ನವೋದಯ ವಿದ್ಯಾಲಯದಿಂದ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕನ್ನಡ ಸುದ್ದಿ  /  ಕರ್ನಾಟಕ  /  ನವೋದಯ ವಿದ್ಯಾಲಯದಿಂದ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ನವೋದಯ ವಿದ್ಯಾಲಯದಿಂದ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ನವೋದಯ ವಿದ್ಯಾಲಯದಿಂದ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ಏನೆಲ್ಲಾ ದಾಖಲೆಗಳು ಬೇಕು ಹಾಗೂ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ಮಾಹಿತಿ ಇಲ್ಲಿದೆ.

2025-26 ನೇ ಸಾಲಿನ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ
2025-26 ನೇ ಸಾಲಿನ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ನವೋದಯ ವಿದ್ಯಾಲಯ ಸಮಿತಿ (NVS) ಜವಹಾರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಮೀಸಲಾತಿ, ಅರ್ಹತೆ ಹಾಗೂ ಮಾನದಂಡಗಳೇನು? ಸಾಮಾನ್ಯ ವಿಶೇಷ ಹಾಗೂ ವಿಶೇಷ ಲಕ್ಷಣಗಳು ಏನೆಲ್ಲಾ ಇವೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜವಹಾರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ

ಜವಹಾರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಅರ್ಹತೆಗಳನ್ನು ನೋಡುವುದಾದರೆ ಅಭ್ಯರ್ಥಿಗಳು ಕಾರ್ಯನಿರ್ವಹಿಸುತ್ತಿರುವ ಸಂಬಂಧಿಸಿದ ಜವಾಹರ ನವೋದಯ ವಿದ್ಯಾಲಯಗಳ ಆಯಾ ಜಿಲ್ಲೆಯ ವಿಶ್ವಾಸಾರ್ಹ ನಿವಾಸಿಗಳೇ ಆಗಿರಬೇಕು. ಮತ್ತು 2024-25 ನೇ ಶೈಕ್ಷಣಿಕ ವರ್ಷದಲ್ಲಿ ಅದೇ ಜಿಲ್ಲೆಯ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.

ವಿದ್ಯಾರ್ಥಿಯು 3 ಮತ್ತು 4ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷವನ್ನು ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಪೂರ್ಣಾವಧಿ ಶಾಲಾ ಶಿಕ್ಷಣ ಪಡೆದು ತೇರ್ಗಡೆ ಹೊಂದಿರಬೇಕು. 1.05.2013 ರಿಂದ 31.07.2015ರ ಮಧ್ಯ ಜನಿಸಿದವರಾಗಿರಬೇಕು (ಎರಡೂ ದಿನಗಳು ಸೇರಿ)

ಜವಹಾರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ಮೀಸಲಾತಿ

  • ಜಿಲ್ಲೆಯಲ್ಲಿ ಕನಿಷ್ಠ ಶೇಕಡಾ 75 ರಷ್ಟು ಸ್ಥಾನಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ತುಂಬಲಾಗುತ್ತದೆ
  • ಕೇಂದ್ರ ಸರ್ಕಾರದ ನಿಯಮದನ್ವಯ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ದಿವ್ಯಾಂಗದವರಿಗೆ ಕಾಯ್ದಿರಿಸಲಾಗಿದೆ
  • ಕನಿಷ್ಠ 3ನೇ 1 ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿರುತ್ತವೆ.

ಇತರೆ ಪ್ರಮುಖ ಅಂಶಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16.09.2024
  • ಆಯ್ಕೆ ಪರೀಕ್ಷೆಯ ದಿನಾಂಕ 18.01.2025
  • ಚಳಿಗಾಲದ ಬದ್ಧ ಜ.ನ.ವಿ.ಗಳು 24.04.2025

ಸಾಮಾನ್ಯ ವಿಶೇಷ ಲಕ್ಷಣಗಳು

  • ಪ್ರತಿಯೊಂದು ಜಿಲ್ಲೆಯಲ್ಲಿ ಸಹಶಿಕ್ಷಣ ವಸತಿ ಶಾಲೆಗಳು
  • ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು
  • ಉಚಿತ ಶಿಕ್ಷಣ, ಊಟ ಮತ್ತು ವಸತಿ ಸೌಲಭ್ಯ
  • ವಲಸೆ ನೀತಿಯ ಮುಖಾಂತರ ವಿಶಾಲ ಸಾಂಸ್ಕೃತಿಕ ವಿನಿಮಯ
  • ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ
  • ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್

ವಿಶೇಷ ಲಕ್ಷಣಗಳು

ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಮಹತ್ವ ಕೊಟ್ಟಿರುವುದರ ಪರಿಣಾಮಕಾರಿಯಾಗಿ

  • ಜೆಇಇ ಮೇನ್ 2024, 12,071 ವಿದ್ಯಾರ್ಥಿಗಳ ಪೈಕಿ 4,352 (36.5 ರಷ್ಟು) ಮಂದಿ ಅರ್ಹತೆ ಪಡೆದಿದ್ದಾರೆ
  • ಜೆಇಇ ಅಡ್ವಾನ್ಸ್ 2023, 3,796 ವಿದ್ಯಾರ್ಥಿಗಳ ಪೈಕಿ 1,228 (32.3 ರಷ್ಟು) ಮಂದಿ ಅರ್ಹತೆ ಪಡೆದಿದ್ದಾರೆ
  • ಎನ್‌ಇಇಟಿ 2024, 24259 ವಿದ್ಯಾರ್ಥಿಗಳ ಪೈಕಿ 19,183 (81.8 ರಷ್ಟು) ಮಂದಿ ಅರ್ಹತೆ ಪಡೆದಿದ್ದಾರೆ
  • 2023-24ನೇ ಸಾಲಿನಲ್ಲಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ
  • 2023-24ನೇ ಸಾಲಿನಲ್ಲಿ 10ನೇ ತರಗತಿಯ ಶೇಕಡಾ 99.09 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
  • 2023-24ನೇ ಸಾಲಿನಲ್ಲಿ 12 ನೇ ತರಗತಿಯ ಶೇಕಡಾ 98.90 ರಷ್ಟು ವಿದ್ಯಾರ್ಥಿಗಳು ತೇರ್ಗಡೆ

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ನವೋದಯ ವಿದ್ಯಾಲಯದ ಅಧಿಕೃತ ವೆಬ್‌ಸೈಟ್ https://navodaya.gov.in ಗೆ ಭೇಟಿ ನೀಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner