SSLC Result 2024: ತುಮಕೂರು ಜಿಲ್ಲೆಯ ಶಿರಾ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ; 625ಕ್ಕೆ 624 ಅಂಕ ಗಳಿಸಿದ ಹರ್ಷಿತಾ
ಕನ್ನಡ ಸುದ್ದಿ  /  ಕರ್ನಾಟಕ  /  Sslc Result 2024: ತುಮಕೂರು ಜಿಲ್ಲೆಯ ಶಿರಾ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ; 625ಕ್ಕೆ 624 ಅಂಕ ಗಳಿಸಿದ ಹರ್ಷಿತಾ

SSLC Result 2024: ತುಮಕೂರು ಜಿಲ್ಲೆಯ ಶಿರಾ ವಿದ್ಯಾರ್ಥಿನಿ ರಾಜ್ಯಕ್ಕೆ 2ನೇ ಸ್ಥಾನ; 625ಕ್ಕೆ 624 ಅಂಕ ಗಳಿಸಿದ ಹರ್ಷಿತಾ

ಶಿರಾ ಪಟ್ಟಣದ ಹರ್ಷಿತಾ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. 2024ರ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತುಮಕೂರು 16ನೇ ಸ್ಥಾನ ಪಡೆದಿದೆ.

ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ವಿದ್ಯಾರ್ಥಿ ಹರ್ಷಿತಾ 625ಕ್ಕೆ 624 ಅಂಕ ಪಡೆದು ಕರ್ನಾಟಕಕ್ಕೆ 2ನೇ ಸ್ಥಾನ ಪಡೆದಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ವಿದ್ಯಾರ್ಥಿ ಹರ್ಷಿತಾ 625ಕ್ಕೆ 624 ಅಂಕ ಪಡೆದು ಕರ್ನಾಟಕಕ್ಕೆ 2ನೇ ಸ್ಥಾನ ಪಡೆದಿದ್ದಾರೆ.

ತುಮಕೂರು: ವಿದ್ಯಾರ್ಥಿಗಳು ಬಹಳ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಎಸ್ಎಸ್ಎಲ್‌ಸಿ ಫಲಿತಾಂಶ (Karnataka SSLC Result 2024) ಇಂದು (ಮೇ 9, ಗುರುವಾರ) ಪ್ರಕಟವಾಗಿದ್ದು, ಜಿಲ್ಲೆಯ ಶಿರಾ (Sira) ಪಟ್ಟಣದ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹರ್ಷಿತಾ ಡಿ ಎಂ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಶಿರಾ ಪಟ್ಟಣದ ಶ್ರೀವಾಸವಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಹರ್ಷಿತಾ ಡಿಎಂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 624 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ತಮ್ಮ ಪುತ್ರಿಯ ಸಾಧನೆಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಸೇರುವ ಶಿರಾ ಪಟ್ಟಣದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಹರ್ಷಿತಾ ಸಾಧನೆಗೆ ಶಾಲಾಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಈ ಬಾರಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಶೇ.93.23 ಫಲಿತಾಂಶ ಬಂದಿದ್ದು ರಾಜ್ಯಕ್ಕೆ 8ನೇ ಸ್ಥಾನದಲ್ಲಿದೆ. ತುಮಕೂರು ಶೈಕ್ಷಣಿಕ ಜಿಲ್ಲೆ 89.43 ರಷ್ಟು ಫಲಿತಾಂಶ ಪಡೆಯುವ ಮೂಲಕ 16ನೇ ಸ್ಥಾನಕ್ಕೆ ಜಿಗಿತ ಕಂಡಿದೆ. 2023ರಲ್ಲಿ ತುಮಕೂರು 20ನೇ ಸ್ಥಾನ ಬಂದಿತ್ತು. ಇದೀಗ 4 ಸ್ಥಾನಗಳ ಹೆಚ್ಚಳದೊಂದಿಗೆ 16ನೇ ಸ್ಥಾನಕ್ಕೆ ಹೆಚ್ಚಿಸಿಕೊಂಡಿದೆ.

22,198 ವಿದ್ಯಾರ್ಥಿಗಳ ಪೈಕಿ 16,683 ವಿದ್ಯಾರ್ಥಿಗಳು ತೇರ್ಗಡೆ

ತುಮಕೂರಿನಲ್ಲಿ ಒಟ್ಟು 22,198 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 16,683 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇಕಡವಾರು ಫಲಿತಾಂಶ ನೋಡುವುದಾದರೆ 75.16 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೈಕ್ಷಣಿಕವಾಗಿ ಜಿಲ್ಲೆಯಾಗಿರುವ ಮಧುಗಿರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡುವುದಾದರೆ 12,715 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,939 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇಕಡಾ 62.44 ರಷ್ಟು ಫಲಿತಾಂಶದೊಂದಿಗೆ 30ನೇ ಸ್ಥಾನ ಪಡೆದಿದೆ. 2023ಕ್ಕೆ ಹೋಲಿಸಿಕೊಂಡೆರೆ ಮಧುಗಿರಿಯ ಈ ಫಲಿತಾಂಶ ಕಳಪೆಯಾಗಿದೆ. 2023ರಲ್ಲಿ 9ನೇ ಸ್ಥಾನ ಪಡೆದಿದ್ದ ಶೈಕ್ಷಣಿಕ ಜಿಲ್ಲೆ ಈ ಬಾರಿ 30 ಸ್ಥಾನಕ್ಕೆ ಕುಸಿದಿದೆ.

Whats_app_banner