ ಸೌಲಭ್ಯ
ರಾಜ್ಯಾದ್ಯಂತ ಇರುವ ಜಿಟಿಟಿಸಿ 32 ಡಿಪ್ಲೋಮಾ ಕಾಲೇಜುಗಳಲ್ಲಿ 2025-26ನೇ ಸಾಲಿನ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಎಸ್‌ಎಸ್‌ಎಲ್‌ಸಿ ಪಾಸಾಗಿರುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರವೇಶಾತಿ ಪ್ರಕ್ರಿಯೆಯನ್ನು ಮೆರಿಟ್ ಮತ್ತು ರೋಸ್ಟರ್ ಆಧಾರದ ಮೂಲಕ ನಡೆಸಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ನಂತರ ಹೆಚ್ಚಿನ ವಿದ್ಯಾರ್ಥಿಗಳು ಮುಂದೇನು ಎಂಬ ಯೋಚನೆಯಲ್ಲಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಪಿಯುಸಿಗೆ ಸೇರಿಕೊಳ್ಳುತ್ತಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ತಾವು ಮೊದಲೇ ನಿರ್ಧರಿಸಿದ ಕೋರ್ಸ್‌ಗೆ ಸೇರಿಕೊಳ್ಳುತ್ತಾರೆ. ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಇಲ್ಲೊಂದು ಸಲಹೆ ಇದೆ. ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ದಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯದಾದ್ಯಂತ ಜಿಟಿಟಿಸಿಯ 32 ಕಾಲೇಜುಗಳಿದ್ದು, ಆಯ್ಕೆಯ ಅನುಸಾರ ಕೋರ್ಸ್‌ಗಳಿಗೆ ಸೇರಿಕೊಳ್ಳಬಹುದು.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)ವು 1972ರಲ್ಲಿ ಡೆನ್ಮಾರ್ಕ್ ಸರ್ಕಾರದ ಸಹಯೋಗ ಮತ್ತು ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಬೆಂಗಳೂರಿನ ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಗೊಂಡಿತು. ಪ್ರಸ್ತುತ ರಾಜ್ಯಾದ್ಯಂತ 32 ಡಿಪ್ಲೋಮಾ ಕಾಲೇಜುಗಳಿವೆ. ಡಿಪ್ಲೋಮಾ, ಪೋಸ್ಟ್ ಡಿಪ್ಲೋಮಾ ಹಾಗೂ ಎಮ್.ಟೆಕ್ ಕೋರ್ಸುಗಳನ್ನು ನಡೆಸುವ 'AICTE'ಯಿಂದ ಅನುಮೋದನೆಗೊಂಡ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆ ಇದಾಗಿದೆ.
ರಾಜ್ಯಾದ್ಯಂತ ಸ್ಥಾಪಿಸಲಾಗಿರುವ 32 ಡಿಪ್ಲೋಮಾ ಕಾಲೇಜುಗಳಿಗೆ 2025- 26ನೇ ಸಾಲಿನ ಡಿಪ್ಲೋಮಾ ಕೋರ್ಸುಗಳಿಗೆ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇದಕ್ಕಾಗಿ ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರವೇಶಾತಿ ಪ್ರಕ್ರಿಯೆಯನ್ನು ಮೆರಿಟ್ ಮತ್ತು ರೋಸ್ಟರ್ ಆಧಾರದ ಮೂಲಕ ನಡೆಸಲಾಗುತ್ತದೆ. ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕಾಗಿ 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. (ಲಿಂಕ್ https://gttc.karnataka.gov.in/ )
ಡಿಪ್ಲೊಮಾ ಕೋರ್ಸ್‌ಗಳು (3+1 ವರ್ಷ): ಈ ಕೋರ್ಸ್‌ನಲ್ಲಿ ಕಡ್ಡಾಯವಾಗಿ 1 ವರ್ಷದ ಇಂಟರ್ನ್‌ಶಿಪ್ ತರಬೇತಿ ಇರುತ್ತದೆ.
- ಡಿಪ್ಲೊಮಾ ಇನ್ ಟೂಲ್ & ಡೈ ಮೇಕಿಂಗ್
- ಡಿಪ್ಲೊಮಾ ಇನ್ ಪ್ರಿಸಿಷನ್ ಮೇಕಿಂಗ್
- ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್
- ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್
- ಡಿಪ್ಲೊಮಾ ಇನ್ ಆಟೋಮೇಷನ್ ಆಂಡ್ ರೊಬೊಟಿಕ್ಸ್
- ಡಿಪ್ಲೊಮಾ ಇನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಂಡ್ ಮಷಿನ್ ಲರ್ನಿಂಗ್
- ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್
ಇಂಟಿಗ್ರೇಟೆಡ್ ಬಿಇ ಕೋರ್ಸ್‌ಗಳು (6 ವರ್ಷ)
- ಇಂಟಿಗ್ರೇಟೆಡ್ ಬಿಇ ಇನ್ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್
- ಇಂಟಿಗ್ರೇಟೆಡ್ ಬಿಇ ಇನ್ ಮೆಕಾಟ್ರಾನಿಕ್ಸ್
- ಇಂಟಿಗ್ರೇಟೆಡ್ ಬಿಇ ಇನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಂಡ್ ಮಷಿನ್ ಲರ್ನಿಂಗ್
ಜಿಟಿಟಿಸಿ ವಿಶೇಷತೆಗಳು
ಜಿಟಿಟಿಸಿ ಡಿಪ್ಲೊಮಾ ಕೋರ್ಸ್‌ಗಳು ವಿವಿಧ ಕಾರಣಗಳಿಂದ ಜನಪ್ರಿಯವಾಗಿವೆ. 3+1 ವರ್ಷದ ಅವಧಿಯಲ್ಲಿ ಕೋರ್ಸ್ ಮುಗಿಸಬಹುದು. ಜಿಟಿಟಿಸಿಯಲ್ಲಿ ಇತ್ತೀಚಿನ ತಂತ್ರಜ್ಞಾನದ ಪ್ರಯೋಗಾಲಯ ಸೌಲಭ್ಯವಿದ್ದು, ಉದ್ಯಮ ಆಧಾರಿತ ಪಠ್ಯಕ್ರಮ ಅನುಸರಿಸಲಾಗಿದೆ. 70 ಶೇ. ಪ್ರಾಯೋಗಿಕ ಪಠ್ಯಕ್ರಮವಿದ್ದು, 30 ಶೇಕಡ ಸಿದ್ಧಾಂತ (ಥಿಯರಿ) ತರಗತಿಗಳನ್ನು ನಡೆಸಲಾಗುತ್ತದೆ. ವಿದೇಶಿ ಭಾಷಾ ಪ್ರಯೋಗಾಲಯಗಳು ಸೇರಿದಂತೆ ಡಿಪ್ಲೊಮಾ ವ್ಯಾಸಂಗ ಮಾಡಿದವರಿಗೆ ಜಾಗತಿಕ ಅವಕಾಶಗಳು ವಿಫುಲವಾಗಿದೆ.
ಇನ್‌ಪ್ಲಾಂಟ್ ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳಿಗೆ 15000ದಿಂದ 30000 ರೂ.ವರೆಗೆ ಸ್ಟೈಪೆಂಡ್ ಸೌಲಭ್ಯವಿದೆ ಎಂದು ಜಿಟಿಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಡಿಪ್ಲೊಮಾ ಕಾಲೇಜುಗಳ ಸಂಪರ್ಕ ಸಂಖ್ಯೆ
- ಬೆಂಗಳೂರು: 9141629575, 9141629580
- ಮೈಸೂರು: 9141630315
- ಮಂಗಳೂರು: 9481265587
- ಕಲಬುರಗಿ: 9113658659
- ಹಾಸನ: 9611674143
- ಬೆಳಗಾವಿ: 9916231899
- ದಾಂಡೇಲಿ: 8618413074
- ಹೊಸಪೇಟೆ: 9845416198
- ಹರಿಹರ: 9845941245
- ಧಾರವಾಡ: 9035630312
- ಕೂಡಲಸಂಗಮ: 9902556110
- ಮದ್ದೂರು: 6362883923
- ಕನಕಪುರ: 6361122792
- ಲಿಂಗಸುಗೂರು: 9902072101
- ಗುಂಡ್ಲುಪೇಟೆ: 8147384716
- ಕಡೂರು: 9902232839
- ಕೋಲಾರ: 9886839574
- ತುಮಕೂರು: 9379853899
- ಶಿವಮೊಗ್ಗ: 9880141054
- ಗೌರಿಬಿದನೂರು: 8884585436
- ಚಿಕ್ಕೋಡಿ: 9880785591
- ಗೋಕಾಕ್: 9538570950
- ಉಡುಪಿ: 9880510585
- ಚಿತ್ರದುರ್ಗ: 9738465834
- ಕೊಪ್ಪಳ: 9986088894
- ಯಾದಗಿರಿ: 9738255123
- ಮಾಗಡಿ: 9379853899
- ದೇವನಹಳ್ಳಿ: 8050758240
- ಶಿಗ್ಗಾವಿ: 9035630312
- ಹಾವೇರಿ: 9916769649
- ಹುಮನಾಬಾದ್: 8867441317
- ಚಳ್ಳಕೆರೆ: 9731754567
ಇದನ್ನೂ ಓದಿ | ಯುಪಿಎಸ್‌ಸಿ ಪ್ರಿಲಿಮ್ಸ್ 2025: ಪ್ರಿಲಿಮ್ಸ್ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆಗೆ 10 ಸಲಹೆಗಳು