KCET Toppers 2023: ನಿಖರತೆ ಮತ್ತು ಸ್ಪಷ್ಟತೆ ನನ್ನ ಯಶಸ್ಸಿನ ಗುಟ್ಟು, ಇಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿಘ್ನೇಶ್‌ ಸಂದರ್ಶನ
ಕನ್ನಡ ಸುದ್ದಿ  /  ಕರ್ನಾಟಕ  /  Kcet Toppers 2023: ನಿಖರತೆ ಮತ್ತು ಸ್ಪಷ್ಟತೆ ನನ್ನ ಯಶಸ್ಸಿನ ಗುಟ್ಟು, ಇಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿಘ್ನೇಶ್‌ ಸಂದರ್ಶನ

KCET Toppers 2023: ನಿಖರತೆ ಮತ್ತು ಸ್ಪಷ್ಟತೆ ನನ್ನ ಯಶಸ್ಸಿನ ಗುಟ್ಟು, ಇಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿಘ್ನೇಶ್‌ ಸಂದರ್ಶನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಎಂಜಿನಿಯರಿಂಗ್‌ ವಿಭಾಗದಲ್ಲಿ ವಿಘ್ನೇಶ್‌ ನಟರಾಜ್ ಕುಮಾರ್ (Vignesh Nataraj Kumar) ಕರ್ನಾಟಕಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಸಿಇಟಿಯಲ್ಲಿ ಮೊದಲ ರ‍್ಯಾಂಕ್‌ ಪಡೆದ ಹಿಂದಿನ ಶ್ರಮ, ಸಾಧನೆಯ ಗುಟ್ಟನ್ನು(Success Story) ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

KCET Toppers 2023: ನಿಖರತೆ ಮತ್ತು ಸ್ಪಷ್ಟತೆ ನನ್ನ ಯಶಸ್ಸಿನ ಗುಟ್ಟು, ಇಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿಘ್ನೇಶ್‌ ಸಂದರ್ಶನ
KCET Toppers 2023: ನಿಖರತೆ ಮತ್ತು ಸ್ಪಷ್ಟತೆ ನನ್ನ ಯಶಸ್ಸಿನ ಗುಟ್ಟು, ಇಂಜಿನಿಯರಿಂಗ್‌ನಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿಘ್ನೇಶ್‌ ಸಂದರ್ಶನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಎಂಜಿನಿಯರಿಂಗ್‌ ವಿಭಾಗದಲ್ಲಿ ವಿಘ್ನೇಶ್‌ ನಟರಾಜ್ ಕುಮಾರ್ (Vignesh Nataraj Kumar) ಕರ್ನಾಟಕಕ್ಕೆ ಮೊದಲ ರ‍್ಯಾಂಕ್‌ (ಶೇಕಡ 96.111) ಪಡೆದಿದ್ದಾರೆ. ಇವರು ಬೆಂಗಳೂರಿನ ಉತ್ತರ ಹಳ್ಳಿಯ ಕುಮಾರನ್ ಚಿಲ್ಡ್ರನ್ಸ್ ಹೋಂನ ವಿದ್ಯಾರ್ಥಿ. ಸಿಇಟಿಯಲ್ಲಿ ಮೊದಲ ರ‍್ಯಾಂಕ್‌ ಪಡೆದ ಹಿಂದಿನ ಶ್ರಮ, ಸಾಧನೆಯ ಗುಟ್ಟನ್ನು ಇವರು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಸಿಇಟಿ ಅಥವಾ ಇತರೆ ಯಾವುದೇ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಸ್ಪೂರ್ತಿಯಾಗುವಂತಹ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

ವಿಘ್ನೇಶ್‌ ನಟರಾಜ್ ಕುಮಾರ್ ಮೂಲತಃ ಚೆನ್ನೈನವರು. ಆದರೆ, ವಾಸ ಬೆಂಗಳೂರಿನಲ್ಲಿ. 1ರಿಂದ 12ನೇ ತರಗತಿಯವರೆಗೆ ಬೆಂಗಳೂರಿನ ಕುಮಾರನ್ ಚಿಲ್ಡ್ರನ್ಸ್ ಹೋಂನಲ್ಲಿಯೇ ಓದಿದ್ದಾರೆ. ಮುಂದೆ ಎಂಜಿನಿಯರಿಂಗ್‌ ಪದವಿ ಪಡೆದು ಭವಿಷ್ಯದಲ್ಲಿ ಟೆಕ್ನಾಲಜಿ ಮತ್ತು ಇನ್ನೋವೇಷನ್‌ ಬಳಸಿ ನ್ಯೂರೋ ಡೈವರ್ಜನ್‌ ಕಾಯಿಲೆಯಿಂದ ಬಳಲುವವರಿಗೆ ಸಹಾಯ ಮಾಡಬೇಕೆಂಬ ಸುಂದರ ಕನಸು ಹೊಂದಿದ್ದಾರೆ. ಅವರ ಮಾತುಗಳಲ್ಲಿಯೇ ಅವರ ಯಶೋಗಾಥೆ ಮತ್ತು ಸಲಹೆ ಕೇಳೋಣ ಬನ್ನಿ.

ವೇಗ ಮತ್ತು ನಿಖರತೆ ಯಶಸ್ಸಿಗೆ ಕೀಲಿಕೈ

ಕೆಸಿಇಟಿ ಎನ್ನುವುದು ವೇಗ ಮತ್ತು ನಿಖರತೆಯ ಪರೀಕ್ಷೆ ಅನ್ನೋದು ನನ್ನ ಅಭಿಪ್ರಾಯ. ಇದರಲ್ಲಿ ಯಶಸ್ಸು ಪಡೆಯಲು ನಾನು ಪ್ರಮುಖವಾಗಿ ಮೂರು ವಿಷಯಗಳ ಕುರಿತು ನೀಡಬೇಕು. ಮೊದಲನೆಯದಾಗಿ ನೀವು ಸಿಲೇಬಸ್‌ ಮತ್ತು ಕಾನ್ಸೆಪ್ಟ್‌ನ ಎಲ್ಲಾ ವಿಭಾಗಗಳ ಕುರಿತು ಸ್ಪಷ್ಟತೆ ಹೊಂದಿರಬೇಕು. ಏಕೆಂದರೆ, ಇದು ಕೇವಲ 11 ಮತ್ತು 12ನೇ ತರಗತಿಯಂತಲ್ಲ. ಇದಕ್ಕಾಗಿ ನಾನು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳು, ಈ ಪರಿಕಲ್ಪನೆ ಅರ್ಥಮಾಡಿಕೊಳ್ಳಲು ನೆರವಾಗುವ ಇತರೆ ಸಂಪನ್ಮೂಲಗಳು, ಕೋಚಿಂಗ್‌ ಮೆಟಿರಿಯಲ್‌ಗಳು, ಪುಸ್ತಕಗಳನ್ನು ಅಧ್ಯಯನ ಮಾಡಿದ್ದೇನೆ e

ಎರಡನೇಯದಾಗಿ ಪರೀಕ್ಷೆ ಬರೆಯುವ ಸಮಯದಲ್ಲಿಯೂ ಅತ್ಯಂತ ಎಚ್ಚರಿಕೆ ವಹಿಸಬೇಕು. ಪ್ರತಿಪ್ರಶ್ನೆಗೂ ಸರಿಯಾದ ಪರಿಕಲ್ಪನೆಯನ್ನು ಅಳವಡಿಸಿ ಬರೆಯಬೇಕು. ಪರಿಣಾಮಕಾರಿಯಾಗಿ ಉತ್ತರ ಬರೆಯುವುದು ಅತ್ಯಂತ ಪ್ರಮುಖವಾದ ವಿಷಯ. ನಾನು ಅಧ್ಯಯನ ಮಾಡುವ ಸಲುವಾಗಿ ನನ್ನ ಕೋಚಿಂಗ್‌ ಮೆಟಿರಿಯಲ್‌ ಇತ್ಯಾದಿಗಳನ್ನು ಬಳಸಿದೆ. ನಿರಂತರ ಅಭ್ಯಾಸದಿಂದ ನನ್ನ ವೇಗ ಮತ್ತು ನಿಖರತೆಯನ್ನು ಹೆಚ್ಚಿಸಿಕೊಂಡೆ.

ಮೂರನೆಯದಾಗಿ ಪರೀಕ್ಷೆ ಬರೆಯುವ ಕುರಿತು ಅತ್ಯುತ್ತಮ ಮನೋಧರ್ಮ ಹೊಂದಿರಬೇಕು. ಪರೀಕ್ಷೆಯ ಒತ್ತಡವನ್ನು ನಿಭಾಯಿಸಲು ತಿಳಿದಿರಬೇಕು. ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಪರೀಕ್ಷೆ ಹೊರತುಪಡಿಸಿ ಬೇರೆ ಯಾವುದೇ ವಿಚಾರಗಳು ನಿಮ್ಮನ್ನು ಡಿಸ್ಟರ್ಬ್‌ ಮಾಡುವಂತೆ ಇರಬಾರದು. ಇದನ್ನು ಸಾಧಿಸುವ ಸಲುವಾಗಿ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಸಾಕಷ್ಟು ಈ ಹಿಂದಿನ ವರ್ಷಗಳ ಕೆಸಿಇಟಿ ಪೇಪರ್‌ಗಳನ್ನು ಅಭ್ಯಾಸ ಮಾಡಿದ್ದೇನೆ. ಪರೀಕ್ಷೆ ಬರೆಯುವ ಸಮಯದಲ್ಲಿ ಈ ರೀತಿ ನಡೆಸಿದ ಅಭ್ಯಾಸಗಳು ನೆರವಾಗುತ್ತವೆ. ಅಂದರೆ, ಒವಿಆರ್‌ಎಂ ಭರ್ತಿ ಮಾಡುವುದು, ಸಮಯದ ನಿರ್ವರ್ಹಣೆ, ಒತ್ತಡ ನಿರ್ವಹಣೆ, ಯೋಚಿಸಿ ಸರಿಯಾದ ಉತ್ತರ ಬರೆಯುವುದು ಇತ್ಯಾದಿಗಳಿಗೆ ನೆರವಾಗಿದೆ.

ಸಮಯ ನಿರ್ವಹಣೆ ಸಿಇಟಿಯ ಪ್ರಮುಖ ಸವಾಲು

ಕರ್ನಾಟಕ ಸಿಇಟಿಯಲ್ಲಿ ಪ್ರಮುಖ ಸವಾಲು ಸಮಯದ ನಿರ್ವಹಣೆ. 60 ಪ್ರಶ್ನೆಗಳಿಗೆ ನಿಗದಿತ ಅವಧಿಯಲ್ಲಿ ಉತ್ತರಿಸಬೇಕು. ಯಾವುದಾದರೂ ಒಂದು ಪ್ರಶ್ನೆಯಲ್ಲಿ ಸ್ಟ್ರಕ್‌ ಆದರೂ ದೊಡ್ಡ ಹೊಡೆತ ಬೀಳುತ್ತದೆ. ಪರೀಕ್ಷೆಯಲ್ಲಿ ನಿಗದಿತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಕಲೆ ಕಲಿತರೆ ಯಶಸ್ಸು ಪಡೆಯಬಹುದು. ನಿರಂತರ ಅಭ್ಯಾಸ, ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವುದು ಇತ್ಯಾದಿಗಳಿಂದ ಸಮಯ ನಿರ್ವಹಣೆ ಕಲಿಯಬಹುದು. ಸತತ ಪ್ರಯತ್ನವೇ ಯಶಸ್ಸಿಗೆ ಕೀಲಿಕೈ.

ಯಶಸ್ಸು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಲಹೆ

ನನ್ನ ಸಲಹೆ ಏನೆಂದರೆ "ಸ್ಥಿರತೆ ಮತ್ತು ಭರವಸೆ" ಇರಲಿ. ಸ್ಥಿರತೆ ಜತೆಗೆ ಪ್ರಯತ್ನವೂ ಇರಲಿ. ಕನ್ಸಿಟೆನ್ಸಿ ಮತ್ತು ಹೋಪ್‌, ಕನ್ಸಿಟೆನ್ಸಿ ವಿದ್‌ ಎಫರ್ಟ್‌ ಮರೆಯದಿರಿ. ಇದು ಖಂಡಿತವಾಗಿಯೂ ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯಬಲ್ಲದು. ನಾನು ಈಗಾಗಲೇ ಹೇಳಿದ ಮೂರು ಗುಟ್ಟುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ವೇಗ ಮತ್ತು ನಿಖರತೆ ಇರಲಿ. ಸಿಇಟಿ ಅಥವಾ ಇಂತಹ ಇನ್ಯಾವುದೇ ಪರೀಕ್ಷೆ ಎನ್ನುವುದು ದೀರ್ಘಕಾಲದ ಪ್ರಯಾಣ. ಇದು ಕಠಿಣ ಪ್ರಯಾಣವೂ ಹೌದು. ಎಂದಿಗೂ ಹಿಂದೆ ಸರಿಯಬೇಡಿ. ನೆವರ್‌ ಗೀವಪ್.‌

ಭವಿಷ್ಯದ ಕನಸು

ನಾನು ಹುಟ್ಟಿದ್ದು ಚೆನ್ನೈನಲ್ಲಿ. ಬಟ್‌ ನಾನು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಕುಮಾರನ್ ಚಿಲ್ಡ್ರನ್ಸ್ ಹೋಂನಲ್ಲಿ ಓದಿದ್ದೇನೆ. ಇದೇ ಶಿಕ್ಷಣ ಸಂಸ್ಥೆಯಲ್ಲಿ 1ರಿಂದ 12ನೇ ತರಗತಿಯವರೆಗೆ ಓದಿದ್ದೇನೆ. ನನ್ನ ಈ ಯಶಸ್ಸಿಗೆ ನನ್ನ ಕುಟುಂಬ ಮತ್ತು ಕುಮಾರನ್‌ ಚಿಲ್ಡರ್ನ್‌ ಹೋಂನ ಬೋಧಕರ ಕೊಡುಗೆ ಸಾಕಷ್ಟು ಇದೆ. ನನ್ನ ತಂದೆ, ತಾಯಿ, ಸಹೋದರರ ಕೊಡುಗೆ ಸಾಕಷ್ಟು ಇದೆ. ಅಮ್ಮನ ಕೊಡುಗೆ ಸಾಕಷ್ಟು ಇದೆ. ನನ್ನ ಟೀಚರ್‌ಗಳ ಸಹಕಾರ ಮರೆಯುವಂತೆ ಇಲ್ಲ. ಮುಂದೆ ಎಂಜಿನಿಯರಿಂಗ್‌ ವಿಭಾಗದಲ್ಲಿಯೇ ಓದಬೇಕೆಂದಿದ್ದೇನೆ.. ಟೆಕ್ನಾಲಜಿ ಮತ್ತು ಇನ್ನೋವೇಷನ್‌ ಬಳಸಿ ನ್ಯೂರೋ ಡೈವರ್ಜನ್‌ ಕಾಯಿಲೆಯಿಂದ ಬಳಲುವವರಿಗೆ ಸಹಾಯ ಮಾಡುವ ಭವಿಷ್ಯದ ಕನಸನ್ನು ಹೊಂದಿದ್ದೇನೆ. (ಸಂದರ್ಶನ: ಪ್ರವೀಣ್‌ ಚಂದ್ರ ಪುತ್ತೂರು)

Whats_app_banner