School opening2024: ಶಾಲೆ ಆರಂಭ ಯಾವಾಗ, ಮೇ 31ಕ್ಕೆ ಕರ್ನಾಟಕದಲ್ಲಿ ಆರಂಭೋತ್ಸವ, 2 ದಿನ ಮೊದಲು ಶಾಲೆಗಳಲ್ಲಿ ಸಿದ್ದತೆ
ಕನ್ನಡ ಸುದ್ದಿ  /  ಕರ್ನಾಟಕ  /  School Opening2024: ಶಾಲೆ ಆರಂಭ ಯಾವಾಗ, ಮೇ 31ಕ್ಕೆ ಕರ್ನಾಟಕದಲ್ಲಿ ಆರಂಭೋತ್ಸವ, 2 ದಿನ ಮೊದಲು ಶಾಲೆಗಳಲ್ಲಿ ಸಿದ್ದತೆ

School opening2024: ಶಾಲೆ ಆರಂಭ ಯಾವಾಗ, ಮೇ 31ಕ್ಕೆ ಕರ್ನಾಟಕದಲ್ಲಿ ಆರಂಭೋತ್ಸವ, 2 ದಿನ ಮೊದಲು ಶಾಲೆಗಳಲ್ಲಿ ಸಿದ್ದತೆ

ಶಾಲೆಗಳ ಆರಂಭೋತ್ಸವವನ್ನು ಮೇ 31ರಂದು ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಶಾಲಾ ಆರಂಭದ ದಿನಾಂಕವನ್ನು ಪ್ರಕಟಿಸಲಾಗಿದೆ.
ಕರ್ನಾಟಕದಲ್ಲಿ ಶಾಲಾ ಆರಂಭದ ದಿನಾಂಕವನ್ನು ಪ್ರಕಟಿಸಲಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಖಾಸಗಿ ಶಾಲೆಗಳು ತರಗತಿಗಳನ್ನು ಆರಂಭಿಸಿ ಗೊಂದಲ ಸೃಷ್ಟಿಯಾಗಿರುವ ನಡುವೆಯ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವ ದಿನಾಂಕವನ್ನು ಪ್ರಕಟಿಸಿದೆ. ಮೇ 29ರಿಂದಲೇ ಶಿಕ್ಷಕರು ಶಾಲೆಗೆ ಆಗಮಿಸಬೇಕು. ಮೇ 30 ರವರೆಗೆ ಶಾಲೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಪ್ರಾರಂಭೋತ್ಸವಕ್ಕೆ ಎರಡು ದಿನ ಸಿದ್ದತೆ ಮಾಡಿಕೊಳ್ಳಬೇಕು. ಮೇ 31 ರಂದು ಶಾಲಾ ಆರಂಭೋತ್ಸವವನ್ನು ವಿಜೃಂಭಣೆಯಿಂದ ಮಾಡಬೇಕು. ಸರ್ಕಾರಿ, ಖಾಸಗಿ, ಅನುದಾನ ಹಾಗೂ ಅನುದಾನ ರಹಿತ ಶಾಲೆಗಳೆಲ್ಲಾ ಮೇ 31ರಿಂದ ಶಾಲೆಗಳನ್ನು ಆರಂಭಿಸಬೇಕು ಎನ್ನುವ ಸೂಚನೆಯನ್ನು ಈಗಾಗಲೇ ನೀಡಲಾಗಿದೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಆಯುಕ್ತರಾದ ಬಿ.ಬಿ.ಕಾವೇರಿ ಅವರು ಅಧಿಕೃತ ಆದೇಶವನ್ನು ಹೊರಡಿಸಿದ್ದು, ಶಾಲೆಗಳಲ್ಲಿ ತಯಾರಿಗೆ ಯೋಜನೆ ರೂಪಿಸಲಾಗುತ್ತಿದೆ.

ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಈಗಾಗಲೇ ಆದೇಶವನ್ನು ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ರವಾನಿಸಿ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳುತ್ತಾರೆ.

ಖಾಸಗಿ ಶಾಲೆಗಳು ಈಗಾಗಲೇ ಪ್ರವೇಶಾತಿ ನೆಪದಲ್ಲಿ ಆರಂಭಿಸಿವೆ.ಬೆಂಗಳೂರು, ಮೈಸೂರು ಸಹಿತ ಹಲವು ಕಡೆ ತರಗತಿ ನಡೆಯುತ್ತಿದ್ದು, ಇದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಏನೇನು ಸೂಚನೆ

  • ಮೇ 31ರಂದು ಪ್ರತಿ ಶಾಲೆಯನ್ನು ಅಲಂಕರಿಸಿ ವಿಜೃಂಭಣೆಯಿಂದ ಮಕ್ಕಳನ್ನು ಸ್ವಾಗತಿಸಬೇಕು
  • ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪ್ರಭಾತ್‌ ಪೇರಿಯನ್ನು ಕಡ್ಡಾಯವಾಗಿ ಆಯೋಜಿಸಬೇಕು
  • ಇದರಿಂದ ಶಾಲೆಗಳು ಆರಂಭವಾಗಿವೆ ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎನ್ನುವ ಜಾಗೃತಿ ಮೂಡಲಿದೆ
  • ಇದಕ್ಕೂ ಎರಡು ದಿನ ಅಂದರೆ ಮೇ 29, 30ರಂದು ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಬರಬೇಕು
  • ಶಾಲಾ ಆರಂಭೋತ್ಸವಕ್ಕೆ ಶಿಕ್ಷಕರು ತಯಾರಿಯನ್ನು ಮಾಡಿಕೊಳ್ಳಬೇಕು. ತಳಿರು ತೋರಣಗಳನ್ನು ಶಾಲೆಗಳಲ್ಲಿ ಕಟ್ಟಿಸಬೇಕು.
  • ಈಗಾಗಲೇ ಶಾಲೆಗೆ ಬಂದಿರುವ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಮೊದಲನೇ ದಿನವೇ ವಿತರಿಸಬೇಕು
  • ಮಕ್ಕಳು ಇದರಿಂದ ಶಾಲೆಗೆ ಬರಲು ಸಹಕಾರಿಯಾಗಲಿದೆ
  • ಅಂದು ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಕರೆಯಿಸಿ ಅವರಿಂದಲೇ ಪುಸ್ತಕ, ಸಮವಸ್ತ್ರ ವಿತರಿಸಬೇಕು

ಇದನ್ನೂ ಓದಿರಿ: National Brothers Day: ರಾಷ್ಟ್ರೀಯ ಸಹೋದರರ ದಿನದ ಮಹತ್ವವೇನು? ಈ ದಿನ ಅಣ್ಣ-ತಮ್ಮನಿಗೆ ಹೇಗೆಲ್ಲಾ ವಿಶ್‌ ಮಾಡಬಹುದು? ಇಲ್ಲಿದೆ ಐಡಿಯಾ

  • ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಜನ ಪ್ರತಿನಿಧಿಗಳನ್ನು ಆಹ್ವಾನಿಸುವುದು ಬೇಡ
  • ಮಧ್ಯಾಹ್ನಕ್ಕೆ ಬಿಸಿಯೂಟದ ವ್ಯವಸ್ಥೆಯನ್ನು ಶಾಲೆಗಳಲ್ಲಿಯೇ ಮಾಡಬೇಕು
  • ಮೊದಲ ದಿನ ಬಿಸಿಯೂಟದೊಂದಿಗೆ ಮಕ್ಕಳಿಗೆ ಸಿಹಿಯನ್ನೂ ವಿತರಣೆ ಮಾಡಬೇಕು
  • ಒಂದರಿಂದ ಹತ್ತನೇ ತರಗತಿಗಳ ಎಲ್ಲಾ ಶಾಲೆಗಳಿಗೂ ಇದು ಅನ್ವಯಿಸಲಿದೆ
  • ಸರ್ಕಾರಿ ಶಾಲೆ, ಪ್ರೌಢಶಾಲೆಗಳಲ್ಲದೇ ಖಾಸಗಿ ಶಾಲೆಗಳೂ ಮೇ 28ರವರೆಗೆ ರಜೆಯಿರಲಿದ್ದು, ಮರು ದಿನ ಆರಂಭವಾಗುತ್ತವೆ. ಮಕ್ಕಳಿಗೆ ಮಾತ್ರ ಮೇ 31 ಆರಂಭದ ದಿನ.

( ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)\

Whats_app_banner