ಕನ್ನಡ ಸುದ್ದಿ  /  ಕರ್ನಾಟಕ  /  ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಮಂದಿ ಬೆಂಗಳೂರಿಗರು, ಸಂಪೂರ್ಣ ವಿವರ ತಿಳಿಯಿರಿ

ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಮಂದಿ ಬೆಂಗಳೂರಿಗರು, ಸಂಪೂರ್ಣ ವಿವರ ತಿಳಿಯಿರಿ

ಕಾಮೆಡ್-ಕೆ ಫಲಿತಾಂಶದಲ್ಲಿ 1ನೇ ರ‍್ಯಾಂಕ್ ಅನ್ನು ಬೆಂಗಳೂರಿನ ಬಾಲಸತ್ಯ ಸರವಣಂ ಪಡೆದುಕೊಂಡಿದ್ದಾರೆ. 2ನೇ ರ‍್ಯಾಂಕ್ ಅನ್ನು ದೇವಾಂಶ್‌ ತ್ರಿಪಾಠಿ ಹಾಗೂ 3ನೇ ರ‍್ಯಾಂಕ್ ಅನ್ನು ಸನಾ ತಬಸ್ಸುಂ ಪಡೆದುಕೊಂಡಿದ್ದಾರೆ.

ಕಾಮೆಡ್‌ ಕೆ ಫಲಿತಾಂಶ ಪ್ರಕಟವಾಗಿದೆ. ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಮಂದಿ ಬೆಂಗಳೂರಿಗರು ಇದ್ದಾರೆ. ಇಂದಿನಿಂದಲೇ ಕೌನ್ಸಿಲಿಂಗ್ ಆರಂಭವಾಗಿದೆ.
ಕಾಮೆಡ್‌ ಕೆ ಫಲಿತಾಂಶ ಪ್ರಕಟವಾಗಿದೆ. ಮೊದಲ 10 ರ‍್ಯಾಂಕ್ ಪಡೆದವರಲ್ಲಿ 8 ಮಂದಿ ಬೆಂಗಳೂರಿಗರು ಇದ್ದಾರೆ. ಇಂದಿನಿಂದಲೇ ಕೌನ್ಸಿಲಿಂಗ್ ಆರಂಭವಾಗಿದೆ.

ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್‌ ಕೆ) ನಡೆಸಿರುವ 2024ರ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಮೊದಲ 10 ರ‍್ಯಾಂಕ್‌ಗಳಲ್ಲಿ ಬೆಂಗಳೂರಿನ 8 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಉಳಿದ 2 ಸ್ಥಾನಗಳಲ್ಲಿ ಒಂದನ್ನು ಹಿಮಾಚಲ ಪ್ರದೇಶ ಮತ್ತು ಮತ್ತೊಂದು ಸ್ಥಾನವನ್ನು ಆಂಧ್ರಪ್ರದೇಶ ವಿದ್ಯಾರ್ಥಿ ಪಡೆದುಕೊಂಡಿದ್ದಾರೆ. ಮೊದ 100 ರ‍್ಯಾಂಕ್‌ಗಳಲ್ಲಿ 58 ರ‍್ಯಾಂಕ್‌ಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಪಡೆದಿರುವುದು ಮತ್ತೊಂದು ವಿಶೇಷ (COMEDK UGET Result 2024).

ಟ್ರೆಂಡಿಂಗ್​ ಸುದ್ದಿ

1ನೇ ರ‍್ಯಾಂಕ್ ಅನ್ನು ಬೆಂಗಳೂರಿನ ಬಾಲಸತ್ಯ ಸರವಣಂ ಪಡೆದುಕೊಂಡಿದ್ದಾರೆ. 2ನೇ ರ‍್ಯಾಂಕ್ ಅನ್ನು ದೇವಾಂಶ್‌ ತ್ರಿಪಾಠಿ ಹಾಗೂ 3ನೇ ರ‍್ಯಾಂಕ್ ಅನ್ನು ಸನಾ ತಬಸ್ಸುಂ ಪಡೆದುಕೊಂಡಿದ್ದಾರೆ. ಉಳಿದ ಬೆಂಗಳೂರಿನ ರ‍್ಯಾಂಕ್ ವಿದ್ಯಾರ್ಥಿಗಳೆಂದರೆ ಪ್ರಕೇತ್‌ ಗೋಯಲ್(4ನೇ ರ‍್ಯಾಂಕ್), ನಿಕೇತ್‌ ಪ್ರಕಾಶ್‌ ಅಚಂತಾ (7ನೇ ರ‍್ಯಾಂಕ್)‌, ನೇಹಾ ಪ್ರಭು (8ನೇ ರ‍್ಯಾಂಕ್)‌, ಜಗದೀಶ್‌ ಮರಿಯಾ ರೆಡ್ಡಿ(9ನೇ ರ‍್ಯಾಂಕ್)‌, ಈಶ್ವರ್‌ ಚಂದ್ರ ರೆಡ್ಡಿ ಮುಲ್ಕಾ (10ನೇ ರ‍್ಯಾಂಕ್)‌ ಗಳಿಸಿದ್ದಾರೆ.

ಕರ್ನಾಟಕ ವಿದ್ಯಾರ್ಥಿಗಳ ಉತ್ತಮ ಸಾಧನೆ

ಹಿಮಾಚಲ ಪ್ರದೇಶದ ಮಾನಸ್‌ ಸಿಂಗ್‌ ರಜಪೂತ್‌ 5ನೇ ರ‍್ಯಾಂಕ್ ಪಡೆದಿದ್ದರೆ, ಆಂಧ್ರಪ್ರದೇಶದ ಗಣಪಿಶೆಟ್ಟಿ ನಿಶ್ಚಲ್‌ 6 ನೇ ರ‍್ಯಾಂಕ್ ಪಡೆದಿದ್ದಾರೆ. 10,575 ವಿದ್ಯಾರ್ಥಿಗಳು ಶೇ.90 ರಿಂದ ಶೇ.100 ರಷ್ಟು ಅಂಕ ಗಳಿಸಿದ್ದಾರೆ. ಇವರಲ್ಲಿ 3,126 ವಿದ್ಯಾರ್ಥಿಗಳು ಕರ್ನಾಟಕದವರೇ ಆಗಿದ್ದಾರೆ. ಶೇ.80 ರಿಂದ ಶೇ.90 ರಷ್ಟು ಅಂಕಗಳನ್ನು ಪಡೆದಿರುವ 10,538 ವಿದ್ಯಾರ್ಥಿಗಳಲ್ಲಿ 2,749 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಸೇರಿದ್ದಾರೆ. ಶೇ.70ರಿಂದ 80ರಷ್ಟು ಅಂಕಗಳನ್ನು ಪಡೆದಿರುವ 10,648 ವಿದ್ಯಾರ್ಥಿಗಳ ಪೈಕಿ 3,028 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ.

ಅರ್ಹ ವಿದ್ಯಾರ್ಥಿಗಳಿಗೆ ಅವರ ಅರ್ಜಿ ಲಾಗಿನ್ ಮೂಲಕ ರ‍್ಯಾಂಕ್ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ.125 ಇಂಜಿನಿಯರಿಂಕ್‌ ಕಾಲೇಜುಗಳ 18,000 ಸೀಟುಗಳನ್ನು ಕಾಮೆಡ್ ಕೆ ಪರೀಕ್ಷೆಯ ಫಲಿತಾಂಶದ ಮೂಲಕ ಹಂಚಿಕೆ ಮಾಡಲಾಗುತ್ತದೆ. ಈ ಬಾರಿ ಪರೀಕ್ಷೆಗೆ 1,18,005 ವಿದ್ಯಾರ್ಥಿಗಳು ಕಾಮೆಡ್‌ ಕೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, 1,03,799 ವಿದ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರ ಪೈಕಿ 35,124 ವಿದ್ಯಾರ್ಥಿಗಳು ಕರ್ನಾಟಕದವೇ ಆಗಿದ್ದಾರೆ. 2024ರ ಮೇ 12ರಂದು ಪರೀಕ್ಷೆ ನಡೆದಿತ್ತು.

ಈ ವರ್ಷವೂ ಆನ್‌ಲೈನ್‌ ಮೂಲಕ ಕೌನ್ಸೆಲಿಂಗ್‌ ಸೀಟು ಹಂಚಿಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಲಾಗಿನ್‌ ಐಡಿ ಮೂಲಕ ಸ್ಕ್ಯಾನ್‌ ಮಾಡಿದ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಾಗುತ್ತದೆ. ಅರ್ಹ ತಜ್ಞರು ಈ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಲಭ್ಯವಿರುವ ಸೀಟುಗಳ ಸಂಖ್ಯೆ, ಶುಲ್ಕ, ಮತ್ತು ಕೌನ್ಸೆಲಿಂಗ್‌ ದಿನಾಂಕಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ಕಾಮೆಡ್‌ ಕೆ ಮೂಲಗಳು ತಿಳಿಸಿವೆ.

ಕಳೆದ ವರ್ಷ 96,607 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು 77,232 ವಿದ್ಯಾರ್ಥಿಗಳು ಕಾಮೆಡ್‌ ಕೆ ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ವರ್ಷವೂ ಬೆಂಗಳೂರಿನ ನಂದಿನಿ ಗೋಪಿ ಕೃಷ್ಣ ಮೊದಲ ರ‍್ಯಾಂಕ್ ಪಡೆದಿದ್ದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024