Best Diploma Courses: ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾದ ಬೆಸ್ಟ್‌ ಡಿಪ್ಲೊಮಾ ಕೋರ್ಸ್‌ಗಳ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Best Diploma Courses: ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾದ ಬೆಸ್ಟ್‌ ಡಿಪ್ಲೊಮಾ ಕೋರ್ಸ್‌ಗಳ ವಿವರ ಹೀಗಿದೆ

Best Diploma Courses: ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾದ ಬೆಸ್ಟ್‌ ಡಿಪ್ಲೊಮಾ ಕೋರ್ಸ್‌ಗಳ ವಿವರ ಹೀಗಿದೆ

Best Diploma Courses: ಎಸ್‌ಎಸ್‌ಎಲ್‌ಸಿ ಆದ ಮೇಲೆ ಪಿಯುಸಿ ಮಾತ್ರ ಅಲ್ಲ, ಸಾಮಾನ್ಯ ಇಂಟರ್‌ಮೀಡಿಯೇಟ್‌ ಕೋರ್ಸ್‌ಗಳು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿವೆ. ದುಬಾರಿ ದುನಿಯಾದಲ್ಲಿ ಉನ್ನತ ಶಿಕ್ಷಣ ಪಡೆಯುವುದು ಎಲ್ಲರಿಗೂ ಸಾಧ್ಯವಾಗದೇ ಹೋಗಬಹುದು. ಆದರೆ ಉದ್ಯೋಗ ಪಡೆಯುವಲ್ಲಿ ನೆರವಾಗುವ ಡಿಪ್ಲೊಮಾ ಕೋರ್ಸ್‌ಗಳು ಈಗ ಸಾಕಷ್ಟಿವೆ. ಅವುಗಳ ವಿವರ ಹೀಗಿದೆ.

 ಎಸ್‌ಎಸ್‌ಎಲ್‌ಸಿ ಆದವರಿಗೆ ಇಂದು ಉದ್ಯೋಗ ಪಡೆಯುವಲ್ಲಿ ನೆರವಾಗುವ ಡಿಪ್ಲೊಮಾ ಕೋರ್ಸ್‌ಗಳು ಈಗ ಸಾಕಷ್ಟಿವೆ. (ಸಾಂದರ್ಭಿಕ ಚಿತ್ರ)
ಎಸ್‌ಎಸ್‌ಎಲ್‌ಸಿ ಆದವರಿಗೆ ಇಂದು ಉದ್ಯೋಗ ಪಡೆಯುವಲ್ಲಿ ನೆರವಾಗುವ ಡಿಪ್ಲೊಮಾ ಕೋರ್ಸ್‌ಗಳು ಈಗ ಸಾಕಷ್ಟಿವೆ. (ಸಾಂದರ್ಭಿಕ ಚಿತ್ರ) (Canva)

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳ ಬದುಕಿನಲ್ಲಿ ಇದು ಮಹತ್ವದ ಕಾಲಘಟ್ಟ. ಎಸ್‌ಎಸ್‌ಎಲ್‌ಸಿ ಆದ ಮೇಲೆ ಪಿಯುಸಿ ಎಂಬ ವಾಡಿಕೆಗೆ ತಲೆಬಾಗಬೇಕಾಗಿಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳ ನಿರ್ಧಾರಗಳು ಅವರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತವೆ. 10 ನೇ ತರಗತಿಯ ನಂತರ ಯಾವುದೇ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಮೊದಲು ವಿದ್ಯಾರ್ಥಿಗಳು ಸರಿಯಾಗಿ ನಿರ್ಧರವನ್ನು ತೆಗೆದುಕೊಳ್ಳಬೇಕು. ಈ ಹಂತದಲ್ಲಿ, ಪಾಲಕರ ಮಾರ್ಗದರ್ಶನವೂ ನಿರ್ಣಾಯಕ. ಸ್ಟ್ರೀಮ್ ಅನ್ನು ಆಯ್ಕೆಮಾಡುವ ಮೊದಲು ಸಲಹೆಯನ್ನು ಸಹ ತೆಗೆದುಕೊಳ್ಳಬಹುದು. ಈಗ ಉದ್ಯೋಗ ಒದಗಿಸುವ ಅನೇಕ ಕೌಶಲ ಸಂಬಂಧಿ ಕೋರ್ಸ್‌ಗಳು ಈಗ ಲಭ್ಯ ಇವೆ.

ಹೆಚ್ಚು ಪ್ರಾಯೋಗಿಕ ಜ್ಞಾನವನ್ನು ಬಯಸುವ ವಿದ್ಯಾರ್ಥಿಗಳು ವಿವಿಧ ಪಾಲಿಟೆಕ್ನಿಕ್ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ಎಂಜಿನಿಯರಿಂಗ್‌ನಲ್ಲಿನ ಡಿಪ್ಲೊಮಾ ಕೋರ್ಸ್‌ಗಳು ವಿದ್ಯಾರ್ಥಿಗೆ ಬಿ.ಟೆಕ್‌ನ ಎರಡನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯಲು ನೆರವಾಗುತ್ತದೆ. 10 ನೇ ತರಗತಿಯ ನಂತರ ಆಯ್ಕೆಯಾಗಿ ಚಾಲ್ತಿಯಲ್ಲಿರುವ ಕೆಲವು ಜನಪ್ರಿಯ ಡಿಪ್ಲೊಮಾ ಕೋರ್ಸ್‌ಗಳು:

  • ಡಿಪ್ಲೊಮಾ ಇನ್ ಆರ್ಕಿಟೆಕ್ಚರಲ್ ಅಸಿಸ್ಟೆಂಟ್‌ಶಿಪ್ ಇನ್ ಆಟೋಮೊಬೈಲ್ ಇಂಜಿನಿಯರಿಂಗ್
  • ಡಿಪ್ಲೊಮಾ ಇನ್ ಕೆಮಿಕಲ್ ಇಂಜಿನಿಯರಿಂಗ್
  • ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್
  • ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
  • ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
  • ಡಿಪ್ಲೊಮಾ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್
  • ಡಿಪ್ಲೊಮಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
  • ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ (ಮೈಕ್ರೊಪ್ರೊಸೆಸರ್)
  • ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್
  • ಡಿಪ್ಲೊಮಾ ಇನ್ ಫ್ಯಾಶನ್ ಡಿಸೈನ್ ಡಿಪ್ಲೊಮಾ ಇನ್ ಫುಡ್ ಟೆಕ್ನಾಲಜಿ
  • ಡಿಪ್ಲೊಮಾ ಇನ್ ಗಾರ್ಮೆಂಟ್ ಟೆಕ್ನಾಲಜಿ ಡಿಪ್ಲೊಮಾ ಇನ್ ಇನ್‌ಫರ್ಮೇಷನ್ ಟೆಕ್ನಾಲಜಿ
  • ಡಿಪ್ಲೊಮಾ ಇನ್ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ

ಇವುಗಳಲ್ಲದೆ ಹೊಸ ಕೋರ್ಸ್‌ಗಳು ಕೂಡ ಈಗ ಚಾಲ್ತಿಗೆ ಬಂದಿವೆ. ಅವುಗಳಲ್ಲಿ ಕೆಲವು ಡಿಪ್ಲೊಮಾ ಕೋರ್ಸ್‌ಗಳ ವಿವರ ಹೀಗಿದೆ

  • ಟ್ರಾವೆಲ್‌ ಆಂಡ್‌ ಟೂರಿಸಂ (Travel and Tourism).
  • ಸೈಬರ್ ಸೆಕ್ಯುರಿಟಿ (Cyber security)
  • ಸೈಬರ್ ಫಿಸಿಕಲ್‌ ಸಿಸ್ಟಮ್‌ ಆಂಡ್‌ ಸೆಕ್ಯುರಿಟಿ (Cyber physical system and security).
  • ಆಟೊಮೇಷನ್ ಮತ್ತು ರೊಬಾಟಿಕ್ಸ್ (Automation and Robotics)
  • ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡೇಟಾ (Cloud Computing and Big Data)
  • ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜಿ (Alternative Energy Technology)

ಎಂಜಿನಿಯರಿಂಗ್‌ನಲ್ಲಿನ ಡಿಪ್ಲೊಮಾ ಕೋರ್ಸ್‌ಗಳು ಆಳವಾದ ಪ್ರಾಯೋಗಿಕ ಒಳನೋಟಗಳನ್ನು ನೀಡುತ್ತವೆ. ಕಲಿಕಾರ್ಥಿಗಳು ಈ ಕೋರ್ಸ್‌ಗಳಲ್ಲಿ ಪ್ರಾಯೋಗಿಕ ಕಾರ್ಯವಿಧಾನಗಳನ್ನು ಚೆನ್ನಾಗಿ ತಿಳಿದುಕೊಳ್ಳುವುದು ಸಾಧ್ಯವಿದೆ. ಉತ್ತಮ ಪ್ರಾಯೋಗಿಕ ಕೌಶಲಗಳೊಂದಿಗೆ, ಪರಿಕಲ್ಪನೆಗಳ ಸಂಪೂರ್ಣ ತಿಳಿವಳಿಕೆಯನ್ನು ಪಡೆಯಬಹುದು.

ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್

ಇ‌ದೇ ರೀತಿ, ಪ್ಯಾರಾಮೆಡಿಕಲ್ ಡೊಮೇನ್‌ನಲ್ಲಿ ಕೂಡ ವಿವಿಧ ಡಿಪ್ಲೊಮಾ ಕೋರ್ಸ್‌ಗಳಿವೆ. 10ನೇ ತರಗತಿಯ ಬಳಿಕ ಈ ಡಿಪ್ಲೊಮಾ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾಗಿದೆ. ಪ್ಯಾರಾಮೆಡಿಕಲ್ ಕೋರ್ಸ್‌ಗಳ ನಂತರ, ವಿದ್ಯಾರ್ಥಿಗಳು ಅರೆ-ವೃತ್ತಿಪರ ಕ್ಷೇತ್ರಗಳ ಉದ್ಯೋಗಕ್ಕೆ ತ್ವರಿತವಾಗಿ ಪ್ರವೇಶಿಸಬಹುದು. ಬೇಗನೆ ಉದ್ಯೋಗವೂ ಸಿಗಬಹುದು. ಅಂತಹ ಕೆಲವು ಜನಪ್ರಿಯ ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳ ವಿವರ ಹೀಗಿದೆ.

  • ಮೆಡಿಕಲ್‌ ಲ್ಯಾಬೊರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ
  • ಎಮರ್ಜೆನ್ಸಿ ಮೆಡಿಸಿನ್‌ನಲ್ಲಿ ಡಿಪ್ಲೊಮಾ
  • O.T. ಟೆಕ್ನಿಷಿಯನ್ ಡಿಪ್ಲೊಮಾ
  • ಹಾಸ್ಪಿಟಲ್ ಫುಡ್ ಸರ್ವಿಸ್ ಮ್ಯಾನೇಜ್‌ಮೆಂಟ್ ಡಿಪ್ಲೊಮಾ
  • ಬಯೋಮೆಡಿಕಲ್ ಇನ್‌ಸ್ಟ್ರುಮೆಂಟೇಶನ್
  • ಡಿಪ್ಲೊಮಾ ಇನ್ ಆಫ್ತಾಲ್ಮಿಕ್‌ ಅಸಿಸ್ಟೆಂಟ್‌

ಹೀಗೆ ಹುಡುಕಿದರೆ ಇನ್ನಷ್ಟು ಡಿಪ್ಲೊಮಾಗಳ ವಿವರಗಳು ಸಿಗುತ್ತವೆ. ಇವುಗಳಲ್ಲಿ ಸೂಕ್ತವಾದವನ್ನು ಆಯ್ಕೆ ಮಾಡಿಕೊಂಡು ಕಲಿಕೆ ಮುಂದುವರಿಸಿ ಉದ್ಯೋಗ ಕ್ಷೇತ್ರ ಪ್ರವೇಶಿಸಬಹುದು. ಆಲ್‌ ದ ಬೆಸ್ಟ್.‌

Whats_app_banner