ಕನ್ನಡ ಸುದ್ದಿ  /  Karnataka  /  Education News Kcet 2023 Answer Key Released At Cetonline.karnataka.gov.in, Raise Objection Till May 30 Pcp

KCET 2023: ಸಿಇಟಿ 2023ರ ಉತ್ತರ ಕೀ ಪ್ರಕಟ, ಆಕ್ಷೇಪಣೆ ಸಲ್ಲಿಸಲು ಮೇ 30ರವರೆಗೆ ಅವಕಾಶ, ಉತ್ತರಗಳನ್ನು ಪರಿಶೀಲಿಸಲು ಇಲ್ಲಿದೆ ಲಿಂಕ್‌

Karnataka UG CET: ಕರ್ನಾಟಕ ಸಿಇಟಿ ಪರೀಕ್ಷೆ ಬರೆದ ಅಭ್ಯರ್ಥಿಗಳು kea.kar.nic.in ವೆಬ್‌ಸೈಟ್‌ನಲ್ಲಿ ಕೀ ಉತ್ತರಗಳನ್ನು ಪರಿಶೀಲಿಸಬಹುದು. ಈ ಕೀ ಉತ್ತರಗಳ ಕುರಿತು ಆಕ್ಷೇಪಣೆ ಸಲ್ಲಿಸಲು ಮೇ 30ರವರೆಗೆ ಅವಕಾಶ ನೀಡಲಾಗಿದೆ.

KCET 2023: ಸಿಇಟಿ 2023ರ ಉತ್ತರ ಕೀ ಪ್ರಕಟ, ಆಕ್ಷೇಪಣೆ ಸಲ್ಲಿಸಲು ಮೇ 30ರವರೆಗೆ ಅವಕಾಶ
KCET 2023: ಸಿಇಟಿ 2023ರ ಉತ್ತರ ಕೀ ಪ್ರಕಟ, ಆಕ್ಷೇಪಣೆ ಸಲ್ಲಿಸಲು ಮೇ 30ರವರೆಗೆ ಅವಕಾಶ (Shutterstock)

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಸಿಇಟಿ ಅಥವಾ ಯುಜಿ ಸಿಇಟಿ ಎಂದು ಕರೆಯಲ್ಪಡುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಉತ್ತರ ಕೀಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ kea.kar.nic.inನಲ್ಲಿ ಉತ್ತರ ಕೀಗಳನ್ನು ಪರಿಶೀಲಿಸಬಹುದು.

ಮೇ 30ರ ಬೆಳಗ್ಗೆ 11 ಗಂಟೆಯವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.

ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಷಯ, ಪ್ರಶ್ನೆ ಸಂಖ್ಯೆ, ವರ್ಷನ್‌ ಕೋಡ್‌ ನಮೂದಿಸಬೇಕು. ವರ್ಷನ್‌ ಕೋಡ್‌ ನಮೂದಿಸಿದೆ ಅಥವಾ ಪ್ರಶ್ನೆ ಸಂಖ್ಯೆ ನಮೂದಿಸದೆ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುವದಿಲ್ಲ. ಹೆಚ್ಚುವರಿಯಾಗಿ, ಪಿಡಿಎಫ್‌ ಫಾರ್ಮಾಟ್‌ನಲ್ಲಿ ಆಕ್ಷೇಪಣೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಬೇಕು.

KCET 2023 ಆನ್ಸರ್‌ ಕೀ ಪರಿಶೀಲನೆ ಹೇಗೆ?

  • ಮೊದಲಿಗೆ cetonline.karnataka.gov.in ವೆಬ್‌ಸೈಟ್‌ ಪರಿಶೀಲಿಸಿ.
  • ಅಲ್ಲಿ ಹೋಮ್‌ ಪೇಜ್‌ನಲ್ಲಿ ಆನ್ಸರ್‌ ಕೀ ಎಂಬ ಲಿಂಕ್‌ ಕ್ಲಿಕ್‌ ಮಾಡಿ
  • ಪರದೆಯಲ್ಲಿ ಪಿಡಿಎಫ್‌ ಕಾಣಿಸಿಕೊಳ್ಳುತ್ತದೆ.
  • ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲಿಸಿ.

ಐಡಿಬಿಐ ಬ್ಯಾಂಕ್‌ನಲ್ಲಿ 1036 ಎಕ್ಸಿಕ್ಯುಟಿವ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಐಡಿಬಿಐ ಬ್ಯಾಂಕ್‌ನಲ್ಲಿ ಎಕ್ಸಿಕ್ಯುಟಿವ್‌ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ (idbibank.in) ಅರ್ಜಿ ಸಲ್ಲಿಸಬಹುದು. ಐಡಿಬಿಐ ಬ್ಯಾಂಕ್‌ನಲ್ಲಿರುವ 1036 ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅಂದರೆ, ಮೇ 24ರಿಂದ ಜೂನ್‌ 7ರವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

ಒಟ್ಟು 1036 ಎಕ್ಸಿಕ್ಯುಟಿವ್‌ ಹುದ್ದೆಗಳಿವೆ. ಇವು ಗುತ್ತಿಗೆ ಆಧರಿತ ಹುದ್ದೆಗಳಾಗಿದ್ದು, ಈ ಹುದ್ದೆಗಳಲ್ಲಿ ಎಸ್‌ಸಿ ಅಭ್ಯರ್ಥಿಗಳಿಗೆ 160, ಎಸ್‌ಟಿ- 67, ಒಬಿಸಿ- 255, ಇಡಬ್ಲ್ಯುಎಸ್‌-103, ಸಾಮಾನ್ಯ ಅಭ್ಯರ್ಥಿಗಳಿಗೆ 1036 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಸಿಇಟಿ' ಬಗ್ಗೆ ಗೊತ್ತು, ಆದ್ರೆ 'ಸಿಯುಇಟಿ' ಬಗ್ಗೆ ಗೊತ್ತಿಲ್ವಾ?

ನೀಟ್, ಜೆಇಇ, ಸಿಇಟಿ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಹೊಂದಿರುವ ದ್ವಿತೀಯ ಪಿಯುಸಿ ಬಹಳಷ್ಟು ವಿದ್ಯಾರ್ಥಿಗಳು ಸಿಯುಇಟಿ ಬಗ್ಗೆ ತಿಳಿಯದೆ ತಮಗಿರುವ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. 2022ರವರೆಗೆ ಪ್ರತಿ ಕೇಂದ್ರ ವಿಶ್ವವಿದ್ಯಾಲಯಗಳು ತಮ್ಮ ಪದವಿ ಕೋರ್ಸುಗಳಿಗೆ ಪ್ರವೇಶ ತೆಗೆದುಕೋಳ್ಳಲು ತಮ್ಮದೇ ಆದ ವಿಭಿನ್ನ ಕಾರ್ಯವಿಧಾನವನ್ನು ಹೊಂದಿದ್ದವು. ಈ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಕೀಕರಿಸಲು ಶಿಕ್ಷಣ ಸಚಿವಾಲಯ ಯುಜಿಸಿಯೊಂದಿಗೆ ಸೇರಿ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ (ಸಿಯುಇಟಿ) ಎಂಬ ವಿನೂತನ ಪರೀಕ್ಷೆಯನ್ನು ಪರಿಚಯಿಸಿದೆ. ಈ ಪರೀಕ್ಷೆಯ ಕುರಿತು ಸಂಪೂರ್ಣ ವಿವರ ಇಲ್ಲಿದೆ.