Karnataka SSLC Exam 3: ಎಸ್‌ಎಸ್‌ಎಲ್‌ಸಿ3 ಪರೀಕ್ಷೆ ಆಗಸ್ಟ್ 2ರಿಂದ 9ರವರೆಗೆ ನಿಗದಿ, ನೋಂದಾಯಿಸಿಕೊಳ್ಳುವುದು ಹೇಗೆ?
Education News ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ(Karnataka School Examination and Assessment Board) ಯು ಎಸ್‌ಎಸ್‌ಎಲ್ ಸಿ 3 ಪರೀಕ್ಷೆ ದಿನಾಂಕ ಹಾಗೂ ನೋಂದಣಿ ವಿವರವನ್ನು ಪ್ರಕಟಿಸಿದೆ.
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ(Karnataka School Examination and Assessment Board) ಯು ಈಗಾಗಲೇ ಕರ್ನಾಟಕ ಎಸ್ಸೆಸ್ಸೆಲ್ಸಿ 2 ಫಲಿತಾಂಶವನ್ನು ಪ್ರಕಟಿಸಿದೆ.ಇದರೊಂದಿಗೆ ಕರ್ನಾಟಕ ಎಸ್ಸೆಸ್ಸೆಲ್ಸಿ 3 ದಿನಾಂಕವನ್ನೂ ಘೋಷಿಸಿದೆ. ಅಲ್ಲದೇ ನೋಂದಣಿ ಪ್ರಕ್ರಿಯೆಯನ್ನು ಬುಧವಾರದಿಂದಲೇ ಆರಂಭಿಸಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮೂರು ಬಾರಿ ಆಯೋಜಿಸಲಾಗುತ್ತಿದೆ. ಈಗಾಗಲೇ ಎರಡು ಪರೀಕ್ಷೆಗಳು ಮುಗಿದು ಮೂರನೇ ಪರೀಕ್ಷೆಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸಿದ್ದತೆ ಮಾಡಿಕೊಂಡಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಇಲ್ಲವೇ ಕಡಿಮೆ ಅಂಕ ಬಂದ ಉತ್ತಮಪಡಿಸಿಕೊಳ್ಳಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಕಷ್ಟು ವಿದ್ಯಾರ್ಥಿಗಳೂ ಎರಡೂ ಪರೀಕ್ಷೆಗಳ ಉಪಯೋಗ ಪಡೆದಿದ್ದು. ಮೂರನೇ ಪರೀಕ್ಷೆಗೂ ಹಾಜರಾಗುವವರ ಸಂಖ್ಯೆ ಹೆಚ್ಚೇ ಇದೆ.
ಎಸ್‌ಎಸ್‌ಎಲ್‌ಸಿ 3 ಪರೀಕ್ಷೆಗೆ ಜುಲೈ 17 ರವರೆಗೆ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ನಿಮ್ಮ ಶಾಲೆಗಳ ಮೂಲಕವೇ ನೀವು ಆಯ್ಕೆ ಮಾಡಿಕೊಳ್ಳುವ ವಿಷಯ,ಮರು ಪರೀಕ್ಷೆ ಬರೆಯುವ ವಿಷಯ ಇಲ್ಲವೇ ಅನುತ್ತೀರ್ಣರಾಗಿರುವ ವಿಷಯದ ಕುರಿತು ನಿಗದಿತ ಶುಲ್ಕದೊಂದಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಈ ಅವಧಿಯೊಳಗೆ ನೋಂದಣಿ ಮಾಡಿಕೊಂಡವರು ಆಗಸ್ಟ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ3 ಪರೀಕ್ಷೆಯನ್ನು ಎದುರಿಸಲು ಅವಕಾಶವನ್ನು ನೀಡಲಾಗುತ್ತದೆ. ಈ ಅವಧಿಯ ನಂತರ ನೋಂದಣಿಗೆ ಅವಕಾಶವಿರುವುದಿಲ್ಲ ಎನ್ನುವುದನ್ನು ಮಂಡಳಿ ತಿಳಿಸಿದೆ.
2024ರ ಆಗಸ್ಟ್ 2ರಿಂದ ಅಗಸ್ಟ್ 9ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 3 ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ದಿನಗಳಂದು ಕರ್ನಾಟಕದ ಎಲ್ಲಾ ಜಿಲ್ಲೆಗಳ ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಉತ್ತರ ಪತ್ರಿಕೆ ಪಡೆಯಲು ಅವಕಾಶ
ಎಸ್‌ಎಸ್‌ಎಲ್‌ಸಿ 2 ಪರೀಕ್ಷೆ ಎದುರಿಸಿದವರು ಉತ್ತರ ಪತ್ರಿಕೆಗಳ ಸ್ಕ್ಯಾನ ಪ್ರತಿಯನ್ನು, ಮರು ಎಣಿಕೆ ಹಾಗು ಮರು ಮೌಲ್ಯಮಾಪನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉತ್ತರ ಪತ್ರಿಕೆ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿಪಡಿಸಿದ ದಿನಾಂಕ ಜುಲೈ 15ರೊಳಗೆ ಅರ್ಜಿ ಸಲ್ಲಿಸಬೇಕು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಲ್ಲವೇ ಆನ್ ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ ಮೂಲಕ ಚಲನ್ ಡೌನ್ ಮಾಡಿಕೊಂಡು ಶುಲ್ಕವನ್ನು ಬಿ1/ ಕೆ 1 ಬ್ಯಾಂಕಿಗೆ ಪಾವತಿಸಲು ಜುಲೈ 16ರವರೆಗೆ ಅವಕಾಶವಿದೆ, ಉತ್ತರ ಪತ್ರಿಕೆಗಳ ಮರು ಎಣಿಕೆಗೆ ಇಲ್ಲವೇ ಮರು ಮೌಲ್ಯ ಮಾಪನಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 18ರವರೆಗೆ ಅವಕಾಶವಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಲ್ಲವೇ ಆನ್ ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್‌ಲೈನ ಮೂಲಕ ಚಲನ್ ಡೌನ್ ಮಾಡಿಕೊಂಡು ಶುಲ್ಕವನ್ನು ಬಿ1/ ಕೆ 1 ಬ್ಯಾಂಕಿಗೆ ಪಾವತಿಸಲು ಜುಲೈ 19ರವರೆಗೆ ಅವಕಾಶವಿದೆ.
ಹೆಚ್ಚಿನ ವಿವರಗಳಿಗೆ ಮಂಡಳಿಯ ಜಾಲತಾಣವಾದ kseab.karnataka.gov.in ನಲ್ಲಿ ವಿವರವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಇದಲ್ಲದೇ ಶಾಲೆಗಳ ಕ್ರೋಢೀಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಾಲಿಕ ಅಂಕ ಪಟ್ಟಿಗಳನ್ನು ಮಂಡಳಿಯ ಜಾಲ ತಾಣ kseab.karnataka.gov.in ಮೂಲಕ ಶಾಲಾ ಲಾಗಿನ್‌ನಲ್ಲಿ ನೀಡಲಾಗುವುದು. ಶಾಲಾ ಹಂತದಲ್ಲಿ ಮುದ್ರಿಸಿಕೊಳ್ಳಲು ಬುಧವಾರವೇ ಆವಕಾಶ ಮಾಡಿಕೊಡಲಾಗಿದೆ ಎಂದು ಮಂಡಲಿ ಅಧ್ಯಕ್ಷೆ ಮಂಜುಳಾ ತಿಳಿಸಿದ್ದಾರೆ.
ವಿಭಾಗ