Puc Exam3 Results: ದ್ವಿತೀಯ ಪಿಯುಸಿ ಪರೀಕ್ಷೆ 3 ಫಲಿತಾಂಶ ನಾಳೆ, ನೋಡೋದು ಹೇಗೆ?
ಕನ್ನಡ ಸುದ್ದಿ  /  ಕರ್ನಾಟಕ  /  Puc Exam3 Results: ದ್ವಿತೀಯ ಪಿಯುಸಿ ಪರೀಕ್ಷೆ 3 ಫಲಿತಾಂಶ ನಾಳೆ, ನೋಡೋದು ಹೇಗೆ?

Puc Exam3 Results: ದ್ವಿತೀಯ ಪಿಯುಸಿ ಪರೀಕ್ಷೆ 3 ಫಲಿತಾಂಶ ನಾಳೆ, ನೋಡೋದು ಹೇಗೆ?

Puc Results ಕಳೆದ ತಿಂಗಳು ನಡೆದಿದ್ದ ಕರ್ನಾಟಕ ದ್ವಿತೀಯ ಪಿಯುಸಿ 3 ಪರೀಕ್ಷೆಯ ಫಲಿತಾಂಶವು ಮಂಗಳವಾರದಂದು ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಪಿಯುಸಿ ಪರೀಕ್ಷೆ 3  ಫಲಿತಾಂಶ ಪ್ರಕಟಣೆಗೆ ಸಿದ್ದತೆಗಳಾಗಿವೆ.
ಕರ್ನಾಟಕದಲ್ಲಿ ಪಿಯುಸಿ ಪರೀಕ್ಷೆ 3 ಫಲಿತಾಂಶ ಪ್ರಕಟಣೆಗೆ ಸಿದ್ದತೆಗಳಾಗಿವೆ.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ನಡೆಸಿದ್ದ 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ3 ರ ಫಲಿತಾಂಶವನ್ನು ಪ್ರಕಟಿಸಲಿದೆ. 2024ರ ಜುಲೈ 16ರ ಮಂಗಳವಾರ ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ ಮೂಲಕ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ( KSEAB) ಅಧ್ಯಕ್ಷೆಯೂ ಆಗಿರುವ ಐಎಎಸ್‌ ಅಧಿಕಾರಿ ಎನ್‌.ಮಂಜುಶ್ರೀ ತಿಳಿಸಿದ್ದಾರೆ. ವೆಬ್‌ಸೈಟ್‌ಗಳಲ್ಲಿ ವೀಕ್ಷಣೆಗೆ ಅವಕಾಶವಿದ್ದು, ಕಾಲೇಜುಗಳಲ್ಲೂ ಫಲಿತಾಂಶವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ವೀಕ್ಷಣೆಗೆ ಅವಕಾ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ 3 ಅನ್ನು 2024ರ ಜೂನ್‌ 24ರಿಂದ ಜುಲೈ 5ರವರೆಗೆ ನಡೆಸಲಾಗಿತ್ತು. ಕರ್ನಾಟಕದ ನಾನಾ ಜಿಲ್ಲೆಗಳಲ್ಲ ಕೇಂದ್ರಗಳಲ್ಲಿ ಪರೀಕ್ಷೆ ನಡೆದು ಮೌಲ್ಯಮಾಪನವೂ ಕಳೆದ ವಾರವೇ ಆರಂಭಗೊಂಡಿತ್ತು. ಈಗ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ3 ಗಂಟೆಎ nic ವೆಬ್‌ಸೈಟ್‌ ಮೂಲಕ ಫಲಿತಾಂಶ ವೀಕ್ಷಿಸಬಹುದು. https://karresults.nic.in ಅಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಫಲಿತಾಂಶ ನೋಡುವುದು ಹೇಗೆ?

kseab.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

https://www.karresults.nic.in ಅನ್ನು ಕ್ಲಿಕ್‌ ಮಾಡಿ.

ಹೋಮ್‌ ಪೇಜ್‌ನಲ್ಲಿ ಪಿಯುಸಿ ಪೂರಕ ಫಲಿತಾಂಶದ ಲಿಂಕ್‌ ಕ್ಲಿಕ್‌ ಮಾಡಿ

ಸ್ಕ್ರೀನ್‌ನಲ್ಲಿ ಹೊಸ ಪುಟ ಕಾಣಿಸುತ್ತದೆ

ನಿಮ್ಮ ರೋಲ್‌ ನಂಬರ್‌, ಜನ್ಮ ದಿನಾಂಕ ಸೇರಿದಂತೆ ಅಲ್ಲಿ ಕೇಳಲಾಗುವ ಮಾಹಿತಿಯನ್ನು ನಮೂದಿಸಿ

ಸ್ಕ್ರೀನ್‌ ಮೇಲೆ ನಿಮ್ಮ ಫಲಿತಾಂಶ ಕಾಣುತ್ತದೆ

ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿ ಅಥವಾ ಪ್ರಿಂಟ್‌ ಔಟ್‌ ತೆಗೆದುಕೊಳ್ಳಿ

ಪಿಯುಸಿ ಫಲಿತಾಂಶದ ಪ್ರಕಟಣೆ
ಪಿಯುಸಿ ಫಲಿತಾಂಶದ ಪ್ರಕಟಣೆ
Whats_app_banner