Comedk Exam 2024: ಇಂದು ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ; ಪ್ರವೇಶ ಪತ್ರದ ಲಿಂಕ್, ಪರೀಕ್ಷಾ ಸಮಯ ಸೇರಿ ಸಂಪೂರ್ಣ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  Comedk Exam 2024: ಇಂದು ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ; ಪ್ರವೇಶ ಪತ್ರದ ಲಿಂಕ್, ಪರೀಕ್ಷಾ ಸಮಯ ಸೇರಿ ಸಂಪೂರ್ಣ ಮಾಹಿತಿ

Comedk Exam 2024: ಇಂದು ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ; ಪ್ರವೇಶ ಪತ್ರದ ಲಿಂಕ್, ಪರೀಕ್ಷಾ ಸಮಯ ಸೇರಿ ಸಂಪೂರ್ಣ ಮಾಹಿತಿ

ಕಾಮೆಡ್‌ಕೆ ಯುಜಿಇಟಿ 2024 ಪರೀಕ್ಷೆ ಇಂದು (ಮೇ 12, ಭಾನುವಾರ) ನಡೆಯಲಿದೆ. ಪರೀಕ್ಷಾ ಸಮಯ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಅನ್ನೋದರ ವಿವರ ಇಲ್ಲಿದೆ.

ಮೇ 12ರ ಭಾನುವಾರ ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ ನಡೆಯಲಿದೆ.
ಮೇ 12ರ ಭಾನುವಾರ ಕಾಮೆಡ್-ಕೆ ಆನ್‌ಲೈನ್ ಪರೀಕ್ಷೆ ನಡೆಯಲಿದೆ. (HT)

ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (COMEDK) ಪದವಿಪೂರ್ವ ಪ್ರವೇಶ ಪರೀಕ್ಷೆ (COMEDK UGET) 2024 ರ ಆವೃತ್ತಿಯ ಆನ್‌ಲೈನ್ ಪರೀಕ್ಷೆ ಇಂದು (ಮೇ 12, 2024) ನಡೆಸಲಿದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಒಕ್ಕೂಟದ ಅಧಿಕೃತ ವೆಬ್‌ಸೈಟ್‌ comedk.org ನಲ್ಲಿ ನೀಡಲಾಗಿದೆ.

ಕರ್ನಾಟಕದ 150 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ (Engineering Entrance Exams in Karnataka) ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಕಾಮೆಡ್‌-ಕೆ ಸಾಮಾನ್ಯ ಸಮಾಲೋಚನೆ ಪ್ರಕ್ರಿಯೆಯಲ್ಲೂ ಭಾಗವಹಿಸಬೇಕಾಗುತ್ತದೆ. ಪರೀಕ್ಷೆಯು ಅಖಿಲ ಭಾರತ ಆಧಾರದ ಮೇಲೆ ಮತ್ತು ಕಂಪ್ಯೂಟರ್ ಆಧಾರಿತ (ಆನ್‌ಲೈನ್ ಮಾದರಿ ಪರೀಕ್ಷೆ) ನಡೆಯಲಿದೆ ಎಂದು ಕಾಮೆಡ್‌-ಕೆ ತಿಳಿಸಿದೆ.

1.2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪರೀಕ್ಷೆ ಇಂದು (ಮೇ 12, ಭಾನುವಾರ) 8.30 ರಿಂದ 11.30, ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆ, ಹಾಗೂ ಸಂಜೆ 5.30 ರಿಂದ ರಾತ್ರಿ 8.30 ರವರೆಗೆ ಮೂರು ಸೆಷನ್‌ಗಳಲ್ಲಿ ನಡೆಯಲಿದೆ. ಪರೀಕ್ಷೆ ಆರಂಭಕ್ಕೂ 1 ಗಂಟೆ ಮುನ್ನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಪ್ರವೇಶ ಪತ್ರದ ಹಾರ್ಡ್ ಕಾಪಿಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಲು ಅವಕಾಶವಿದೆ. ಹಾಲ್‌ ಟಿಕೆಟ್ ಜೊತೆಗೆ ಸರ್ಕಾರದ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಹೊಂದಿರಬೇಕು. ಆದರೆ ಪರೀಕ್ಷಾ ಕೊಠಡಿಗೆ ಯಾವುದೇ ರೀತಿಯ ಎಲೆಕ್ಟ್ರಾನಿಕ ಸಾಧನಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇಲ್ಲ.

ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕೆಂದು ಕಾಮೆಡ್‌-ಕೆ ಪ್ರಕಟಣೆಯ ಮೂಲಕ ತಿಳಿಸಿದೆ. ಪರೀಕ್ಷೆಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದೆ. ಪರೀಕ್ಷೆ ಅಥವಾ ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ಅಥವಾ ಫಲಿತಾಂಶಗಳನ್ನು ಪರಿಶೀಲಿಸಲು ಇಂಟರ್ನೆಟ್ ಕೆಫೆಗಳು, ಶಿಕ್ಷಣ ಸಲಹೆಗಾರರು ಮತ್ತು ಅನಧಿಕೃತ ವೆಬ್‌ಸೈಟ್‌ಗಳಂತಹ ಮೂರನೇ ವ್ಯಕ್ತಿಗಳನ್ನು ಸಂಪರ್ಕಿಸದಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ.

"ಕಾಮೆಡ್‌-ಕೆ ಎಚ್ಚರಿಕೆ ನೀಡಿದ್ದರೂ, ಕೆಲವು ಅಭ್ಯರ್ಥಿಗಳು ಪರೀಕ್ಷೆಗೆ ಸಂಬಂಧಿತ ಎಲ್ಲಾ ಚಟುವಟಿಕೆಗಳಿಗೆ ಇಂಟರ್‌ನೆಟ್ ಕೆಫೆ, ಶಿಕ್ಷಣ ಸಲಹೆಗಾರರು, ಕೆಲವೊಂದು ಅನಧಿಕೃತ ವೆಬ್‌ಸೈಟ್‌ ಮುಂತಾದ ಮೂರನೇ ವ್ಯಕ್ತಿಗಳನ್ನು ಅವಲಂಬಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಥರ್ಡ್ ಪಾರ್ಟಿಗಳ ಮೊರೆ ಹೋಗಿರುವ ಅಭ್ಯರ್ಥಿಗಳು ಮತ್ತು ಅವರ ಪೋಷಕರಿಗೆ ಕಾಮೆಡ್‌-ಕೆ ಎರಡನೇ ಬಾರಿ ಸಲಹೆ ನೀಡಿತ್ತು. ಇದು ನಿಮ್ಮ ವೈಯಕ್ತಿಕ ವಿವರಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿ, ತಪ್ಪು ಕೈಗಳಿಗೆ ನಿಮ್ಮ ದಾಖಲೆಗಳನ್ನು ನೀಡಿ ಆರ್ಥಿಕ ನಷ್ಟವನ್ನು ಅನುಭವಿಸಬಹುದು ಎಂದು ಎಚ್ಚರಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಾಮೆಡ್‌-ಕೆ ಅಧಿಕೃತ ವೆಬ್‌ಸೈಟ್‌ comedk.org ಗೆ ಭೇಟಿ ನೀಡಿ.

Whats_app_banner