ಕನ್ನಡ ಸುದ್ದಿ  /  ಕರ್ನಾಟಕ  /  Cbse News: ವಿದ್ಯಾರ್ಥಿಗಳೇ ಗಮನಿಸಿ; ಶೀಘ್ರದಲ್ಲೇ ಸಿಬಿಎಸ್‌ಇ 3 ಮತ್ತು 6ನೇ ತರಗತಿಗಳಿಗೆ ಹೊಸ ಪಠ್ಯ ಪುಸ್ತಕ

CBSE News: ವಿದ್ಯಾರ್ಥಿಗಳೇ ಗಮನಿಸಿ; ಶೀಘ್ರದಲ್ಲೇ ಸಿಬಿಎಸ್‌ಇ 3 ಮತ್ತು 6ನೇ ತರಗತಿಗಳಿಗೆ ಹೊಸ ಪಠ್ಯ ಪುಸ್ತಕ

ಏಪ್ರಿಲ್ 1 ರಿಂದ ಆರಂಭವಾಗಿರುವ 2024-25ನೇ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇಯಲ್ಲಿನ 3 ಮತ್ತು 6ನೇ ತರಗತಿಗಳಿಗೆ ಮಾತ್ರ ಹೊಸ ಪಠ್ಯವನ್ನು ತರಲಿದ್ದೇವೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.

2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇಯ 3 ಮತ್ತು 6ನೇ ತರಗತಿಯ ಪಠ್ಯ ಬದಲಾಗಲಿದೆ.
2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇಯ 3 ಮತ್ತು 6ನೇ ತರಗತಿಯ ಪಠ್ಯ ಬದಲಾಗಲಿದೆ.

ಬೆಂಗಳೂರು: 2024ರ ಏಪ್ರಿಲ್ 1 ರಿಂದ ಆರಂಭವಾಗುವ 2024-25 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಿಬಿಎಸ್‌ಇ (CBSE) 3 ಮತ್ತು 6ನೇ ತರಗತಿಗಳಿಗೆ ಮಾತ್ರ ಹೊಸ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತಿಳಿಸಿದೆ. ಆದರೆ ಇತರೆ ಯಾವುದೇ ತರಗತಿಗಳ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಎನ್‌ಸಿಇಆರ್‌ಟಿ (NCERT) ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ಏಪ್ರಿಲ್, ಮೇ ನಲ್ಲಿ ಎರಡೂ ತರಗತಿಗಳ ಪುಸ್ತಕ ಲಭ್ಯ

ಸಿಬಿಎಸ್‌ಇ 3 ಮತ್ತು 6ನೇ ತರಗತಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಎನ್‌ಸಿಎಫ್-ಎಸ್‌ಇ 2023 ಗೆ ಅನುಗುಣವಾಗಿ ಪಠ್ಯ ಪುಸ್ತಕಗಳನ್ನು ವಿನ್ಯಾಸಗೊಳಿಸಲಾಗಿದೆ. 3ನೇ ತರಗತಿಯ ಪುಸ್ತಕಗಳು 2024ರ ಏಪ್ರಿಲ್ ಎರಡನೇ ವಾರದೊಳಗೆ ಲಭ್ಯವಾಗುತ್ತವೆ. 6 ನೇ ತರಗತಿಯ ಪುಸ್ತಕಗಳು 2024ರ ಮೇ ತಿಂಗಳ ಮಧ್ಯದ ವೇಳೆಗೆ ಲಭ್ಯವಾಗುತ್ತವೆ.

1,2,7, 8, 10 ಮತ್ತು 12 ನೇ ತರಗತಿಗಳ ಪಠ್ಯಪುಸ್ತಕಗಳ 2023-24ನೇ ಆವತ್ತಿಗಳ 1.21 ಕೋಟಿ ಪ್ರತಿಗಳನ್ನು ದೇಶಾದ್ಯಂತ ಬಿಡುಗಡೆ ಮಾಡಲಾಗಿದೆ ಎಂದು ಎನ್‌ಸಿಇಆರ್‌ಟಿ ಹೇಳಿದೆ. ಈ ತರಗತಿಗಳಿಗೆ ಅಗತ್ಯವಿರುವ ಹೆಚ್ಚುವರಿ ಪುಸ್ತಕಗಳನ್ನು ನಿಯಮಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು.

1, 2, 7, 8, 10 ಮತ್ತು 12 ನೇ ತರಗತಿಗಳ ಪಠ್ಯಪುಸ್ತಕಗಳ 2023-2024 ಆವೃತ್ತಿಗಳ 1.21 ಕೋಟಿ ಪ್ರತಿಗಳನ್ನು ದೇಶಾದ್ಯಂತ ಬಿಡುಗಡೆ ಮಾಡಲಾಗಿದೆ ಎಂದು NCERT ಹೇಳಿದೆ. ಈ ತರಗತಿಗಳಿಗೆ ಅಗತ್ಯವಿರುವ ಹೆಚ್ಚುವರಿ ಪುಸ್ತಕಗಳನ್ನು ನಿಯಮಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು.

4, 5, 9 ಮತ್ತು 11 ನೇ ತರಗತಿಗಳಿಗೆ 27.58 ಲಕ್ಷ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಈ ತರಗತಿಗಳ 1.03 ಕೋಟಿ ಪ್ರತಿಗಳು 2024ರ ಮೇ 31 ರೊಳಗೆ ಲಭ್ಯವಿರುತ್ತವೆ ಎಂದು ಎನ್‌ಸಿಇಆರ್‌ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಎಲ್ಲಾ ಪಠ್ಯಪುಸ್ತಕಗಳ ಡಿಜಿಟಲ್ ಪ್ರತಿಗಳು ಎನ್‌ಸಿಇಆರ್‌ಟಿ ಪೋರ್ಟಲ್, PM eVidya, DIKSHA, ePathshala ಪೋರ್ಟಲ್, ನ್ಯಾಷನಲ್ ಡಿಜಿಟಲ್ ಲೈಬ್ರರಿಯಲ್ಲಿ ಉಚಿತವಾಗಿ ಲಭ್ಯವಿದೆ. ಡಿಜಿಟಲ್ ಪ್ರತಿಗಳನ್ನು ಉಚಿತವಾಗಿ ಡೌನ್‌ಮಾಡಿಕೊಳ್ಳಬಹುದು ಎಂದು ಮಂಡಳಿ ಹೇಳಿದೆ.

ಶಾಲೆಗಳಿಗೆ ಸುತ್ತೋಲೆ ರವಾನಿಸಿದ ಎನ್‌ಸಿಇಆರ್‌ಟಿ

ಮಾರ್ಚ್‌ನಲ್ಲಿ ಎನ್‌ಸಿಇಆರ್‌ಟಿ ಸಿಬಿಎಸ್‌ಇಗೆ ಸಂಯೋಜಿತವಾಗಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ 3 ಮತ್ತು 6ನೇ ತರಗತಿಗಳಿಗೆ ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳು ಪ್ರಸುತ ಅಭಿವೃದ್ಧಿ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

2023 ವರೆಗೆ ಎನ್‌ಸಿಇಆರ್‌ಟಿ ಪ್ರಕಟಿಸಿದ ಪಠ್ಯಪುಸ್ತಕಗಳ ಬದಲಿಗೆ 3 ಮತ್ತು 6 ನೇ ತರಗತಿಗಳಿಗೆ ಈ ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಅನುಸರಿಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಎನ್‌ಇಪಿ 2020 ರ ಅನುಷ್ಠಾನದ ಭಾಗವಾಗಿ, ಎನ್‌ಸಿಇಆರ್‌ಟಿ ಶಾಲಾ ಶಿಕ್ಷಣಕ್ಕಾಗಿ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (NCF-SE 2023) 2023 ಕ್ಕೆ ಅನುಗುಣವಾಗಿ ಹೊಸ ಪಠ್ಯಕ್ರಮದೊಂದಿಗೆ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಸಲಾಗುತ್ತಿದೆ ಎಂದು ಹೇಳಿದೆ.

IPL_Entry_Point