JEE Main 2025: ಜೆಇಇ ಮೇನ್ಸ್‌ ಡ್ರೆಸ್‌ ಕೋಡ್‌ ಏನು? ಪರೀಕ್ಷೆಗೆ ಮುನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸ್ತ್ರ ಸಂಹಿತೆ ಬಗ್ಗೆ ತಿಳಿಯಿರಿ
ಕನ್ನಡ ಸುದ್ದಿ  /  ಕರ್ನಾಟಕ  /  Jee Main 2025: ಜೆಇಇ ಮೇನ್ಸ್‌ ಡ್ರೆಸ್‌ ಕೋಡ್‌ ಏನು? ಪರೀಕ್ಷೆಗೆ ಮುನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸ್ತ್ರ ಸಂಹಿತೆ ಬಗ್ಗೆ ತಿಳಿಯಿರಿ

JEE Main 2025: ಜೆಇಇ ಮೇನ್ಸ್‌ ಡ್ರೆಸ್‌ ಕೋಡ್‌ ಏನು? ಪರೀಕ್ಷೆಗೆ ಮುನ್ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಸ್ತ್ರ ಸಂಹಿತೆ ಬಗ್ಗೆ ತಿಳಿಯಿರಿ

JEE Main 2025 Dress Code: ಸರಳ ಮತ್ತು ಕಂಫರ್ಟ್‌ ಆಗಿರುವ ಉಡುಪು ಧರಿಸಿರಬೇಕು. ಭದ್ರತಾ ತಪಾಸಣೆಗೆ ಅನುಕೂಲವಾಗುವಂತಹ ಉಡುಗೆ ತೊಟ್ಟಿರಬೇಕು. ಅಭ್ಯರ್ಥಿಗಳು ಲೋಹದ ವಸ್ತುಗಳು, ಪರಿಕರಗಳನ್ನು ಧರಿಸರಬಾರದು. ಏಕೆಂದರೆ, ಇವು ಭದ್ರತಾ ತಪಾಸಣೆಗೆ ಅಡ್ಡಿಪಡಿಸುತ್ತದೆ. ಆಯಾ ಋತುವಿಗೆ ಅನುಗುಣವಾದ, ಹಗುರವಾದ ಉಡುಪು ಧರಿಸಲು ವಿದ್ಯಾರ್ಥಿಗಳು ಆದ್ಯತೆ ನೀಡಿರಬೇಕು.

JEE Main 2025: ಜೆಇಇ ಮೇನ್ಸ್‌ ಡ್ರೆಸ್‌ ಕೋಡ್‌ ಏನು? ವಸ್ತ್ರ ಸಂಹಿತೆ ಬಗ್ಗೆ ತಿಳಿದುಕೊಳ್ಳಿ
JEE Main 2025: ಜೆಇಇ ಮೇನ್ಸ್‌ ಡ್ರೆಸ್‌ ಕೋಡ್‌ ಏನು? ವಸ್ತ್ರ ಸಂಹಿತೆ ಬಗ್ಗೆ ತಿಳಿದುಕೊಳ್ಳಿ

JEE Main 2025 Dress Code: ಜೆಇಇ ಮೇನ್ಸ್‌ ಪರೀಕ್ಷೆ ಹತ್ತಿರದಲ್ಲಿದೆ. ಈ ಜೆಇಇ ಮುಖ್ಯ ಪರೀಕ್ಷೆಯು ಸುಗಮ ಮತ್ತು ಸುರಕ್ಷಿತವಾಗಿರಲು ಕೆಲವೊಂದು ಡ್ರೆಸ್‌ ಕೋಡ್‌ ಮಾರ್ಗಸೂಚಿಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಇ) ಸೂಚಿಸಿದೆ. ಈ ಪರೀಕ್ಷೆ ಬರೆಯಲು ಯಾವುದೇ ಕಡ್ಡಾಯ ಸಮವಸ್ತ್ರವಿಲ್ಲ. ಆದರೆ, ಭದ್ರತಾ ತಪಾಸಣೆ ಸಮಯದಲ್ಲಿ ಅನಾನುಕೂಲವಾಗುವುದನ್ನು ತಪ್ಪಿಸಲು ಅಭ್ಯರ್ಥಿಗಳು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು.

ಜೆಇಇ ಮೇನ್ಸ್‌ ಡ್ರೆಸ್‌ ಕೋಡ್‌

ಸರಳ ಮತ್ತು ಕಂಫರ್ಟ್‌ ಆಗಿರುವ ಉಡುಪು ಧರಿಸಿರಬೇಕು. ಭದ್ರತಾ ತಪಾಸಣೆಗೆ ಅನುಕೂಲವಾಗುವಂತಹ ಉಡುಗೆ ತೊಟ್ಟಿರಬೇಕು. ಅಭ್ಯರ್ಥಿಗಳು ಲೋಹದ ವಸ್ತುಗಳು, ಪರಿಕರಗಳನ್ನು ಧರಿಸರಬಾರದು. ಏಕೆಂದರೆ, ಇವು ಭದ್ರತಾ ತಪಾಸಣೆಗೆ ಅಡ್ಡಿಪಡಿಸುತ್ತದೆ. ಆಯಾ ಋತುವಿಗೆ ಅನುಗುಣವಾದ, ಹಗುರವಾದ ಉಡುಪು ಧರಿಸಲು ವಿದ್ಯಾರ್ಥಿಗಳು ಆದ್ಯತೆ ನೀಡಿರಬೇಕು.

ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ

  • ಬಕಲ್‌ಗಳು ಅಥವಾ ಅಲಂಕಾರಗಳಂತಹ ಮೆಟಲ್‌ ವಸ್ತುಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
  • ಕ್ಯಾಪ್‌ಗಳು, ಮಫ್ಲರ್‌ಗಳು ಅಥವಾ ಯಾವುದೇ ರೀತಿಯ ತಲೆ ಹೊದಿಕೆ ಧರಿಸಬೇಡಿ.
  • ಹಗುರವಾದ, ಸರಳವಾದ ಬಟ್ಟೆ ಧರಿಸಲು ಆದ್ಯತೆ ನೀಡಿ
  • ಚೈನ್‌ಗಳು, ಬಳೆಗಳು, ಉಂಗುರಗಳಂತಹ ಆಭರಣಗಳನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ದಪ್ಪ ಅಡಿಭಾಗವನ್ನು ಹೊಂದಿರುವ ಪಾದರಕ್ಷೆಗಳನ್ನು ಧರಿಸಬೇಡಿ. ಸರಳವಾದ ಸ್ಯಾಂಡಲ್‌ಗಳು ಅಥವಾ ಚಪ್ಪಲಿಗಳನ್ನು ಧರಿಸಲು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: Top 10 BTech Courses: ಜೆಇಇ ಅಡ್ವಾನ್ಸ್ಡ್ ಬಳಿಕ ಐಐಟಿಗಳಲ್ಲಿ ಬಲುಬೇಡಿಕೆ ಇರುವ ಟಾಪ್‌ 10 ಬಿಟೆಕ್‌ ಕೋರ್ಸ್‌ಗಳಿವು

ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆ

  • ಭದ್ರತಾ ತಪಾಸಣೆಯ ಸಮಯದಲ್ಲಿ ತಪಾಸಣೆ ಮಾಡಲು ವಿಳಂಬಕ್ಕೆ ಕಾರಣವಾಗುವಂತಹ ಉಡುಗೆ ಧರಿಸಬೇಡಿ. ಅಂದರೆ, ಸ್ಟೋಲ್‌ಗಳು, ದುಪ್ಪಟ್ಟಾಗಳು, ಸ್ಕಾರ್ಫ್‌ಗಳು ಇತ್ಯಾದಿ ಬಟ್ಟೆ ಧರಿಸುವುದನ್ನು ಅವಾಯ್ಡ್‌ ಮಾಡಿ.
  • ಉಂಗುರಗಳು, ಕಿವಿಯೋಲೆಗಳು ಅಥವಾ ಬಳೆಗಳು ಸೇರಿದಂತೆ ಆಭರಣಗಳು ಅಥವಾ ಲೋಹದ ವಸ್ತುಗಳನ್ನು ಧರಿಸಬೇಡಿ.
  • ಹವಾಮಾನಕ್ಕೆ ಸೂಕ್ತವಾದ ಸರಳ, ಆರಾಮದಾಯಕ ಉಡುಪುಗಳನ್ನು ಆರಿಸಿಕೊಳ್ಳಿ.
  • ಕನ್ನಡಕಗಳು ಅಥವಾ ಭಾರವಾದ ಅಲಂಕಾರಿಕ ಆಕ್ಸೆಸರಿಗಳಿಗೆ ಅನುಮತಿ ನೀಡಲಾಗುವುದಿಲ್ಲ.

ಇದನ್ನೂ ಓದಿ: After Puc: ದ್ವಿತೀಯ ಪಿಯುಸಿ ಬಳಿಕ ಆರ್ಟ್ಸ್‌ ವಿದ್ಯಾರ್ಥಿಗಳು ಕಲಿಯಬಹುದಾದ 10 ಡಿಪ್ಲೊಮಾ ಕೋರ್ಸ್‌ಗಳು

ಡಯಾಬಿಟೀಸ್‌ ಇರುವ ವಿದ್ಯಾರ್ಥಿಗಳು

ಮಧುಮೇಹ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷೆ ಹಾಲ್‌ಗೆ ಮಾತ್ರೆಗಳು, ಹಣ್ಣುಗಳು, ಪಾರದರ್ಶಕ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಬಹುದು. ಸಕ್ಕರೆ ಕಾಯಿಲೆ ಇರುವ ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ, ಹೆಚ್ಚು ನೀರು ಕುಡಿದು ನಿರ್ಜಲೀಕರಣ ತಪ್ಪಿಸಿಲು ಸೂಚಿಸಲಾಗಿದೆ.

ಬೂಟುಗಳು ಸೇರಿದಂತೆ ಮುಚ್ಚಿದ ಪಾದರಕ್ಷೆಗಳನ್ನು ಧರಿಸುವುದನ್ನು ತಪ್ಪಿಸಿ. ಅರ್ಧ ತೋಳಿನ (ಟಿ-ಶರ್ಟ್, ಇತ್ಯಾದಿ) ಹಗುರವಾದ ಬಟ್ಟೆಗಳನ್ನು ಧರಿಸಿ. ಉದ್ದ ತೋಳುಗಳ ಉಡುಪುಗಳಿಗೆ ಅನುಮತಿ ನೀಡಲಾಗುವುದಿಲ್ಲ. ದೊಡ್ಡ ಗುಂಡಿಗಳಿರುವ ಬಟ್ಟೆಗಳನ್ನು ಧರಿಸಬೇಡಿ. ನೀವು ಧಾರ್ಮಿಕ ಅಥವಾ ವಿಶೇಷ ಕಾರಣಗಳಿಗಾಗಿ ನಿರ್ದಿಷ್ಟ ಉಡುಪುಗಳನ್ನು ಧರಿಸಿದರೆ, ಕಡ್ಡಾಯ ತಪಾಸಣೆಗಾಗಿ ದಯವಿಟ್ಟು ಪರೀಕ್ಷಾ ಕೇಂದ್ರಕ್ಕೆ ಬೇಗನೇ ಬರಲು ಮರೆಯಬೇಡಿ.

ಜೆಇಇ ಮೇನ್ಸ್ 2025 ಅಡ್ಮಿಟ್‌ ಕಾರ್ಡ್‌ ಅನ್ನು ಎ4 ಕಾಗದದ ಮೇಲೆ ಕಲರ್‌ ಪ್ರಿಂಟ್‌ ತೆಗೆದಿರಬೇಕು. ಫೋಟೋ ಮತ್ತು ಸಹಿ ಸೇರಿದಂತೆ ಎಲ್ಲಾ ವಿವರಗಳು ಸ್ಪಷ್ಟವಾಗಿ ಪ್ರಿಂಟ್‌ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ಎಲ್ಲಾ ಪುಟಗಳ ಮುದ್ರಣವನ್ನು ತೆಗೆದುಕೊಳ್ಳಿ. ಪ್ರವೇಶ ಪತ್ರದಲ್ಲಿ ನಮೂದಿಸಲಾದ ನಿಮ್ಮ ಫೋಟೋ ಐಡಿ, ಫೋಟೋ ಇತ್ಯಾದಿಗಳನ್ನು ಪರಿಶೀಲನೆ ವೇಳೆ ತನ್ನಿ. ಪರೀಕ್ಷಾ ಕೇಂದ್ರಗಳಿಗೆ ಕೈಚೀಲಗಳು, ಮೊಬೈಲ್ ಫೋನ್‌ಗಳು ಮತ್ತು ಯಾವುದೇ ಸಂವಹನ/ಎಲೆಕ್ಟ್ರಾನಿಕ್ ಸಾಧನಗಳನ್ನು ತರುವಂತೆ ಇಲ್ಲ.

ಪರೀಕ್ಷಾ ಕೇಂದ್ರಗಳಲ್ಲಿ ವೈಯಕ್ತಿಕ ವಸ್ತುಗಳನ್ನು ಸಂಗ್ರಹಿಸಲು ಅವಕಾಶವಿರಬಹುದು ಅಥವಾ ಇಲ್ಲದಿರಬಹುದು. ಅದಕ್ಕಾಗಿಯೇ ಅಭ್ಯರ್ಥಿಗಳು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಸೂಕ್ತ.ಹೀಗೆ ಪರೀಕ್ಷೆಗೆ ಹಾಜರಾಗುವ ಸಮಯದಲ್ಲಿ ಯಾವ ರೀತಿಯ ಉಡುಗೆ ಧರಿಸಬೇಕು ಎಂದು ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು. ಇಲ್ಲವಾದರೆ ಪರೀಕ್ಷೆಗೆ ಕೆಲವೇ ಕ್ಷಣಗಳು ಇರುವಾಗ ಅನಗತ್ಯ ಒತ್ತಡ ಉಂಟಾಗಬಹುದು.

Whats_app_banner