ಕನ್ನಡ ಸುದ್ದಿ  /  ಕರ್ನಾಟಕ  /  Puc Result Helpline: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಗೊಂದಲ, ಸಂದೇಹಗಳಿದ್ದರೆ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

PUC Result Helpline: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಗೊಂದಲ, ಸಂದೇಹಗಳಿದ್ದರೆ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

Karnataka 2nd PUC Result Helpline Numbers: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದ ಕುರಿತು ಸಂದೇಹ, ಗೊಂದಲ ಅಥವಾ ಹೆಚ್ಚಿನ ವಿವರ ಪಡೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಹಾಯವಾಣಿ ಸಂಖ್ಯೆ 080- 23310075 ಅಥವಾ 080- 23310076 ಸಂಖ್ಯೆಯನ್ನು ಸಂಪರ್ಕಿಸಬಹುದು.

PUC Result Helpline: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಸಹಾಯವಾಣಿ ಸಂಖ್ಯೆ
PUC Result Helpline: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಸಹಾಯವಾಣಿ ಸಂಖ್ಯೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದೆ. ಈ ಫಲಿತಾಂಶದ ಕುರಿತು ಅಥವಾ ಮರು ಪರೀಕ್ಷೆ ಇತ್ಯಾದಿ ವಿಷಯಗಳ ಕುರಿತು ಸಂದೇಹಗಳಿದ್ದರೆ ವಿದ್ಯಾರ್ಥಿಗಳು/ ಪೋಷಕರು ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಪರೀಕ್ಷೆ ಫಲಿತಾಂಶ, ಫಲಿತಾಂಶ ಉತ್ತಮಪಡಿಸಿಕೊಳ್ಳಲು ಮರುಪರೀಕ್ಷೆ, ಒಂದೊಂದು ವಿಷಯಕ್ಕೆ ಪಾವತಿಸಬೇಕಾದ ಶುಲ್ಕಗಳು ಸೇರಿದಂತೆ ಹೆಚ್ಚಿನ ವಿವರವನ್ನು ಪಡೆಯಲು ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು.

ಟ್ರೆಂಡಿಂಗ್​ ಸುದ್ದಿ

ಸಹಾಯವಾಣಿ ಸಂಖ್ಯೆ ಸಂಪರ್ಕಿಸಿ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸಹಾಯವಾಣಿ ಸಂಖ್ಯೆ 080- 23310075 ಅಥವಾ 080- 23310076

ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಣೆ ಹೇಗೆ?

ಪದವಿ ಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಪಿಯುಸಿ ಫಲಿತಾಂಶ ಪ್ರಕಟಿಸಿದೆ. ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಮೂಲಕ ಫಲಿತಾಂಶ ವೀಕ್ಷಿಸಬಹುದು. ವೆಬ್‌ ಸೈಟ್‌ ವಿಳಾಸ: karresults.nic.in ಮತ್ತು pue.kar.nic.in

ಪಿಯುಸಿ ಫಲಿತಾಂಶ

ಈ ವರ್ಷ 5,52,690 ವಿದ್ಯಾರ್ಥಿಗಳು ಪಾಸ್‌ ಆದ ಖುಷಿಯಲ್ಲಿದ್ದಾರೆ. ಉತ್ತೀರ್ಣ ಪ್ರಮಾಣ ಶೇಕಡ 81.15 ರಷ್ಟಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಶೇ 81.10ರಷ್ಟು ಸಾಧನೆ ಮಾಡಿದ್ದಾರೆ. ಗ್ರಾಮಾಂತರದ ವಿದ್ಯಾರ್ಥಿಗಳು ಶೇಕಡ ಶೇ 81.31 ಫಲಿತಾಂಶ ತಂದುಕೊಟ್ಟಿದ್ದಾರೆ. 3.3 ಲಕ್ಷ ವಿದ್ಯಾರ್ಥಿಗಳು ಮತ್ತು 3.6 ಲಕ್ಷ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು.

ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಯಾದಗಿರಿ (72.86%) ಕೊನೆಯ ಸ್ಥಾನ ಪಡೆದಿದೆ.

ಜಿಲ್ಲಾವಾರು ಸಾಧನೆ ಹೇಗಿದೆ?

ದಕ್ಷಿಣ ಕನ್ನಡ ಈ ಬಾರಿ ಶೇಕಡ 97.37ರಷ್ಟು ಫಲಿತಾಂಶ ದಾಖಲಿಸಿದೆ. ಉಡುಪಿ ಜಿಲ್ಲೆಯು ಶೇಕಡ 96.80ರಷ್ಟು ಫಲಿತಾಂಶ ಪಡೆದಿದೆ. ವಿಜಯಪುರವು ಈ ಬಾರಿ ಶೇಕಡ 94.89ರಷ್ಟು ಫಲಿತಾಂಶ ತನ್ನದಾಗಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯು ಈ ಬಾರಿ ಶೇಕಡ 92.51ರಷ್ಟು ಫಲಿತಾಂಶ ತನ್ನದಾಗಿಸಿದೆ. ಕೊಡಗು ಜಿಲ್ಲೆಯು ಈ ಬಾರಿ ಶೇಕಡ 92.13 ರಿಸಲ್ಟ್‌ ಪಡೆದಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ , ಶಿವಮೊಗ್ಗ ಜಿಲ್ಲೆ , ಚಿಕ್ಕಮಗಳೂರು ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗಲಕೋಟೆ ಜಿಲ್ಲೆ, ಕೋಲಾರ ಸೇರಿದಂತೆ 32 ಜಿಲ್ಲೆಗಳ ಜಿಲ್ಲಾವಾರು ಶೇಕಡವಾರು ಫಲಿತಾಂಶ ಮಾಹಿತಿ ಪಡೆಯಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಪಿಯುಸಿ ಫಲಿತಾಂಶ ಬಂತು, ಮುಂದೇನು?

ದ್ವಿತೀಯ ಪಿಯುಸಿ ಫಲಿತಾಂಶದ ಸಮಯದಲ್ಲಿ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳು ಮತ್ತು ಹೆತ್ತವರಲ್ಲಿ ಇರಬಹುದು. ಇಂತಹ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಡಿಪ್ಲೊಮಾ ಕೋರ್ಸ್‌ ಮಾಡಿ ಶೀಘ್ರದಲ್ಲಿ ಉದ್ಯೋಗ ಪಡೆಯಲು ಬಯಸಬಹುದು. 12ನೇ ತರಗತಿ ಮುಗಿದ ಬಳಿಕ ಮಾಡಬಹುದಾದ 10 ಡಿಪ್ಲೊಮಾ ಕೋರ್ಸ್‌ಗಳ ವಿವರ ಇಲ್ಲಿ ನೀಡಲಾಗಿದೆ.

IPL_Entry_Point