ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024; ಉಡುಪಿ ನಂ1, ದಕ್ಷಿಣಕನ್ನಡ ನಂ2, ಶಿವಮೊಗ್ಗ 28ರಿಂದ 3ಕ್ಕೆ ಹೈಜಂಪ್, ಜಿಲ್ಲಾವಾರು ಫಲಿತಾಂಶ ಹೀಗಿದೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024; ಉಡುಪಿ ನಂ1, ದಕ್ಷಿಣಕನ್ನಡ ನಂ2, ಶಿವಮೊಗ್ಗ 28ರಿಂದ 3ಕ್ಕೆ ಹೈಜಂಪ್, ಜಿಲ್ಲಾವಾರು ಫಲಿತಾಂಶ ಹೀಗಿದೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಪ್ರಕಟವಾಗಿದ್ದು, ಉಡುಪಿ ನಂ1, ದಕ್ಷಿಣ ಕನ್ನಡ ನಂ 2 ಸ್ಥಾನಕ್ಕೇರಿವೆ. ಇದೇ ವೇಳೆ, ಶಿವಮೊಗ್ಗ 28 ರಿಂದ 3ನೇ ಸ್ಥಾನಕ್ಕೆ ಹೈಜಂಪ್ ಮಾಡಿ ಗಮನಸೆಳೆದಿದೆ. ಕಳೆದ ಬಾರಿಗಿಂತ ಈ ಬಾರಿ ಉತ್ತೀರ್ಣ ಪ್ರಮಾಣ ಕಡಿಮೆಯಾಗಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಪ್ರಕಟಿಸಿದರು. ಉಡುಪಿ ನಂ1, ದಕ್ಷಿಣ ಕನ್ನಡ ನಂ 2, ಶಿವಮೊಗ್ಗ 28ರಿಂದ 3ನೇ ಸ್ಥಾನಕ್ಕೆ ಹೈಜಂಪ್ ಮಾಡಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಪ್ರಕಟಿಸಿದರು. ಉಡುಪಿ ನಂ1, ದಕ್ಷಿಣ ಕನ್ನಡ ನಂ 2, ಶಿವಮೊಗ್ಗ 28ರಿಂದ 3ನೇ ಸ್ಥಾನಕ್ಕೆ ಹೈಜಂಪ್ ಮಾಡಿದೆ.

ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 (Karnataka SSLC Results 2024) ವನ್ನು ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಇಂದು (ಮೇ 9) ಪ್ರಕಟಿಸಿದೆ. ಕೆಎಸ್‌ಇಎಬಿ 10 ನೇ ತರಗತಿಯ ರಿಸಲ್ಟ್‌ (KSEAB 10th Results)ನಲ್ಲಿ ಜಿಲ್ಲಾವಾರು ಫಲಿತಾಂಶ ಗಮನಿಸುವಾಗ, ಉಡುಪಿ ಮೊದಲ ಸ್ಥಾನಕ್ಕೆ, ದಕ್ಷಿಣ ಕನ್ನಡ ಎರಡನೇ ಸ್ಥಾನಕ್ಕೆ ಏರಿದೆ. ಶಿವಮೊಗ್ಗ ಜಿಲ್ಲೆ 28ರಿಂದ 3ನೇ ಸ್ಥಾನಕ್ಕೆ ಹೈಜಂಪ್ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಕಳೆದ ವರ್ಷದ ಫಲಿತಾಂಶ ಹೋಲಿಸಿದರೆ ಈ ಬಾರಿ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಈ ಸಲ ಫಲಿತಾಂಶ ಕಡಿಮೆ ಆಗಲು ವೆಬ್‌ಕಾಸ್ಟಿಂಗ್ ಕಾರಣ. ರಾಜ್ಯದ ಎಲ್ಲೆಡೆ ವೆಬ್‌ಕಾಸ್ಟಿಂಗ್ ಮಾಡಲು ಪ್ರಯತ್ನಿಸಿದ್ದೇವೆ. ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಿದ್ದೇವೆ. ಇದನ್ನು ಎಲ್ಲ ಪೋಷಕರು, ಶಿಕ್ಷಕರು ಸ್ವಾಗತಿಸಿದ್ದಾರೆ ಎಂದು ಪರೀಕ್ಷೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಶೇ 30 ರಷ್ಟು ಫಲಿತಾಂಶ ಕಡಿಮೆಯಾಗಿತ್ತು. ಫಲಿತಾಂಶ ಉತ್ತಮಪಡಿಸಲು ಕೃಪಾಂಕ ಪಡೆಯಲು ಈಗ ಶೇ 25 ಫಲಿತಾಂಶ ಪಡೆದರೆ ಸಾಕು. ಕೃಪಾಂಕದ ಪ್ರಮಾಣವನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ. ಅಪೂರ್ಣ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲಾಗುವುದು ಎಂದು ಪರೀಕ್ಷಾ ಮಂಡಳಿ ನಿರ್ದೇಶಕ ಮಂಜುಳಾ ತಿಳಿಸಿದ್ದಾರೆ.  

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024; ಜಿಲ್ಲಾವಾರು ಉತ್ತೀರ್ಣ ಪ್ರಮಾಣ

ಕರ್ನಾಟಕ 10ನೇ ತರಗತಿ ಫಲಿತಾಂಶ 2024 ಪ್ರಕಟವಾಗಿದ್ದು, ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಗಮನಿಸಿದರೆ, ಕಳೆದ ವರ್ಷ ಉತ್ತಮ ಸಾಧನೆ ತೋರಿದ್ದ ಜಿಲ್ಲೆಗಳೆಲ್ಲವೂ ಈ ಬಾರಿ ಭಾರಿ ಕುಸಿತ ಕಂಡಿವೆ. ಕೆಳಗೆ ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಮತ್ತು ಕಳೆದ ವರ್ಷದ ಉತ್ತೀರ್ಣ ಪ್ರಮಾಣವನ್ನು ನೀಡಲಾಗಿದೆ.

1) ಉಡುಪಿ ಶೇ 94 (89.49)

2) ದಕ್ಷಿಣ ಕನ್ನಡ ಶೇ 92.12 (89.47)

3) ಶಿವಮೊಗ್ಗ ಶೇ 88.67 (84.04)

4) ಕೊಡಗು ಶೇ 88.67 (93.19)

5) ಉತ್ತರ ಕನ್ನಡ ಶೇ 86.54 (90.53)

6) ಹಾಸನ ಶೇ 86.28 (96.68)

7) ಮೈಸೂರು ಶೇ 85.5 (89.75)

8) ಶಿರಸಿ ಶೇ 84.64 (87.39)

9) ಬೆಂಗಳೂರು ಗ್ರಾಮಾಂತರ ಶೇ 83.67 (96.48)

10) ಚಿಕ್ಕಮಗಳೂರು ಶೇ 83.39 (89.69)

11) ವಿಜಯಪುರ ಶೇ 79.82 (91.23)

12) ಬೆಂಗಳೂರು ದಕ್ಷಿಣ ಶೇ 79 (78.95)

13) ಬಾಗಲಕೋಟೆ ಶೇ 77.92 (85.14)

14) ಬೆಂಗಳೂರು ಉತ್ತರ ಶೇ 77.09 (80.93)

15) ಹಾವೇರಿ ಶೇ 75. 85 (89.11)

16) ತುಮಕೂರು ಶೇ 75.16 (89.43)

17) ಗದಗ ಶೇ 74.76 (86.51)

18) ಚಿಕ್ಕಬಳ್ಳಾಪುರ ಶೇ 73.61 (96.15)

19) ಮಂಡ್ಯ ಶೇ 73.59 (96.74)

20 ) ಕೋಲಾರ ಶೇ 73.57 (94.6)

21) ಚಿತ್ರದುರ್ಗ-72.85 (96.8)

22) ಧಾರವಾಡ-72.67 (86.55)

23) ದಾವಣಗೆರೆ-72.49 (90.43)

24) ಚಾಮರಾಜನಗರ-71.59 (94.37)

25) ಚಿಕ್ಕೋಡಿ-69.82 (91.07)

26) ರಾಮನಗರ-69.53 (89.42)

27) ವಿಜಯನಗರ-65.61 (91.41)

28) ಬಳ್ಳಾರಿ-64.99 (81.54)

29) ಬೆಳಗಾವಿ-64.93 (85.85)

30) ಮಧುಗಿರಿ-62.44 (93-23)

31) ರಾಯಚೂರು-61.2 (84.02)

32) ಕೊಪ್ಪಳ-61.16 (90.27)

33) ಬೀದರ್-57.52 (78.73)

34) ಕಲಬುರಗಿ-53.04 (84.51)

35) ಯಾದಗಿರಿ-50.59 (75.49)

ಕರ್ನಾಟಕ 10ನೇ ತರಗತಿ ಫಲಿತಾಂಶ 2024; ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಪರೀಕ್ಷೆ ಬರೆದಿದ್ದರು 

ಕರ್ನಾಟಕದಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಪರೀಕ್ಷೆ ಬರೆದವರು ಮತ್ತು ಜಿಲ್ಲಾವಾರು ಉತ್ತೀರ್ಣರಾದವರ ಸಂಖ್ಯೆಯ ವಿವರ ಇಲ್ಲಿದೆ. 

ಉಡುಪಿ

ಪರೀಕ್ಷೆ ಬರೆದವರು 14092 

ಉತ್ತೀರ್ಣರಾದವರು  13246

ದಕ್ಷಿಣ ಕನ್ನಡ 

ಪರೀಕ್ಷೆ ಬರೆದವರು 29701 

ಉತ್ತೀರ್ಣರಾದವರು 27360

ಶಿವಮೊಗ್ಗ 

ಪರೀಕ್ಷೆ ಬರೆದವರು 23028 

ಉತ್ತೀರ್ಣರಾದವರು 20420

ಕೊಡಗು 

ಪರೀಕ್ಷೆ ಬರೆದವರು 6123 

ಉತ್ತೀರ್ಣರಾದವರು 5429

ಉತ್ತರ ಕನ್ನಡ 

ಪರೀಕ್ಷೆ ಬರೆದವರು 9842  

ಉತ್ತೀರ್ಣರಾದವರು 8517

ಹಾಸನ 

ಪರೀಕ್ಷೆ ಬರೆದವರು  19560 

ಉತ್ತೀರ್ಣರಾದವರು 16877

ಮೈಸೂರು 

ಪರೀಕ್ಷೆ ಬರೆದವರು 38175 

ಉತ್ತೀರ್ಣರಾದವರು 32639

ಶಿರಸಿ 

ಪರೀಕ್ಷೆ ಬರೆದವರು 10046

ಉತ್ತೀರ್ಣರಾದವರು  8503

ಬೆಂಗಳೂರು ಗ್ರಾಮಾಂತರ 

ಪರೀಕ್ಷೆ ಬರೆದವರು 14223 

ಉತ್ತೀರ್ಣರಾದವರು 11900

ಚಿಕ್ಕಮಗಳೂರು 

ಪರೀಕ್ಷೆ ಬರೆದವರು 12934 

ಉತ್ತೀರ್ಣರಾದವರು 10786

ವಿಜಯಪುರ 

ಪರೀಕ್ಷೆ ಬರೆದವರು 40528 

ಉತ್ತೀರ್ಣರಾದವರು 32351

ಬೆಂಗಳೂರು ದಕ್ಷಿಣ  

ಪರೀಕ್ಷೆ ಬರೆದವರು 63186 

ಉತ್ತೀರ್ಣರಾದವರು 49916

ಬಾಗಲಕೋಟೆ  

ಪರೀಕ್ಷೆ ಬರೆದವರು 32129 

ಉತ್ತೀರ್ಣರಾದವರು 25035

ಬೆಂಗಳೂರು ಉತ್ತರ 

ಪರೀಕ್ಷೆ ಬರೆದವರು 49444 

ಉತ್ತೀರ್ಣರಾದವರು 38 117

ಹಾವೇರಿ 

ಪರೀಕ್ಷೆ ಬರೆದವರು 22986 

ಉತ್ತೀರ್ಣರಾದವರು 17434

ತುಮಕೂರು 

ಪರೀಕ್ಷೆ ಬರೆದವರು 22198 

ಉತ್ತೀರ್ಣರಾದವರು 16683

ಗದಗ 

ಪರೀಕ್ಷೆ ಬರೆದವರು 15545 

ಉತ್ತೀರ್ಣರಾದವರು 11621

ಚಿಕ್ಕಬಳ್ಳಾಪುರ 

ಪರೀಕ್ಷೆ ಬರೆದವರು 15792 

ಉತ್ತೀರ್ಣರಾದವರು 11624

ಮಂಡ್ಯ 

ಪರೀಕ್ಷೆ ಬರೆದವರು 20529

ಉತ್ತೀರ್ಣರಾದವರು 15108

ಕೋಲಾರ 

ಪರೀಕ್ಷೆ ಬರೆದವರು 19713 

ಉತ್ತೀರ್ಣರಾದವರು 14503

ಚಿತ್ರದುರ್ಗ 

ಪರೀಕ್ಷೆ ಬರೆದವರು 22275 
ಉತ್ತೀರ್ಣರಾದವರು 16227

ಧಾರವಾಡ 

ಪರೀಕ್ಷೆ ಬರೆದವರು 29148 

ಉತ್ತೀರ್ಣರಾದವರು 21182

ದಾವಣಗೆರೆ 

ಪರೀಕ್ಷೆ ಬರೆದವರು 21328 

ಉತ್ತೀರ್ಣರಾದವರು 15460

ಚಾಮರಾಜನಗರ 

ಪರೀಕ್ಷೆ ಬರೆದವರು 11655 

ಉತ್ತೀರ್ಣರಾದವರು 8344

ಚಿಕ್ಕೋಡಿ 

ಪರೀಕ್ಷೆ ಬರೆದವರು 44812 

ಉತ್ತೀರ್ಣರಾದವರು 31288

ರಾಮನಗರ 

ಪರೀಕ್ಷೆ ಬರೆದವರು 13088 

ಉತ್ತೀರ್ಣರಾದವರು 9100

ವಿಜಯನಗರ 

ಪರೀಕ್ಷೆ ಬರೆದವರು 20619 

ಉತ್ತೀರ್ಣರಾದವರು 13528

ಬಳ್ಳಾರಿ 

ಪರೀಕ್ಷೆ ಬರೆದವರು 22219 

ಉತ್ತೀರ್ಣರಾದವರು 14441

ಬೆಳಗಾವಿ 

ಪರೀಕ್ಷೆ ಬರೆದವರು 33434 

ಉತ್ತೀರ್ಣರಾದವರು 21710

ಮಧುಗಿರಿ

ಪರೀಕ್ಷೆ ಬರೆದವರು 12715 

ಉತ್ತೀರ್ಣರಾದವರು 7939

ರಾಯಚೂರು 

ಪರೀಕ್ಷೆ ಬರೆದವರು 31188 

ಉತ್ತೀರ್ಣರಾದವರು 19087

ಕೊಪ್ಪಳ 

ಪರೀಕ್ಷೆ ಬರೆದವರು 24075 

ಉತ್ತೀರ್ಣರಾದವರು 14724

ಬೀದರ್ 

ಪರೀಕ್ಷೆ ಬರೆದವರು 28110 

ಉತ್ತೀರ್ಣರಾದವರು 16168

ಕಲಬುರಗಿ 

ಪರೀಕ್ಷೆ ಬರೆದವರು 45980 

ಉತ್ತೀರ್ಣರಾದವರು 24386

ಯಾದಗಿರಿ 

ಪರೀಕ್ಷೆ ಬರೆದವರು 18880 

ಉತ್ತೀರ್ಣರಾದವರು 9551

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿರಾಜಕೀಯ ವಿಶ್ಲೇಷಣೆ  ಓದಿ.

IPL_Entry_Point