ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ನಗದು ಬಹುಮಾನ ಗೆಲ್ಲಿ; 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈಲಿ ಕ್ವಿಜ್ ವಿವರ ಹೀಗಿದೆ-education news connect kannada unlock karnataka daily quiz for 5th to 10th students prize details rmy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ನಗದು ಬಹುಮಾನ ಗೆಲ್ಲಿ; 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈಲಿ ಕ್ವಿಜ್ ವಿವರ ಹೀಗಿದೆ

ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ನಗದು ಬಹುಮಾನ ಗೆಲ್ಲಿ; 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈಲಿ ಕ್ವಿಜ್ ವಿವರ ಹೀಗಿದೆ

ಕನೆಕ್ಟ್ ಕನ್ನಡ-ಅನ್ಲಾಕ್ ಕರ್ನಾಟಕ ಕಾರ್ಯಕ್ರಮದಡಿ ನೇಟಿವ್ ಡ್ರೀಮ್ ಟೆಕ್ನಾಲಜೀಸ್ ಸಂಸ್ಥೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 5 ರಿಂದ 10ನೇ ತರಗತಿ ಮಕ್ಕಳಿಗೆ ಡೈಲಿ ಕ್ವಿಜ್ ಏರ್ಪಡಿಸಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಕರುನಾಡ ಶಿಬಿರ-ಏಪ್ರಿಲ್ 2024  ಕಾರ್ಯಕ್ರಮದಡಿಯಲ್ಲಿ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈಲಿ ಕ್ವಿಜ್ ಏರ್ಪಡಿಸಲಾಗಿದೆ
ಕರುನಾಡ ಶಿಬಿರ-ಏಪ್ರಿಲ್ 2024 ಕಾರ್ಯಕ್ರಮದಡಿಯಲ್ಲಿ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಡೈಲಿ ಕ್ವಿಜ್ ಏರ್ಪಡಿಸಲಾಗಿದೆ

ಬೆಂಗಳೂರು: ನೇಟಿವ್ ಡ್ರೀಮ್ ಟೆಕ್ನಾಲಜೀಸ್ (Native Dream Technologies) ಸಂಸ್ಥೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ 5 ರಿಂದ 10ನೇ ತರಗತಿ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮದಡಿ ಡೈಲಿ ಕ್ವಿಜ್ (Daily Quiz) ಅನ್ನು ಆಯೋಜಿಸಿದೆ. ಈ ಡೈಲಿ ಕ್ವಿಜ್ 2024ರ ಏಪ್ರಿಲ್‌ನಿಂದ ನವೆಂಬರ್‌ ವರಗೆ ನಡೆಯಲಿದೆ. ಪ್ರತಿ ತಿಂಗಳು ಗೆಲ್ಲುವ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 5,000, ದ್ವಿತೀಯ ಬಹುಮಾನ 3,000 ಹಾಗೂ ತೃತೀಯ ಬಹುಮಾನವಾಗಿ 2,000 ರೂಪಾಯಿ ಸಿಗಲಿದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರಿಗಾಗಿ ಅಗತ್ಯ ಮಾಹಿತಿ ಇಲ್ಲಿದೆ.

ನೇಟಿವ್ ಡ್ರೀಮ್ ಟೆಕ್ನಾಲಜೀಸ್ ಸಂಸ್ಥೆ ಮಾತೃಭಾಷಾ ಆಪ್‌ನಲ್ಲಿ 5ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಕನೆಕ್ಟ್ ಕನ್ನಡ-ಅನ್ಲಾಕ್ ಕರ್ನಾಟಕ ಎಂಬ ಕಾರ್ಯಕ್ರಮವನ್ನು 2024ರ ಏಪ್ರಿಲ್ 1 ರಿಂದ ಆರಂಭಿಸುತ್ತಿದ್ದು, ನವೆಂಬರ್ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಮಕ್ಕಳಿಗೆ ನಮ್ಮ 'ನಾಡು ನುಡಿ, ಇತಿಹಾಸ'ದ ಬಗ್ಗೆ ಅರಿವು ಮತ್ತು ಒಲವು ಮೂಡಿಸುವುದಾಗಿದೆ. ಅದಕ್ಕಾಗಿ 'ಪರಿಕರ, ಪರಿಸರ ಮತ್ತು ಪ್ರೋತ್ಸಾಹ' ನೀಡಲಾಗುತ್ತದೆ ಎಂದು ಹೇಳಿದೆ.

ಫೈನಲ್ ಗೆಲ್ಲುವ ವಿದ್ಯಾರ್ಥಿಗೆ 51 ಸಾವಿರ, ಶಾಲೆಗೆ 3 ಲಕ್ಷ ರೂಪಾಯಿ ಬಹುಮಾನ

2024ರ ಏಪ್ರಿಲ್‌ನಿಂದ ನವೆಂಬರ್‌ ವರೆಗೆ ನಡೆಯುವ ಈ ಕಾರ್ಯಕ್ರಮ ಉಚಿತವಾಗಿದ್ದು, ಕರ್ನಾಟಕದ ಯಾವುದೇ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಪ್ರತಿ ತಿಂಗಳು ಗೆಲ್ಲುವ ಮೊದಲ ಮೂರು ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ ಹಾಗೂ ತೃತೀಯ ಬಹುಮಾನವಾಗಿ 2 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ನವೆಂಬರ್‌ನಲ್ಲಿ ರಾಜ್ಯ ಮಟ್ಟದ ಪ್ರಿ-ಫೈನಲ್‌ಗೆ ಅರ್ಹತೆಯನ್ನ ಪಡೆಯುತ್ತಾರೆ. ಕನೆಕ್ಟ್ ಕನ್ನಡ-ಅನ್ಲಾಕ್ ಕರ್ನಾಟಕ ಫೈನಲ್ ನವೆಂಬರ್‌ನಲ್ಲಿ ನಡೆಯಲಿದ್ದು, ಅದರಲ್ಲಿ ಗೆಲ್ಲುವ ವಿದ್ಯಾರ್ಥಿಗೆ 51 ಸಾವಿರ ನಗದು ಬಹುಮಾನ ಹಾಗೂ ವಿದ್ಯಾ ಶ್ರೇಷ್ಠ ಪ್ರಶಸ್ತಿ ಹಾಗೂ ವಿದ್ಯಾರ್ಥಿ ಓದುತ್ತಿರುವ ಶಾಲೆಗೆ 3,10,000 ರೂಪಾಯಿ ನಗರದು ಬಹುಮಾನ ಮತ್ತು ವಿದ್ಯಾ ವಿಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ನೋಂದಾಯಿಸಲು ಇಚ್ಚಿಸುವ ಶಾಲೆಗಳು ಸಂಸ್ಥೆಯ ವಾಟ್ಸಪ್ ನಂಬರ್ +91 63669 75151 ಗೆ ಸಂದೇಶ ಕಳುಹಿಸಿ ಅರ್ಜಿ ಪಡೆಯಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳು ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ನಮ್ಮ ಮಾತೃಭಾಷಾ (Matrubhasha) ಆಪ್ ಡೌನ್‌ಲೋಡ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.