ದ್ವಿತೀಯ ಪಿಯು ಪರೀಕ್ಷೆ 1 ರ 26 ವಿಷಯಗಳ ಮಾದರಿ ಉತ್ತರ ಪ್ರಕಟ; ಆಕ್ಷೇಪಣೆ ಸಲ್ಲಿಕೆಗೆ ಇಂದೇ ಕೊನೆ ದಿನ
ಕರ್ನಾಟಕದ ದ್ವಿತೀಯ ಪಿಯು ಪರೀಕ್ಷೆ 1ರ 26 ವಿಷಯಗಳ ಮಾದರಿ ಉತ್ತರ ಪ್ರಕಟವಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ ಇಂದು ಸಂಜೆ 5ಗಂಟೆ ತನಕ ಕಾಲಾವಕಾಶ ಇದೆ. ಯಾವ್ಯಾವ ವಿಷಯಗಳ ಮಾದರಿ ಉತ್ತರ, ಆಕ್ಷೇಪಣೆ ಸಲ್ಲಿಕೆ ಲಿಂಕ್ ಮತ್ತು ಇತರೆ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದ ದ್ವಿತೀಯ ಪಿಯು ಪರೀಕ್ಷೆ 1 ರ (II PU Examination-1 March-2024) 26 ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರ (Scheme of Evaluation) ಪ್ರಕಟವಾಗಿದೆ. ಆಕ್ಷೇಪಣೆ ಸಲ್ಲಿಸಲು ಇಂದು (ಮಾರ್ಚ್ 21) ಕೊನೇ ದಿನವಾಗಿದ್ದು, ಸಂಜೆ 5 ಗಂಟೆ ತನಕ ಕಾಲಾವಕಾಶ ಒದಗಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಹೇಳಿದೆ.
ಮಂಡಲಿಯ ವೆಬ್‌ಸೈಟ್‌ನಲ್ಲಿ 26 ವಿಷಯಗಳ ಮಾದರಿ ಉತ್ತರಗಳ ಪಿಡಿಎಫ್ ಇದ್ದು ಅದನ್ನು ಡೌನ್‌ಲೋಡ್ ಮಾಡಿಕೊಂಡು ತಾವು ಬರೆದ ಉತ್ತರಗಳೊಂದಿಗೆ ಪರಿಶೀಲಿಸಿಕೊಳ್ಳಬಹುದು. ಇದಾಗಿ, ಆಕ್ಷೇಪಣೆಗಳು ಇದ್ದರೆ ಅದನ್ನು ಇಂದು (ಮಾರ್ಚ್ 21) ಸಂಜೆ 5 ಗಂಟೆಯ ಒಳಗೆ ಆನ್‌ಲೈನ್ ಮೂಲಕ ಸಲ್ಲಿಸಬೇಕು ಎಂದು ಮಂಡಲಿ ತಿಳಿಸಿದೆ.
ರಾಜ್ಯದಲ್ಲಿ ಮಾರ್ಚ್ 1ಕ್ಕೆ ದ್ವಿತೀಯ ಪಿಯು ಪರೀಕ್ಷೆ (II PU Examination-1) ಶುರುವಾಗಿದೆ. ಈ ಪರೀಕಷೆ ಮಾರ್ಚ್ 22ಕ್ಕೆ ಅಂದರೆ ನಾಳೆ ಕೊನೆಗೊಳ್ಳಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸದ್ಯ ಮಾರ್ಚ್ 18 ರ ತನಕ ನಡೆದ ವಿಷಯಗಳ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಮಾತ್ರ ಪ್ರಕಟಿಸಿದೆ. ಮಾ.20ರಿಂದ 22ರವರೆಗೆ ನಡೆಯಲಿರುವ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ನಂತರ ಪ್ರಕಟಿಸಲಿದೆ.
ಆಕ್ಷೇಪಣೆ ಸಲ್ಲಿಸುವುದಕ್ಕೆ ಇರುವ ಲಿಂಕ್
ದ್ವಿತೀಯ ಪಿಯು ಪರೀಕ್ಷೆ 1 ರ (II PU Examination-1 March-2024) 26 ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರ (Scheme of Evaluation)ಗಳಿಗೆ ಸಂಬಂಧಿಸಿ ಆಕ್ಷೇಪಣೆಗಳಿದ್ದರೆ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಇಂದೇ (ಮಾರ್ಚ್ 21) ಸಂಜೆ 5 ಗಂಟೆ ಒಳಗೆ ಸಲ್ಲಿಸಬೇಕಾದ್ದರಿಂದ ಇದಕ್ಕೆ ನೇರ ಲಿಂಕ್ ಈ ಕೆಳಗಿನಂತೆ ಇದೆ.
https://dpue-exam.karnataka.gov.in/sovexam12024/REGISTRATION
ಆಕ್ಷೇಪಣೆ ಸಲ್ಲಿಸುವುದಕ್ಕೆ ಮೇಲಿನ ಲಿಂಕ್ ಓಪನ್ ಮಾಡಿದಾಗ ಅಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ದಾಖಲಿಸಿ, ಆಕ್ಷೇಪಣೆಯ ವಿವರಗಳನ್ನು ಸಲ್ಲಿಸಬಹುದಾಗಿದೆ.
ದ್ವಿತೀಯ ಪಿಯು ಪರೀಕ್ಷೆ 1 ರ 26 ವಿಷಯಗಳ ಮಾದರಿ ಉತ್ತರ
ದ್ವಿತೀಯ ಪಿಯು ಪರೀಕ್ಷೆ 1 ರ (II PU Examination-1 March-2024) 26 ವಿಷಯಗಳ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರ (Scheme of Evaluation)ಗಳ ನೇರ ಲಿಂಕ್ ಇಲ್ಲಿದೆ.
https://dpue-exam.karnataka.gov.in/sovexam12024/frmSOV
ಈ ನೇರ ಲಿಂಕ್‌ನಲ್ಲಿ, ಕನ್ನಡ -01, ಇಂಗ್ಲಿಷ್ -02, ಅರೇಬಿಕ್ -11, ಕನ್ನಡ -ಆಪ್ಶನ್ -16, ಇತಿಹಾಸ -21, ಎಕನಾಮಿಕ್ಸ್ 22, ಲಾಜಿಕ್ 23, ಭೂಗರ್ಭಶಾಸ್ತ್ರ 24, ಮ್ಯೂಸಿಕ್ ಹಿಂದೂಸ್ತಾನಿ 26, ಬಿಜಿನೆಸ್ ಸ್ಟಡೀಸ್ 27, ರಾಜಕೀಯ ವಿಜ್ಞಾನ 29, ಅಕೌಂಟೆನ್ಸಿ 30, ಸ್ಟಾಟಿಸ್ಟಿಕ್ಸ್ 31, ಸೈಕಾಲಜಿ 32, ಫಿಸಿಕ್ಸ್ 33, ಕೆಮಿಸ್ಟ್ರಿ 34, ಗಣಿತ 35, ಬಯಾಲಜಿ 36, ಜಿಯಾಲಜಿ 37, ಶಿಕ್ಷಣ 52, ಐಟಿ 61, ರಿಟೇಲ್ 62, ಆಟೋಮೊಬೈಲ್ 63, ಬ್ಯೂಟಿ ಆಂಡ್ ವೆಲ್‌ನೆಸ್ 65, ಹೋಮ್ ಸೈನ್ಸ್ 67, ಮೂಲ ಗಣಿತ 75 ವಿಷಯಗಳ ಮಾದರಿ ಉತ್ತರಗಳ ವಿವರ ಇದೆ.
(This copy first appeared in Hindustan Times Kannada website. To read more like this please logon to kannada.hindustantimes.com)
