ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ನೇರ ಲಿಂಕ್
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ನೇರ ಲಿಂಕ್

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ನೇರ ಲಿಂಕ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿ ಸಿಇಟಿ ಫಲಿತಾಂಶವನ್ನು ಇಂದು (ಮೇ 24) ಪ್ರಕಟಿಸಲಿದೆ. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ರಿಸಲ್ಟ್ ನೋಡಲು ಇಲ್ಲಿದೆ ನೇರ ಲಿಂಕ್‌. ಇಂದು ಬೆಳಿಗ್ಗೆ 11.30ರ ಸುಮಾರಿಗೆ ಫಲಿತಾಂಶ ಹೊರ ಬೀಳಲಿದೆ.

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ನೇರ ಲಿಂಕ್ (ಸಾಂಕೇತಿಕ ಚಿತ್ರ)
ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಇಂದು ಪ್ರಕಟ; ರಿಸಲ್ಟ್‌ ನೋಡಲು ಇಲ್ಲಿದೆ ನೇರ ಲಿಂಕ್ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರಿ (ಕೆಇಎ) ಏಪ್ರಿಲ್ 15,16 ಹಾಗೂ 17 ರಂದು ನಡೆಸಿರುವ ಕರ್ನಾಟಕ ಯುಜಿ ಸಿಟಿಇ ಪರೀಕ್ಷೆಯ ಫಲಿತಾಂಶ ಇಂದು (ಮೇ 24) ಪ್ರಕಟವಾಗಲಿದೆ. ಬೆಳಿಗ್ಗೆ 11.30ಕ್ಕೆ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಯುಜಿ ಸಿಇಟಿ ಫಲಿತಾಂಶ ನೋಡಲು ಲಿಂಕ್‌, ಕೌನ್ಸಿಲಿಂಗ್ ವಿವರ‌, ಅನುತ್ತೀರ್ಣರಾಗಲು ಪರ್ಸೆಟೇಂಜ್ ಸೇರಿದಂತೆ ಇನ್ನಿತರ ವಿವರ ಇಲ್ಲಿದೆ ಗಮನಿಸಿ.

ಯುಜಿಸಿಟಿ ಫಲಿತಾಂಶ ನೋಡಲು ಅಧಿಕೃತ ವೆಬ್‌ಸೈಟ್‌ಗಳು

ಸಿಇಟಿ ಫಲಿತಾಂಶ ಪ್ರಕಟವಾದ ನಂತರ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು. https://karresults.nic.in/ ಈ ವೆಬ್‌ಸೈಟ್‌ನಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ವೆಬ್‌ಸೈಟ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಟಾಪರ್‌ಗಳು ಹಾಗೂ ಇನ್ನಿತರ ಫಲಿತಾಂಶ ವಿವರಗಳು ಲಭ್ಯವಾಗಲಿವೆ.

ಕೆಸಿಇಟಿ ಕೌನ್ಸೆಲಿಂಗ್

ಫಲಿತಾಂಶ ಪ್ರಕಟವಾದ ನಂತರ, ಕೆಇಎ ಪದವಿಪೂರ್ವ ಕೋರ್ಸ್ ಪ್ರವೇಶಕ್ಕಾಗಿ ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ದಿನಾಂಕಗಳು ಮತ್ತು ಕಾರ್ಯವಿಧಾನಗಳು ಸೇರಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆಯ ಕುರಿತು ಹೆಚ್ಚಿನ ವಿವರಗಳನ್ನು ನಂತರ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ಯುಜಿ ಸಿಇಟಿ ಫಲಿತಾಂಶ ಹೀಗೆ ಚೆಕ್ ಮಾಡಿ

ಹಂತ 1: https://karresults.nic.in ಈ ವೈಬ್‌ಸೈಟ್‌ಗೆ ಹೋಗಿ

ಹಂತ 2: ಯುಜಿ ಸಿಇಟಿ ಫಲಿತಾಂಶ (UG CET Result) ಎಂದಿರುವಲ್ಲಿ ಕ್ಲಿಕ್ ಮಾಡಿ.

ಹಂತ 3: ನಂತರ ನಿಮ್ಮ ಲಾಗಿನ್ ಕ್ರೆಡೆನ್ಷಿಯಲ್ ತುಂಬಿಸಿ, ಸಬ್‌ಮಿಟ್ ಕೊಡಿ

ಹಂತ 4: ಈಗ ನೀವು ಕಂಪ್ಯೂಟರ್ ಪರದೆಯ ಮೇಲೆ ನಿಮ್ಮ ಫಲಿತಾಂಶದ ವಿವರವನ್ನು ವೀಕ್ಷಿಸಬಹುದು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.