ಕನ್ನಡ ಸುದ್ದಿ  /  Karnataka  /  Education News Karnataka Sslc Revaluation Result 2023 Announced Ruchitha From Magadi Ramanagar Gets 625 Marks Mgb

SSLC Revaluation Result ಎಸ್​​ಎಸ್​​ಎಲ್​ಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ; ಮಾಗಡಿಯ ರುಚಿತಾಗೆ ಔಟ್ ಆಫ್ ಔಟ್​

Karnataka SSLC Revaluation Result 2023: ಎಸ್​​ಎಸ್​​ಎಲ್​ಸಿ ವಾರ್ಷಿಕ ಪರೀಕ್ಷೆಯಲ್ಲಿ ರುಚಿತಾಗೆ ವಿಜ್ಞಾನ ವಿಷಯದಲ್ಲಿ 99 ಅಂಕ ಬಂದಿತ್ತು. ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ರುಚಿತಾ ಅರ್ಜಿ ಸಲ್ಲಿಸಿದ್ದರು. ಇದೀಗ ಮರುಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚಿಗೆ ಪಡೆದಿದ್ದು, ಇದೀಗ ಎಲ್ಲಾ ವಿಷಯಗಳನ್ನೂ ಸೇರಿಸಿ ರುಚಿತಾಗೆ 625ಕ್ಕೆ 625 ಅಂಕಗಳು ಬಂದಿದೆ.

ಎಸ್​​ಎಸ್​​ಎಲ್​ಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ (ಸಾಂದರ್ಭಿಕ ಚಿತ್ರ)
ಎಸ್​​ಎಸ್​​ಎಲ್​ಸಿ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ (ಸಾಂದರ್ಭಿಕ ಚಿತ್ರ)

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್​​ಎಸ್​​ಎಲ್​ಸಿ ಮರುಮೌಲ್ಯಮಾಪನ ಫಲಿತಾಂಶವನ್ನು (Karnataka SSLC Revaluation Result 2023) ಇಂದು (ಜೂನ್​ 6, ಮಂಗಳವಾರ) ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ರಾಮನಗರ ಜಿಲ್ಲೆಯ ಮಾಗಡಿಯ ರುಚಿತಾ ಔಟ್ ಆಫ್ ಔಟ್​ ಅಂಕ ತೆಗೆದಿದ್ದಾಳೆ.

ಎಸ್​​ಎಸ್​​ಎಲ್​ಸಿ ವಾರ್ಷಿಕ ಪರೀಕ್ಷೆಯಲ್ಲಿ ರುಚಿತಾಗೆ ವಿಜ್ಞಾನ ವಿಷಯದಲ್ಲಿ 99 ಅಂಕ ಬಂದಿತ್ತು. ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ರುಚಿತಾ ಅರ್ಜಿ ಸಲ್ಲಿಸಿದ್ದರು. ಇದೀಗ ಮರುಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚಿಗೆ ಪಡೆದಿದ್ದು, ಇದೀಗ ಎಲ್ಲಾ ವಿಷಯಗಳನ್ನೂ ಸೇರಿಸಿ ರುಚಿತಾಗೆ 625ಕ್ಕೆ 625 ಅಂಕಗಳು ಬಂದಿದೆ. ಒಟ್ಟು 12, 986 ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, 2,353 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. https://kseab.karnataka.gov.in ವೆಬ್‌ಸೈಟ್‌ ನಲ್ಲಿ ಫಲಿತಾಂಶ ಲಭ್ಯವಿದೆ.

ಈ ಬಾರಿ ಒಟ್ಟು 8,35,102 ವಿದ್ಯಾರ್ಥಿಗಳು ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆದಿದ್ದು, ಶೇಕಡ 83.88 ರಷ್ಟು ಅಂದರೆ 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದರು. ಜಿಲ್ಲಾವಾರು ಫಲಿತಾಂಶದಲ್ಲಿ ಚಿತ್ರದುರ್ಗ (ಶೇ 96.8) ಪ್ರಥಮ ಸ್ಥಾನ ಪಡೆದಿದೆ. ಶೇ 96.74 ಪಡೆದ ಮಂಡ್ಯ, ಶೇ 96.68 ಪಡೆದ ಹಾಸನ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿಯೂ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. 5,59,51 ಬಾಲಕಿಯರು ಮತ್ತು 3,41,108 ಬಾಲಕರು ಉತ್ತೀರ್ಣರಾಗಿದ್ದರು.

ಯಾದಗಿರಿ, ಬೀದರ್‌, ಬೆಂಗಳೂರು ದಕ್ಷಿಣ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದ ಮೂರು ಜಿಲ್ಲೆಗಳಾಗಿವೆ. ಈ ಮೂರು ಜಿಲ್ಲೆಗಳು ಕ್ರಮವಾಗಿ ಶೇ 75.49, ಶೇಕಡ 78.73 ಮತ್ತು ಶೇಕಡ 78.95 ಪಡೆದಿವೆ.

IPL_Entry_Point