ಕರ್ನಾಟಕ ನೀಟ್ ಯುಜಿ 2023 ಕೌನ್ಸೆಲಿಂಗ್, ಮಾಪ್ ಅಪ್ ಸುತ್ತಿನ ನಂತರದ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ
ಕರ್ನಾಟಕ ನೀಟ್ ಯುಜಿ 2023 ಕೌನ್ಸೆಲಿಂಗ್ ಪ್ರಗತಿಯಲ್ಲಿದ್ದು, ಸೆ.22ರಂದು ಮಾಪ್ ಅಪ್ ರೌಂಡ್‌ನ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿರುವ ವಿವರ ಹೀಗಿದೆ.

ಕರ್ನಾಟಕ ನೀಟ್ ಯುಜಿ 2023 (Karnataka NEET UG 2023) ಕೌನ್ಸೆಲಿಂಗ್ ಮಾಪ್ ಅಪ್ ರೌಂಡ್‌ನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority) ಪ್ರಕಟಿಸಿದೆ. ಈ ವೇಳಾಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ನಲ್ಲಿ ಗಮನಿಸಬಹುದು.
ಟ್ರೆಂಡಿಂಗ್ ಸುದ್ದಿ
ಈ ಅಧಿಕೃತ ವೇಳಾಪಟ್ಟಿಯಲ್ಲಿರುವ ಮಾಹಿತಿ ಪ್ರಕಾರ, ಚಲನ್ ಡೌನ್‌ಲೋಡ್ ಮಾಡುವುದು ಮತ್ತು ಸೀಟು ನಿಗದಿಪಡಿಸಿದ ಅಭ್ಯರ್ಥಿಗಳ ಶುಲ್ಕವನ್ನು ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 26 ರವರೆಗೆ ಮಾಡಬಹುದು. ಮೂಲ ದಾಖಲೆಗಳ ಠೇವಣಿ ಸೆಪ್ಟೆಂಬರ್ 25 - ಸೆಪ್ಟೆಂಬರ್ 26 ರವರೆಗೆ ಮಾಡಬಹುದು.
ಇದನ್ನೂ ಓದಿ| ಎಸ್‌ಎಸ್‌ಎಲ್‌ಸಿ ನಂತರ ಮಾಡಬಹುದಾದ ಬೆಸ್ಟ್ ಡಿಪ್ಲೊಮಾ ಕೋರ್ಸ್‌ಗಳ ವಿವರ ಹೀಗಿದೆ
ಅಭ್ಯರ್ಥಿಗಳು ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 27 ರವರೆಗೆ ಪಾವತಿಸಿದ ನಂತರ ಮತ್ತು ಮೂಲ ದಾಖಲೆಗಳ ಠೇವಣಿ ನಂತರ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಬಹುದು. ಪರಿಶೀಲನಾ ಸ್ಲಿಪ್‌ನ ಪ್ರಕಾರ, ಸೆಪ್ಟೆಂಬರ್ 27 ರ ಸಂಜೆ 5.30 ರ ಮೊದಲು ಒಂದು ಸೆಟ್ ದೃಢೀಕರಿಸಿದ ಫೋಟೊಕಾಪಿಗಳ ಜತೆಗೆ ನಿಗದಿಪಡಿಸಿದ ವೈದ್ಯಕೀಯ/ದಂತ ಕಾಲೇಜಿನಲ್ಲಿ ವರದಿ ಮಾಡಬೇಕು.
ಇದನ್ನೂ ಓದಿ| ಬೆಂಗಳೂರಿನ ವಿವಿಧೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ, ಎಲ್ಲೆಲ್ಲಿ ಎಷ್ಟು ಹೊತ್ತಿಗೆ; ಹೀಗಿದೆ ವಿವರ
ಮಾಪ್ ಅಪ್ ರೌಂಡ್ ಸೀಟ್ ಅಲಾಟ್‌ಮೆಂಟ್ ರಿಸಲ್ಟ್ ಅನ್ನು ಸೆಪ್ಟೆಂಬರ್ 22 ರಂದು ಬಿಡುಗಡೆ ಮಾಡಲಾಗಿದೆ. ಸೀಟು ಹಂಚಿಕೆ ಫಲಿತಾಂಶದ ಜೊತೆಗೆ, ಸೀಟು ಹಂಚಿಕೆ ಪಟ್ಟಿ ಮತ್ತು ಮಾಪ್ ಅಪ್ ಸುತ್ತಿನ ನಂತರ ಖಾಲಿ ಇರುವ ಸೀಟ್ ಪಟ್ಟಿಯನ್ನು ಸಹ ಪ್ರಾಧಿಕಾರವು ಬಿಡುಗಡೆ ಮಾಡಿದೆ. ಸೀಟು ಹಂಚಿಕೆ ಫಲಿತಾಂಶವನ್ನು ಸೆಪ್ಟೆಂಬರ್ 20 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅದು ವಿಳಂಬವಾಯಿತಾದರೂ ಸೆಪ್ಟೆಂಬರ್ 22 ರಂದು ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.