ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ 2024-25; ಮೇ 29ಕ್ಕೆ ಶಾಲಾರಂಭ, ಅ.3 ರಿಂದ ದಸರಾ ರಜೆ, ವರ್ಷದಲ್ಲಿ ಶಾಲೆಗೆಷ್ಟು ರಜೆ

ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ 2024-25; ಮೇ 29ಕ್ಕೆ ಶಾಲಾರಂಭ, ಅ.3 ರಿಂದ ದಸರಾ ರಜೆ, ವರ್ಷದಲ್ಲಿ ಶಾಲೆಗೆಷ್ಟು ರಜೆ

ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ 2024-25 ಅನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಇದರಂತೆ, ಮೇ 29 ಕ್ಕೆ ಶಾಲಾರಂಭವಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆ ಶುರುವಾಗಲಿವೆ. ಅ.3ರಿಂದ ದಸರಾ ರಜೆ ಇರಲಿದೆ. ವರ್ಷದಲ್ಲಿ ಶಾಲೆಗೆಷ್ಟು ರಜೆ ಮತ್ತು ಶೈಕ್ಷಣಿಕ ವೇಳಾಪಟ್ಟಿಯ ಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ 2024-25; ಮೇ 29ಕ್ಕೆ ಶಾಲಾರಂಭ (ಸಾಂಕೇತಿಕ ಚಿತ್ರ)
ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ 2024-25; ಮೇ 29ಕ್ಕೆ ಶಾಲಾರಂಭ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವಂತಹ 2024-2025 ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ ಮೊದಲನೇ ಅವಧಿಯು 2024ರ ಮೇ 29 ರಿಂದ ಅಕ್ಟೋಬರ್ 2 ರವರೆಗೆ, ಎರಡನೇ ಅವಧಿಯು ಅಕ್ಟೋಬರ್‌ 21ರಿಂದ 2025ರ ಏಪ್ರಿಲ್‌ 10 ರವರೆಗೆ ಇರಲಿದೆ.

ಟ್ರೆಂಡಿಂಗ್​ ಸುದ್ದಿ

ಇದರ ನಡುವೆ, ಅಕ್ಟೋಬರ್ 3 ರಿಂದ 20 ರವರೆಗೆ ದಸರಾ ರಜೆ, 2025ರ ಏಪ್ರಿಲ್ 11 ರಿಂದ ಮೇ 28ರವರೆಗೆ ಬೇಸಿಗೆ ರಜೆ ನಿಗದಿ ಮಾಡಿದೆ. 244 ಶಾಲಾ ಕರ್ತವ್ಯದ ದಿನಗಳು ಇರಲಿದ್ದು, ಇದರಲ್ಲಿ ಪರೀಕ್ಷೆ ಮೌಲ್ಯಾಂಕನ ಕಾರ್ಯಕ್ಕೆ 26 ದಿನಗಳು, ಪಠ್ಯೇತರ ಚಟುವಟಿಕೆಗೆ 24 ದಿನಗಳು, ಮೌಲ್ಯಮಾಪನ, ಫಲಿತಾಂಶ ವಿಶ್ಲೇಷಣೆಗೆ 10 ದಿನ, ಶಾಲಾ ಸ್ಥಳೀಯ ರಜೆ 4 ದಿನ, ಬೋಧನಾ ಕಲಿಕೆಗೆ 180 ದಿನಗಳು ಎಂದು ವಿಂಗಡಿಸಲಾಗಿದೆ.

ಈ ವಾರ್ಷಿಕ ಮಾರ್ಗಸೂಚಿಯಲ್ಲಿ ಮಾಸಿಕ ಪಾಠ ಹಂಚಿಕೆ, ಪತ್ಯೇತರ ಚಟುವಟಿಕೆ, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆ, ಸಂಭ್ರಮ ಶನಿವಾರ ಸೇರಿ ಇತರ ಯೋಜನೆಗಳನ್ನು ನಿರ್ವಹಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.

ಕರ್ನಾಟಕ ಶೈಕ್ಷಣಿಕ ವೇಳಾಪಟ್ಟಿ 2024- 25; ಯಾವ ತಿಂಗಳು ಎಷ್ಟು ರಜೆ

ಕರ್ನಾಟಕದಲ್ಲಿ 2024- 25ರ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಶಾಲಾ ದಿನಗಳು ಮತ್ತು ರಜಾ ದಿನಗಳು 

ಕ್ರಮ ಸಂಖ್ಯೆತಿಂಗಳು/ ವರ್ಷದಿನಗಳ ಸಂಖ್ಯೆಶಾಲಾ ದಿನಗಳುರಜಾ ದಿನಗಳು
01ಮೇ 202431328
02ಜೂನ್ 2024302406
03ಜುಲೈ 2024312605
04ಆಗಸ್ಟ್ 2024312605
05ಸೆಪ್ಟೆಂಬರ್ 2024302307
06ಅಕ್ಟೋಬರ್ 2024311120
07ನವೆಂಬರ್ 2024302307
08ಡಿಸೆಂಬರ್ 2024312506
09ಜನವರಿ 2025312605
10ಫೆಬ್ರವರಿ 2025282305
11ಮಾರ್ಚ್‌ 2025312506
12ಏಪ್ರಿಲ್ 2025302109
  365244121

ಏಪ್ರಿಲ್ 8 ಮತ್ತು 10ಕ್ಕೆ 1ರಿಂದ 9ನೇ ತರಗತಿ ಫಲಿತಾಂಶ

ಈಗಾಗಲೇ ನಡೆದಿರುವ 5, 8 ಮತ್ತು 9 ನೇ ತರಗತಿಯ ಎಸ್‌ಎ-2 ಮೌಲ್ಯಾಂಕನ ಸೇರಿ ಉಳಿದ 1 ರಿಂದ 9 ನೇ ತರಗತಿಗಳ ಫಲಿತಾಂಶವನ್ನು ನಿಯಮಾನುಸಾರ ವಿಶ್ಲೇಷಿಸಿ, ನಿಗದಿಪಡಿಸಿದಂತೆ ಏಪ್ರಿಲ್ 8 ರಂದು ಪ್ರಾಥಮಿಕ ಶಾಲಾ ಹಂತದ ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 10 ರಂದು ಪ್ರೌಢಶಾಲಾ ಹಂತದ ಎರಡನೇ ಸಮುದಾಯ ದತ್ತ ಶಾಲೆ/ ಪೋಷಕರ ಸಭೆ ಕರೆದು ಫಲಿತಾಂಶ ಪ್ರಕಟಿಸಲಾಗುತ್ತದೆ.

ಇದಾದ ಬಳಿಕ ಏಪ್ರಿಲ್ 10ಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲು 1 ರಿಂದ 9ನೇ ತರಗತಿವರೆಗೆ ಮುಕ್ತಾಯವಾಗಲಿದೆ. ಏಪ್ರಿಲ್ 11ರಿಂದ ಮೇ 28ರ ತನಕ ಬೇಸಿಗೆ ರಜೆ ಇರಲಿದೆ. ಈ ನಡುವೆ, ಪೂರ್ಣಗೊಂಡ ಮೌಲ್ಯಾಂಕನ ಪರೀಕ್ಷೆಗಳ ಮೌಲ್ಯಮಾಪನ ಫಲಿತಾಂಶವನ್ನು ಶೇ 100 ಅಂಕಗಳಿಗೆ ಕ್ರೋಢೀಕರಿಸಿ, ನಿಯಮಾನುಸಾರ ಗ್ರೇಡ್ ದಾಖಲಿಸಿ SATS ನಲ್ಲಿ ಏಪ್ರಿಲ್ 25ರೊಳಗೆ ಅಪ್ಡೇಟ್ ಮಾಡಲಾಗುತ್ತದೆ.

ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಹಾಗೂ ಎಸ್.ಡಿ.ಎಂ.ಸಿ/ ಖಾಸಗಿ ಶಾಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿಯವರು ಮತ್ತು ಮಕ್ಕಳೊಂದಿಗೆ ಉತ್ತಮ ಪೂರ್ವ ತಯಾರಿಯೊಂದಿಗೆ ಪ್ರಸ್ತುತ ಚಾಲ್ತಿ ಇರುವ ಲೋಕಸಭಾ ಚುನಾವಣಾ ಮಾರ್ಗಸೂಚಿ ಪ್ರಕಾರ ಇದನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

IPL_Entry_Point