ಕನ್ನಡ ಸುದ್ದಿ  /  ಕರ್ನಾಟಕ  /  Comedk Uget Result: ಕಾಮೆಡ್‌-ಕೆ ಯುಜಿಇಟಿ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ

COMEDK UGET Result: ಕಾಮೆಡ್‌-ಕೆ ಯುಜಿಇಟಿ ಫಲಿತಾಂಶ ಪ್ರಕಟ; ಅಭ್ಯರ್ಥಿಗಳು ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ

ಕಾಮೆಡ್‌-ಕೆ ಯುಜಿಇಟಿ ಫಲಿತಾಂಶ 2024 ಅನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ.

ಕಾಮೆಡ್‌-ಕೆ ಯುಜಿಇಟಿ ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ.
ಕಾಮೆಡ್‌-ಕೆ ಯುಜಿಇಟಿ ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ರಿಸಲ್ಟ್ ನೋಡಲು ನೇರ ಲಿಂಕ್ ಇಲ್ಲಿದೆ.

ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟವು ಕಾಮೆಡ್‌-ಕೆ ಯುಜಿಇಟಿ ಫಲಿತಾಂಶ 2024 ಅನ್ನು ಇಂದು (ಮೇ 24, ಶುಕ್ರವಾರ) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗಿದೆ. ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ರ‍್ಯಾಂಕ್ ಅನ್ನು ತಿಳಿಯಲು ಒಕ್ಕೂಟದ ಅಧಿಕೃತ ವೆಬ್‌ಸೈಟ್ comedk.org ಭೇಟಿ ನೀಡಿ ಪರಿಶೀಲಿಸಬಹುದು.

ಟ್ರೆಂಡಿಂಗ್​ ಸುದ್ದಿ

ರ‍್ಯಾಂಕ್ ಕಾರ್ಡ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು, ಅಭ್ಯರ್ಥಿಗಳಿಗೆ ತಮ್ಮ ನೋಂದಣಿ ಸಂಖ್ಯೆ ಹಾಗೂ ಇತರ ವಿವರಗಳು ಒದಗಿಸಬೇಕು. ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಕಾಮೆಡ್ಕೆ ಯುಜಿಇಟಿ ಫಲಿತಾಂಶ 2024 ವೀಕ್ಷಿಸಲು ಈ ವಿಧಾನವನ್ನು ಅನುಸರಿಸಿ

  • comedk.org ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಕಾಮೆಟ್‌-ಕೆ ವೆಬ್‌ಸೈಟ್ ಮುಖಪುಟ ತೆರೆದುಕೊಳ್ಳುತ್ತದೆ
  • ಕಾಮೆಡ್ಕೆ ಯುಜಿಇಟಿ 2024 ರ ಫಲಿತಾಂಶವನ್ನು ಪರಿಶೀಲಿಸಲು ಲಿಂಕ್ ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ
  • ಅಗತ್ಯವಿರುವ ಲಾಗಿನ್ ವಿವರಗಳನ್ನು ಫೀಡ್ ಮಾಡಿದ ಬಳಿಕ ಸಲ್ಲಿಸಿ
  • ಫಲಿತಾಂಶ ಪುಟವು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ
  • ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್‌ಲೋಡ್ ಮಾಡಿ
  • ಹೆಚ್ಚಿನ ಅಗತ್ಯಕ್ಕಾಗಿ ಅದರ ಫಲಿತಾಂಶದ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ

ಇದನ್ನೂ ಓದಿ: ಪಿಜಿ ಸಿಇಟಿ ಪರೀಕ್ಷೆ ಜುಲೈ 13, 14; ದಿನಾಂಕ ಪ್ರಕಟಿಸಿದ ಕೆಇಎ

ಕಾಮೆಡ್‌-ಕೆ ಯುಜಿಇಟಿ ಪರೀಕ್ಷೆಯನ್ನು 2024 ಮೇ 12 ರಂದು ರಾಜ್ಯಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಮೊದಲ ಶಿಫ್ಟ್ ಬೆಳಗ್ಗೆ 8.30 ರಿಂದ 11.30 ರವರೆಗೆ, ಎರಡನೇ ಶಿಫ್ಟ್ ಮಧ್ಯಾಹ್ನ 1 ರಿಂದ 4 ರವರೆಗೆ ಮತ್ತು ಮೂರನೇ ಶಿಫ್ಟ್ ಸಂಜೆ 5.30 ರಿಂದ ರಾತ್ರಿ 8.30 ರವರೆಗೆ ಪರೀಕ್ಷೆ ನಡೆಯಿತು.

ಕೌನ್ಸೆಲಿಂಗ್ ಪ್ರಕ್ರಿಯೆಯು ಇಂದು (ಮೇ 24, ಶುಕ್ರವಾರ) ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಇಂದಿನಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಲು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಾಮೆಡ್‌-ಕೆ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024