ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಪ್ರಕಟ, ಏ 29 ರಿಂದ ಮೇ 16ರ ತನಕ ಎಕ್ಸಾಂ
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ2024-2ರ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಏ 29 ರಿಂದ ಮೇ 16ರ ತನಕ ಎಕ್ಸಾಂ ನಡೆಯಲಿದೆ. ಏಪ್ರಿಲ್ 29 ರಿಂದ ಮೇ 15ರ ತನಕವೂ ಬೆಳಗ್ಗೆಯೇ ಪರೀಕ್ಷೆ ನಡೆಯಲಿದೆ. ಮೇ 16ರಂದು ಇಡೀ ದಿನ ಪರೀಕ್ಷೆ ಇದ್ದು, ಬೆಳಗ್ಗೆ ಒಂದು ಪಾಳಿ, ಮಧ್ಯಾಹ್ನ ನಂತರ ಒಂದು ಪಾಳಿಯಲ್ಲಿ ಪರೀಕ್ಷೆ ನಡೆಯಲಿದೆ.
ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ -2 ರ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು (ಏಪ್ರಿಲ್ 10) ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲೇ ಪರೀಕ್ಷೆ -2ರ ವಿಷಯವನ್ನೂ ಪ್ರಕಟಿಸಿತ್ತು.
ವಿದ್ಯಾರ್ಥಿಗಳು ಪರೀಕ್ಷೆ 2ಕ್ಕೆ ನೋಂದಣಿಯನ್ನು ಇಂದಿನಿಂದ (ಏಪ್ರಿಲ್ 10) ಏಪ್ರಿಲ್ 16ರ ತನಕ ಮಾಡಿಸಿಕೊಳ್ಳಬಹುದು. ತಮ್ಮ ಕಾಲೇಜುಗಳ ಮೂಲಕ ಅಥವಾ ಕೆಎಸ್‌ಇಎಬಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆಗೆ ನೋಂದಣಿ ಮಾಡಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿದೆ.
ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಸುಧಾರಣೆ ಬಯಸುವ ವಿದ್ಯಾರ್ಥಿಗಳು ಪರೀಕ್ಷೆ -2 ಬರೆಯಬಹುದು. ಪರೀಕ್ಷೆ -1ರ ಫಲಿತಾಂಶವನ್ನು ನೋಡುವುದಕ್ಕಾಗಿ ವಿದ್ಯಾರ್ಥಿಗಳು https://karresults.nic.in ವೆಬ್‌ಸೈಟ್ ಗಮನಿಸಬಹುದು.
ದ್ವಿತೀಯ ಪಿಯುಸಿ ಪರೀಕ್ಷೆ -2ರ ಅಂತಿಮ ವೇಳಾಪಟ್ಟಿ
ಏಪ್ರಿಲ್ / ಮೇ 2024ರ ದ್ವಿತೀಯ ಪಿಯುಸಿ ಪರೀಕ್ಷೆ -2ರ ಅಂತಿಮ ವೇಳಾಪಟ್ಟಿ
ದಿನಾಂಕ | ವಿಷಯ | ಸಮಯ |
ಏಪ್ರಿಲ್ 29 (ಸೋಮವಾರ) | ಕನ್ನಡ / ಅರೇಬಿಕ್ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಏಪ್ರಿಲ್ 30 (ಮಂಗಳವಾರ) | ಇತಿಹಾಸ/ ಭೌತಶಾಸ್ತ್ರ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 2 (ಗುರುವಾರ) | ಇಂಗ್ಲಿಷ್ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 3 (ಶುಕ್ರವಾರ) | ರಾಜ್ಯ ಶಾಸ್ತ್ರ/ ಸಂಖ್ಯಾ ಶಾಸ್ತ್ರ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 4 (ಶನಿವಾರ) | ಭೂಗೋಳ ಶಾಸ್ತ್ರ/ ಮನಃ ಶಾಸ್ತ್ರ / ರಸಾಯನ ಶಾಸ್ತ್ರ/ ಗೃಹ ವಿಜ್ಞಾನ/ ಮೂಲಗಣಿತ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 9 (ಗುರುವಾರ ) | ತರ್ಕ ಶಾಸ್ತ್ರ/ ವ್ಯವಹಾರ ಅಧ್ಯಯನ / ಗಣಿತ/ ಶಿಕ್ಷಣ ಶಾಸ್ತ್ರ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 11 (ಶನಿವಾರ) | ಸಮಾಜ ಶಾಸ್ತ್ರ/ ಜೀವಶಾಸ್ತ್ರ/ ಭೂಗರ್ಭ ಶಾಸ್ತ್ರ/ ವಿದ್ಯುನ್ಮಾನ ಶಾಸ್ತ್ರ/ ಗಣಕ ವಿಜ್ಞಾನ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 13 (ಸೋಮವಾರ) | ಅರ್ಥ ಶಾಸ್ತ್ರ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 14 (ಮಂಗಳವಾರ) | ಐಚ್ಛಿಕ ಕನ್ನಡ / ಲೆಕ್ಕ ಶಾಸ್ತ್ರ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 15 ( ಬುಧವಾರ) | ಹಿಂದಿ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೆ 16 (ಗುರುವಾರ) ಬೆಳಗ್ಗೆ | ತಮಿಳು/ತೆಲುಗು/ಮಲಯಾಳಂ/ ಮರಾಠಿ/ ಉರ್ದು/ ಸಂಸ್ಕೃತ/ ಫ್ರೆಂಚ್ | ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 |
ಮೇ 16 (ಗುರುವಾರ) ಮಧ್ಯಾಹ್ನ ನಂತರ | ಹಿಂದೂಸ್ತಾನಿ ಸಂಗೀತ/ ಮಾಹಿತಿ ತಂತ್ರಜ್ಞಾನ / ರಿಟೇಲ್/ ಆಟೋಮೊಬೈಲ್ / ಬ್ಯೂಟಿ ಆಂಡ್ ವೆಲ್‌ನೆಸ್ | ಮಧ್ಯಾಹ್ನ ನಂತರ 2.15ರಿಂದ ಸಂಜೆ 4.30 |
ದ್ವಿತೀಯ ಪಿಯುಸಿ ಪರೀಕ್ಷೆ -2 ಗಮನಿಸಬೇಕಾದ ಅಂಶ
ದ್ವಿತೀಯ ಪಿಯಿಸಿ ಪರೀಕ್ಷೆ-2 ವೇಳಾಪಟ್ಟಿ ಪ್ರಕಟವಾಗಿದ್ದು, ಇದನ್ನು ಬರೆಯುವುದಕ್ಕೆ ಬೇಕಾದ ಅರ್ಹತೆ ಹೀಗಿದೆ. 2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2024 ರ ದ್ವಿತೀಯ ಪಿಯುಸಿ ಪರೀಕ್ಷೆ- 2ರ ಪರೀಕ್ಷೆಯನ್ನು ತೆಗೆದುಕೊಳ್ಳಲು, ಮಂಡಲಿಯು ಒದಗಿಸಿದ ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಶುಲ್ಕವನ್ನು ಭರಿಸಿಕೊಳ್ಳಬಹುದು.
ಅದೇ ರೀತಿ, ಪ್ರಾಂಶುಪಾಲರು 2022ನೇ ಸಾಲಿನ ಅಥವಾ ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2024ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ಅರ್ಜಿಯನ್ನು 'ಎಂಸಿಎ' ಆಧಾರದ ಮೇಲೆ ಮಾತ್ರ ಸ್ವೀಕರಿಸಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ಮಾಪನ ಮಂಡಳಿ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.