KCET 2025: ಕರ್ನಾಟಕ ಸಿಇಟಿಯ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟ; 5 ಅಂಶಗಳ ವಿವರ ಇಲ್ಲಿದೆ
KCET 2025: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಏಪ್ರಿಲ್‌ನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ಸಿಇಟಿಯ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟವಾಗಿದೆ. 5 ಅಂಶಗಳ ವಿವರ ಇಲ್ಲಿದೆ ಗಮನಿಸಿ.

KCET 2025: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ಸಿಇಟಿ 2025ಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲನೆಗೆ ಸಂಬಂಧಿಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಗೆ ಅರ್ಜಿ ಸಲ್ಲಿಸಿದವರು ಈ ಮಾರ್ಗಸೂಚಿ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಪರಿಶೀಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಸಿಇಟಿ 2025; ದಾಖಲೆ ಪರಿಶೀಲನೆಗೆ ಮಾರ್ಗಸೂಚಿ
1) ಷರತ್ತು ಸಂಕೇತ 'ಎ' ಎಂದು ಹೇಳಿಕೊಂಡ ವಿದ್ಯಾರ್ಥಿಗಳು ಮತ್ತು 1 ರಿಂದ 10ನೇ ತರಗತಿ ತನಕ ಕನ್ನಡ ಮಾಧ್ಯಮ, ಗ್ರಾಮೀಣ, ಧಾರ್ಮಿಕ/ ಅಲ್ಪಸಂಖ್ಯಾತ ಮೀಸಲಾತಿ ಶಾಲೆಗಳಲ್ಲಿ ಕಲಿತಿಲ್ಲ. ಆದರೆ, 7 ವರ್ಷ ಅಧ್ಯಯನ ನಡೆಸಿದ್ದು ಅದಕ್ಕೆ ಸಂಬಂಧಿಸಿದ ಸ್ಯಾಟ್ಸ್ (SATS) ಇದ್ದರೆ ಕ್ಲೇಮ್ ಸರ್ಟಿಫಿಕೇಟ್ ಪರಿಶೀಲನೆ ಪೂರ್ಣಗೊಳ್ಳುತ್ತದೆ. 1 ನೇ ಎಸ್‌ಟಿಡಿ ಯಿಂದ 10 ನೇ ಎಸ್‌ಟಿಡಿ ವರೆಗೆ ಅಧ್ಯಯನ ಮಾಡದ ವಿದ್ಯಾರ್ಥಿಗಳು. ಕನ್ನಡ ಮಾಧ್ಯಮದಲ್ಲಿ, ಗ್ರಾಮೀಣ, ಧಾರ್ಮಿಕ / ಭಾಷಾ ಅಲ್ಪಸಂಖ್ಯಾತ ಮೀಸಲಾತಿಯಲ್ಲಿ ಆದರೆ ಅವರ 07 ವರ್ಷಗಳ ಅಧ್ಯಯನವನ್ನು ಎಸ್‌ಎಟಿ ಮೂಲಕ ಪರಿಶೀಲಿಸಲಾಗಿದೆ, ಯಶಸ್ವಿಯಾಗಿ ಪರಿಶೀಲಿಸಿದಂತೆ ಹಕ್ಕು ಪ್ರಮಾಣಪತ್ರವನ್ನು ಪಡೆಯುತ್ತದೆ. ಅಂತಹ ಅಭ್ಯರ್ಥಿಗಳು ಪರಿಶೀಲನೆಗಾಗಿ ಯಾವುದೇ ಕಾಲೇಜಿಗೆ ಭೇಟಿ ನೀಡಬೇಕಾಗಿಲ್ಲ ಮತ್ತು ಇದರರ್ಥ ಅರ್ಜಿಯನ್ನು ಸ್ವೀಕರಿಸಲಾಗಿದೆ. ಇದಕ್ಕಾಗಿ ಅಭ್ಯರ್ಥಿಗಳು ಪರಿಶೀಲನೆಗಾಗಿ ಯಾವುದೇ ಕಾಲೇಜುಗಳಿಗೆ ತೆರಳಬೇಕಾಗಿಲ್ಲ.
2) ಷರತ್ತು ಸಂಕೇತ ಎ ಎಂದು ಹೇಳಿಕೊಂಡ ವಿದ್ಯಾರ್ಥಿಗಳು 1 ರಿಂದ 10ನೇ ತರಗತಿ ತನಕ ಅಧ್ಯಯನ ಮಾಡಿದ್ದು, ಕನ್ನಡ ಮಾಧ್ಯಮ, ಗ್ರಾಮೀಣ, ಧಾರ್ಮಿಕ ಅಥವಾ ಅಲ್ಪಸಂಖ್ಯಾತ ಮೀಸಲಲ್ಲಿ ಅಧ್ಯಯನ ಮಾಡಿದ್ದು ಅದಕ್ಕೆ ದಾಖಲೆಗಳಿದ್ದರೆ, ಅಂಥವನ್ನು ಪಿಯುಸಿ/12ನೇ ತರಗತಿ ಪ್ರಾಂಶುಪಾಲರನ್ನು ಭೇಟಿ ಮಾಡಿ, 'Claimed Verified, or Claimed not Verified or not Claimed' ಮುಂತಾಗಿ ಮುದ್ರಿತ ಸರ್ಟಿಫಿಕೇಟ್ ಪಡೆದು ಸಲ್ಲಿಸಬೇಕು. ಸಂಬಂಧಿತ ಮೂಲ ದಾಖಲೆಗಳೊಂದಿಗೆ (ಕೆಇಎ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಸ್ವರೂಪದ ಪ್ರಕಾರ) ಕಾಲೇಜು ಅಥವಾ ಹತ್ತಿರದ ಸರ್ಕಾರಿ ಪಿಯು ಕಾಲೇಜಿನಿಂದ ಜೆರಾಕ್ಸ್ ಪ್ರತಿಯನ್ನು ಹೊಂದಿರಬೇಕು.
3) ಷರತ್ತು ಸಂಕೇತ ಎ ಹೊರತಾಗಿ, 'B', 'C', 'D', 'I', 'J', 'K', 'L', 'M', 'N' ಗಳನ್ನು ದಾಖಲಿಸಿರುವ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆ ವಿವರಕ್ಕಾಗಿ ಕೆಇಎ ವೆಬ್‌ಸೈಟ್ ಗಮನಿಸಬೇಕು.
4) ಯಾವ ಅಭ್ಯರ್ಥಿ ಷರತ್ತು ಸಂಕೇತ 'E', 'F', 'G', 'H', 'O' ಉಲ್ಲೇಖಿಸಿದ್ದಾರೋ ಅಂಥವರು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಪಿಯುಸಿ/12ನೇ ತರಗತಿ ಕಾಲೇಜುಗಳಿಗೆ ಭೇಟಿ ನೀಡಿ ಪ್ರಮಾಣ ಪತ್ರಗಳನ್ನು ದೃಢೀಕರಿಸಿಕೊಂಡು ಬರಬೇಕು. ಇದಕ್ಕೆ ಸಂಬಂಧಿಸಿ ಡಿಫೆನ್ಸ್, ಎಕ್ಸ್ ಡಿಫೆನ್ಸ್, ಸಿಎಪಿಎಫ್, ಎಕ್ಸ್ ಸಿಎಪಿಎಫ್ ಮೀಸಲಿನ ಅಭ್ಯರ್ಥಿಗಳು ಕೆಇಎನಲ್ಲೇ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು
5) 371 ಜೆ, ಜಾತಿ, ಜಾತಿ ಆದಾಯ ಪ್ರಮಾಣಪತ್ರ ಆರ್‌ಡಿ ನಂಬರ್‌ಗಳನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸಬೇಕು. ಆದ್ದರಿಂದ ಅಭ್ಯರ್ಥಿಗಳು ಪ್ರಮಾಣಪತ್ರಗಳ ಮಾನ್ಯತೆ ಪರಿಶೀಲಿಸಲು ಆರ್‌ಡಿ ಸಂಖ್ಯೆಗಳನ್ನು ಅರ್ಜಿಯಲ್ಲಿ ಸರಿಯಾಗಿ ನಮೂದಿಸಿರಬೇಕು.
ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಕಾಲೇಜುಗಳ ಪ್ರಾಂಶುಪಾಲರು ಒಕೆ ಕ್ಲಿಕ್ ಮಾಡುತ್ತಾರೆ. ಯಾವುದೇ ಖೋಟಾ ಅಥವಾ ನಕಲಿ ದಾಖಲೆಗಳಿದ್ದರೆ, ಅಂತಹ ಅಭ್ಯರ್ಥಿಗಳನ್ನು ಸಮಾಲೋಚನೆ ಪ್ರಕ್ರಿಯೆಯಿಂದ ದೂರ ಇರಿಸಲಾಗುತ್ತದೆ. ಅದೇ ರೀತಿ ಅಂಥವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲಾಗುತ್ತದೆ.
ಕರ್ನಾಟಕ ಸಿಇಟಿ 2025 ಏಪ್ರಿಲ್ 16 ಮತ್ತು 17 ರಂದು
ಕರ್ನಾಟಕದಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಈ ಸಲದ ಕೆಸಿಇಟಿ 2025ರ ಪರೀಕ್ಷೆ ಏಪ್ರಿಲ್ 16 ಮತ್ತು ಏಪ್ರಿಲ್ 17 ರಂದು ನಡೆಯಲಿದೆ. ಪರೀಕ್ಷೆ ಎರಡು ಪಾಳಿಯಲ್ಲಿ ಮೊದಲ ಶಿಫ್ಟ್ ಬೆಳಿಗ್ಗೆ 10.30 ರಿಂದ ಬೆಳಿಗ್ಗೆ 11.50 ರವರೆಗೆ ಮತ್ತು ಎರಡನೇ ಶಿಫ್ಟ್ ಮಧ್ಯಾಹ್ನ 2.30 ರಿಂದ ಮಧ್ಯಾಹ್ನ 3.50 ರವರೆಗೆ ನಡೆಯಲಿದೆ.
ಉನ್ನತ ಶಿಕ್ಷಣಕ್ಕಾಗಿ ವಿಶೇಷವಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜನವರಿ 23 ರಂದು ಪ್ರಾರಂಭವಾದ ನೋಂದಣಿ ಪ್ರಕ್ರಿಯೆಯು ಫೆಬ್ರವರಿ 18, 2025 ರಂದು ಕೊನೆಗೊಳ್ಳುತ್ತದೆ. ಕರ್ನಾಟಕ ಸಿಇಟಿ 2025ರ ಪ್ರವೇಶ ಕಾರ್ಡ್ ಅನ್ನು ಮಾರ್ಚ್ 25 ರಿಂದ ಡೌನ್‌ಲೋಡ್ ಮಾಡಬಹುದು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
ಹೆಚ್ಚಿನ ಮಾಹಿತಿಗೆ - ಕೆಇಎ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ ಮಾಡಬಹುದು.
