ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಸ್ಪರ್ಧೆ; 10 ಲಕ್ಷ ಮೊತ್ತದ ಬಹುಮಾನ ಗೆಲ್ಲುವ ಅವಕಾಶ
ಶಾಲಾ ಮಕ್ಕಳು ಒಟ್ಟು 10 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಸ್ಪರ್ಧೆಯೊಂದು ಆಯೋಜಿಸಲಾಗಿದೆ. ಕನ್ನಡ ಒಲಂಪಿಕ್ಸ್ ಕಾರ್ಯಕ್ರಮದಡಿ ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಸ್ಪರ್ಧೆಯಲ್ಲಿ ಎಲ್ಲಾ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. ಇದಕ್ಕಾಗಿ ಶಾಲೆಯಿಂದ ನೋಂದಣಿ ಮಾಡಿಕೊಳ್ಳಬೇಕು. ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಇತಿಹಾಸವನ್ನು ಇಂದಿನ ಮಕ್ಕಳಿಗೆ ಸುಲಲಿತವಾಗಿ ಕಲಿಸಲು, ಒಲವನ್ನು ಬೆಳೆಸುವ ನಿಟ್ಟಿನಲ್ಲಿ ಮಾತೃಭಾಷಾ ತಂಡದ ಕನೆಕ್ಟ್ ಕನ್ನಡ! ಅನ್ಲಾಕ್ ಕರ್ನಾಟಕ! ಕಾರ್ಯಕ್ರಮದಡಿ ಶಾಲಾ ಮಕ್ಕಳಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಕುರಿತು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 2024 ರ ನವೆಂಬರ್ ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಒಟ್ಟು 10 ಲಕ್ಷ ರೂಪಾಯಿಗಳ ಬಹುಮಾನಗಳನ್ನು ನೀಡಲಾಗುತ್ತದೆ.
ಈ ರೀತಿ ಕನ್ನಡ ಒಲಿಂಪಿಕ್ಸ್ ಕಾರ್ಯಕ್ರಮ ನಡೆಸುತ್ತಿರುವುದು ಭಾರತದ ಇತಿಹಾಸದಲ್ಲೇ ಮೊದಲು. ಬೆಂಗಳೂರಿನ ಚಂದನ್ ಎಂಬುರ ನೇತೃತ್ವದ ತಂಡದ ಆಸಕ್ತಿ ಮತ್ತು ಪರಿಶ್ರಮದ ಫಲವಿದು. ಇದನ್ನು ಮಕ್ಕಳ, ಪೋಷಕರ, ಶಿಕ್ಷಕರ, ಶಾಲೆಗಳ ಇಒ, ಡಿಡಿಪಿಐ ಅವರ, ನಾಡಿನ ಎಲ್ಲ ಕನ್ನಡ, ಕನ್ನಡೇತರ ಸಂಸ್ಥೆಗಳ ಗಮನಕ್ಕೆ ತರುವುದು ಮತ್ತು ಹೆಚ್ಚು ಭಾಗವಹಿಸುವುದರ ಮೂಲಕ ಕನ್ನಡ ಒಲಿಂಪಿಕ್ಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇರೆಂದು ಲೇಕಖ, ಚಿಂತಕ ಹಾಗೂ ಕನ್ನಡ ಪರ ಹೋರಾಟಗಾರರಾದ ಕೆ ರಾಜಕುಮಾರ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಸ್ಪರ್ಧೆಯ ರಾಜ್ಯ ಮಟ್ಟದ ಪ್ರಿ ಫೈನಲ್ 2024 ರಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಶಾಲಾವಾರು ಹಾಗೂ ವಿದ್ಯಾರ್ಥಿವಾರು ಹೆಸರು ನೋಂದಾಯಿಸಿಕೊಳ್ಳಬಹುದು. ಶಾಲೆಗಳನ್ನು ನೋಂದಾಯಿಸಲು: https://matrubhasha.typeform.com/to/kIh4cgUt