ಕನ್ನಡ ಸುದ್ದಿ  /  Karnataka  /  Education News Karnataka 1st Puc Result 2024 Date Time Where And How To Check Explained Uks

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ; ರಿಸಲ್ಟ್ ನೋಡುವುದು ಎಲ್ಲಿ, ಹೇಗೆ, ಇಲ್ಲಿದೆ ವಿವರ

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ (Karnataka 1st PUC Result) ಇಂದು (ಮಾರ್ಚ್ 30) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ (KSEAB)ಯ ಫಲಿತಾಂಶದ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಪ್ರಥಮ ಪಿಯುಸಿ ಪರೀಕ್ಷೆ ಬರೆದವರು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಅನುಸರಿಸಬೇಕಾದ ಹಂತಗಳ ವಿವರ ಇಲ್ಲಿದೆ.

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ
ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ (KSEAB) ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ 2024 (Karnataka 1st PUC Result 2024)ವನ್ನು ಇಂದು (ಮಾರ್ಚ್ 30) ಪ್ರಕಟಿಸುವ ಸಾಧ್ಯತೆ ಇದೆ. ಪ್ರಥಮ ಪಿಯುಸಿ ಪರೀಕ್ಷೆ ಬರೆದವರು ತಮ್ಮ ಫಲಿತಾಂಶವನ್ನು karresults.nic.in ಎಂಬ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಪ್ರಥಮ ಪಿಯುಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬೇಕಾದರೆ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಕರ್ನಾಟಕ ಪ್ರಥಮ ಪಿಯು ಪರೀಕ್ಷೆಯು ಫೆಬ್ರವರಿ 12 ಮತ್ತು ಫೆಬ್ರವರಿ 27 ರ ನಡುವೆ ನಡೆಯಿತು. ಪ್ರಥಮ ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಏಕಕಾಲಕ್ಕೆ ಪರೀಕ್ಷೆಗಳನ್ನು ಎದುರಿಸಿದ್ದರು. ಈ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನವೂ ಮುಗಿದಿದ್ದು, ಫಲಿತಾಂಶ ಇಂದು ಪ್ರಕಟವಾಗುತ್ತಿದೆ.

ಮೊಬೈಲ್‌ ಮೂಲಕ ಇಲ್ಲವೇ ಇಂಟರ್‌ನೆಟ್‌ ಸೆಂಟರ್‌, ಸೈಬರ್ ಕೆಫೆ ಇಲ್ಲವೇ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಪ್ರಥಮ ಪಿಯು ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಲು ಅವಕಾಶವಿದೆ. ಇಂದು ಕಾಲೇಜುಗಳಲ್ಲೂ ಫಲಿತಾಂಶವನ್ನು ಪ್ರಕಟವಾಗುತ್ತದೆ. ಆದ್ದರಿಂದ ಕಾಲೇಜುಗಳಲ್ಲಿಯೂ ಫಲಿತಾಂಶಗಳನ್ನು ವಿದ್ಯಾರ್ಥಿಗಳು ವೀಕ್ಷಿಸಬಹುದು ಒಮ್ಮೆ ಫಲಿತಾಂಶ ಬಿಡುಗಡೆಯಾದ ನಂತರ, ಈ ಹಂತಗಳನ್ನು ಅನುಸರಿಸುವ ಮೂಲಕ ಅಭ್ಯರ್ಥಿಗಳು ಅದನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ 2024; ಪರಿಶೀಲಿಸುವುದು ಹೀಗೆ

1. ಪ್ರಥಮ ಪಿಯುಸಿ ಪರೀಕ್ಷೆ ಬರೆದವರು ಮೊದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿಯ ಅಧಿಕೃತ ಫಲಿತಾಂಶ ವೆಬ್‌ಸೈಟ್‌ karresults.nic.in ಗೆ ಹೋಗಬೇಕು.

2. ಕರ್ನಾಟಕ ಫಲಿತಾಂಶಗಳ ವೆಬ್‌ಸೈಟ್‌ನ ಹೋಮ್‌ಪೇಜ್‌ನಲ್ಲಿ ಕರ್ನಾಟಕ ಪ್ರಥಮ ಪಿಯುಸಿ ಫಲಿತಾಂಶ (Karnataka 1st PUC result)ದ ಲಿಂಕ್ ಕ್ಲಿಕ್ ಮಾಡಬೇಕು.

3. ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ರಿಜಿಸ್ಟರ್ ನಂಬರ್/ ರೋಲ್ ನಂಬರ್ ಕೇಳುತ್ತದೆ. ಅದನ್ನು ಟೈಪ್ ಮಾಡಿ, ಸಬ್‌ಮಿಟ್‌ ಬಟನ್ ಕ್ಲಿಕ್ ಮಾಡಿದರೆ ಸಾಕು.

4. ಸ್ಕ್ರೀನ್ ಮೇಲೆ ಫಲಿತಾಂಶ ಕಾಣಿಸಿಕೊಳ್ಳುತ್ತದೆ.

5. ಅದನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡಿಟ್ಟುಕೊಳ್ಳಬಹುದು. ಪ್ರಿಂಟ್ ಔಟ್ ತೆಗೆದಿಟ್ಟುಕೊಂಡರೆ ಭವಿಷ್ಯದ ಅಗತ್ಯಗಳಿಗೆ ಬಳಸಬಹುದು.

ಕರ್ನಾಟಕ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ದಿನಾಂಕ, ವೇಳಾಪಟ್ಟಿ ಪ್ರಕಟ

ಕರ್ನಾಟಕ ಪ್ರಥಮ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ ಬಿಡುಗಡೆ ಮಾಡಿದೆ. ಮಾರ್ಚ್ 25ರಂದು ಈ ಪಟ್ಟಿ ಬಿಡುಗಡೆಯಾಗಿದ್ದು, 11 ನೇ ತರಗತಿಗೆ ಪೂರಕ ಪರೀಕ್ಷೆಗಳನ್ನು ಮೇ 20 ರಿಂದ ಮೇ 31, 2024 ರವರೆಗೆ ನಡೆಯಲಿದೆ. ಪ್ರಥಮ ಪಿಯುಸಿ (1st PUC) ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಭ್ಯರ್ಥಿಗಳು ಮಾತ್ರ ಪೂರಕ ಪರೀಕ್ಷೆಗಳಿಗೆ ಹಾಜರಾಗಬಹುದು.

ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಏಪ್ರಿಲ್ 20, 2024 ರೊಳಗೆ ಪರೀಕ್ಷಾ ಶುಲ್ಕವನ್ನು ಸಲ್ಲಿಸಬೇಕು. ಕರ್ನಾಟಕ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಪಾಳಿಗಳಲ್ಲಿ ನಡೆಯಲಿದೆ. ಬೆಳಗಿನ ಪಾಳಿಯು 10:15 AM ಮತ್ತು 1:30 PM ನಡುವೆ, ಮಧ್ಯಾಹ್ನದ ಪಾಳಿಯ ಪರೀಕ್ಷೆಯು 2:15 PM ಮತ್ತು 4:30 PM ನಡುವೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ, ಕೆಎಸ್‌ಇಎಬಿಯ ಅಧಿಕೃತ ವೆಬ್‌ಸೈಟ್‌ ಗಮನಿಸಬಹುದು.