ಕನ್ನಡ ಸುದ್ದಿ  /  Karnataka  /  Education News Final Kcet Matrix Karnataka Examination Authority Dropped 9000 Engineering Architecture Seats Pcp

Education News: ಪ್ರತಿಷ್ಠಿತ ಕಾಲೇಜುಗಳು ಒಳಗೊಂಡಂತೆ 90 ಶಿಕ್ಷಣ ಸಂಸ್ಥೆಗಳ 9000 ಎಂಜಿನಿಯರಿಂಗ್‌ ಆರ್ಕಿಟೆಕ್ಚರ್‌ ಸೀಟು ಕೈಬಿಟ್ಟ ಕೆಇಎ

KEA final KCET matrix: ಪ್ರತಿಷ್ಠಿತ ಕಾಲೇಜುಗಳು ಒಳಗೊಂಡಂತೆ 90ಕ್ಕೂ ಹೆಚ್ಚು ಕಾಲೇಜುಗಳ ಸೀಟುಗಳನ್ನು ಕೈಬಿಡಲಾಗಿದೆ. ಆರ್‌ವಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಎಂಎಸ್‌ ರಾಮಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ದಯಾನಂದ ಸಾಗರ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಬಿಎಂಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜುಗಳು ಇದರಲ್ಲಿ ಸೇರಿವೆ.

Education News:  90 ಶಿಕ್ಷಣ ಸಂಸ್ಥೆಗಳ 9000 ಎಂಜಿನಿಯರಿಂಗ್‌ ಆರ್ಕಿಟೆಕ್ಚರ್‌ ಸೀಟು ಕೈಬಿಟ್ಟ ಕೆಇಎ
Education News: 90 ಶಿಕ್ಷಣ ಸಂಸ್ಥೆಗಳ 9000 ಎಂಜಿನಿಯರಿಂಗ್‌ ಆರ್ಕಿಟೆಕ್ಚರ್‌ ಸೀಟು ಕೈಬಿಟ್ಟ ಕೆಇಎ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಂತಿಮ ಕೆಸಿಇಟಿ ಮ್ಯಾಟ್ರಿಕ್ಸ್‌ನಲ್ಲಿ ರಾಜ್ಯದ ಪ್ರತಿಷ್ಠಿತ ಕಾಲೇಜುಗಳು ಒಳಗೊಂಡಂತೆ 90ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 9000 ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಸೀಟುಗಳನ್ನು ಕೈಬಿಟ್ಟಿದೆ ಎಂದು ವರದಿಗಳು ತಿಳಿಸಿವೆ. "ಕಾಲೇಜುಗಳು ನಿರಾಪೇಕ್ಷ ಪ್ರಮಾಣ ಪತ್ರ (ಎನ್‌ಒಸಿ) ಪಡೆಯದೆ ಇರುವುದು ಅಥವಾ ಸಕಾರದಿಂದ ಅಂಗೀಕಾರ ಪಡೆಯದೆ ಇರುವುದರಿಂದ ಸುಮಾರು 9 ಸಾವಿರ ಸೀಟುಗಳನ್ನು ಕೈಬಿಡಲಾಗಿದೆ" ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳು ಒಳಗೊಂಡಂತೆ 90ಕ್ಕೂ ಹೆಚ್ಚು ಕಾಲೇಜುಗಳ ಸೀಟುಗಳನ್ನು ಕೈಬಿಡಲಾಗಿದೆ. ಆರ್‌ವಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಎಂಎಸ್‌ ರಾಮಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ದಯಾನಂದ ಸಾಗರ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಬಿಎಂಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಇವುಗಳಲ್ಲಿ ಸೇರಿವೆ.

ಈ ಭಿನ್ನಾಭಿಪ್ರಾಯ ಮುಗಿಯೋ ತನಕ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಬಾರದು ಎಂದು ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ (KUPECA)ವು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಒತ್ತಾಯಿಸಿದೆ ಎಂದು ವರದಿ ತಿಳಿಸಿದೆ.

"ಕೆಇಇಯು ಪ್ರಕಟಿಸಿದ ಸೀಟು ಮ್ಯಾಟಿಕ್ಸ್‌ ಅನ್ನು ಹಿಂಪಡೆಯಲು ವಿನಂತಿಸುತ್ತೇವೆ. ಈ ತೊಂದರೆ ಸರಿಯಾಗುವವರೆಗೆ ಕೌನ್ಸೆಲಿಂಗ್‌ ಮುಂದುವರೆಸದಂತೆ ವಿನಂತಿಸುತ್ತೇವೆ. ಅಂತಿಮ ಸೀಟ್‌ ಮ್ಯಾಟ್ರಿಕ್ಸ್‌ನಲ್ಲಿ ಭಾರಿ ವ್ಯತ್ಯಾಸವಿದೆ" ಎಂದು ಕೆಇಎಗೆ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ ಪತ್ರ ಬರೆದಿದೆ.

"ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಎಐಸಿಟಿಇ, ಆರ್ಕಿಟೆಕ್ಚರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮೋದಿಸಲಾದ ವಿಷಯವನ್ನು ಪರಿಶೀಲಿಸಲಾಗಿದೆ. ರಾಜ್ಯ ಸರಕಾರದಿಂದ ಅನುಮೋದನೆ, ಎನ್‌ಒಸಿ ಪಡೆದಿರುವ ಕೋರ್ಸ್‌ಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ" ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಆಯಾ ಕಾಲೇಜುಗಳು ಅನುಮೋದನೆ ಆದೇಶ ಅಥವಾ ನಾನ್‌ ಆಬ್ಜೆಕ್ಷನ್‌ ಸರ್ಟಿಫಿಕೇಟ್‌ ಸಲ್ಲಿಸಿದ ಬಳಿಕ ಕೈಬಿಟ್ಟ ಸೀಟುಗಳನ್ನು ಸೇರಿಸಲಾಗುವುದು ಎಂದು ಕೆಇಎ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕಾಲೇಜುಗಳು ಸರಕಾರದಿಂದ ಅನುಮೋದನೆ, ಎನ್‌ಒಸಿ ಪಡೆಯುವುದು ಕಡ್ಡಾಯ ಎಂದು ಕೆಇಎ ಖಚಿತಪಡಿಸಿದೆ.

ಇಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿಘ್ನೇಶ್‌ ಸಂದರ್ಶನ

ಈ ಹಿಂದೆ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಎಂಜಿನಿಯರಿಂಗ್‌ ವಿಭಾಗದಲ್ಲಿ ಅಗ್ರ ರಾಂಕ್‌ ಪಡೆದ ವಿದ್ಯಾರ್ಥಿಯನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಸಂದರ್ಶನ ನಡೆಸಿತ್ತು. , ಎಂಜಿನಿಯರಿಂಗ್‌ ವಿಭಾಗದಲ್ಲಿ ವಿಘ್ನೇಶ್‌ ನಟರಾಜ್ ಕುಮಾರ್ ಕರ್ನಾಟಕಕ್ಕೆ ಮೊದಲ ರ‍್ಯಾಂಕ್‌ (ಶೇಕಡ 96.111) ಪಡೆದಿದ್ದರು. ಎಂಜಿನಿಯರಿಂಗ್‌ ಪದವಿ ಪಡೆದು ಭವಿಷ್ಯದಲ್ಲಿ ಟೆಕ್ನಾಲಜಿ ಮತ್ತು ಇನ್ನೋವೇಷನ್‌ ಬಳಸಿ ನ್ಯೂರೋ ಡೈವರ್ಜನ್‌ ಕಾಯಿಲೆಯಿಂದ ಬಳಲುವವರಿಗೆ ಸಹಾಯ ಮಾಡಬೇಕೆಂಬ ಸುಂದರ ಕನಸು ಹೊಂದಿದ್ದಾರೆ. ಬೆಂಗಳೂರಿನ ಉತ್ತರ ಹಳ್ಳಿಯ ಕುಮಾರನ್ ಚಿಲ್ಡ್ರನ್ಸ್ ಹೋಂನ ವಿದ್ಯಾರ್ಥಿಯಾಗಿದ್ದ ಇವರು ತಮ್ಮ ಯಶಸ್ಸಿನ ಗುಟ್ಟನ್ನು ಎಚ್‌ಟಿ ಕನ್ನಡದ ಮುಂದೆ ಬಿಚ್ಚಿಟ್ಟಿದ್ದರು. ಅವರ ಜತೆ ನಡೆಸಿದ ಸಂದರ್ಶನ ಓದಲು ಇಲ್ಲಿ ಕ್ಲಿಕ್‌ ಮಾಡಿ.