KSET 2023: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2023ರ ಪ್ರವೇಶ ಪತ್ರ ಬಿಡುಗಡೆ; ಕೆಸೆಟ್‌ 2023 ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೀಗೆ..
ಕನ್ನಡ ಸುದ್ದಿ  /  ಕರ್ನಾಟಕ  /  Kset 2023: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2023ರ ಪ್ರವೇಶ ಪತ್ರ ಬಿಡುಗಡೆ; ಕೆಸೆಟ್‌ 2023 ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೀಗೆ..

KSET 2023: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2023ರ ಪ್ರವೇಶ ಪತ್ರ ಬಿಡುಗಡೆ; ಕೆಸೆಟ್‌ 2023 ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೀಗೆ..

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ 2023ರ (ಕೆಸೆಟ್ 2023) ಪ್ರವೇಶ ಪತ್ರ ಬಿಡುಗಡೆಯಾಗಿದೆ. ಜನವರಿ 13ರಂದು ಪರೀಕ್ಷೆ ನಡೆಯಲಿದ್ದು, ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಮತ್ತು ಇತರೆ ವಿವರ ಇಲ್ಲಿದೆ.

ಕೆಸೆಟ್‌ 2023ರ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ, (ಸಾಂಕೇತಿಕ ಚಿತ್ರ)
ಕೆಸೆಟ್‌ 2023ರ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ, (ಸಾಂಕೇತಿಕ ಚಿತ್ರ) (PC- kea.kar.nic.in)

ಕರ್ನಾಟಕ ಸ್ಟೇಟ್ ಎಲಿಜಿಬಿಲಿಟಿ ಟೆಸ್ಟ್ 2023ರ ಪ್ರವೇಶ ಪತ್ರವನ್ನು (KSET 2023 admit card) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಂಗಳವಾರ (ಜ.2) ಬಿಡುಗಡೆ ಮಾಡಿದೆ.

ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದಕ್ಕೆ ಅಗತ್ಯವಿರುವ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ “kea.kar.nic.in” ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜನವರಿ 13ರಂದು ಕೆಸೆಟ್ ಪರೀಕ್ಷೆಯು ನಡೆಯಲಿದೆ. 2023ರ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET 2023)ಯಲ್ಲಿ ಎರಡು ಪೇಪರ್‌ಗಳು ಇರಲಿವೆ. ಈ ಎರಡೂ ಪೇಪರ್‌ಗಳು ಬಹುಮಾದರಿ ಪ್ರಶ್ನೆ (ಎಂಸಿಕ್ಯೂ) ಮಾದರಿಯ ಪ್ರಶ್ನೆಗಳನ್ನು ಹೊಂದಿರಲಿವೆ.

ಅಭ್ಯರ್ಥಿಯು ಪರೀಕ್ಷಾ ಬುಕ್‌ಲೆಟ್‌ನೊಂದಿಗೆ ಒದಗಿಸಲಾದ ಆಪ್ಟಿಕಲ್ ಮಾರ್ಕ್ಸ್ ರೀಡರ್ (ಒಎಂಆರ್) ಶೀಟ್‌ನಲ್ಲಿ ಪೇಪರ್-I ಮತ್ತು ಪೇಪರ್ - II ರ ಪ್ರಶ್ನೆಗಳಿಗೆ ಉತ್ತರಗಳನ್ನು ಗುರುತಿಸಬೇಕಾಗುತ್ತದೆ. ತಪ್ಪಾದ ಉತ್ತರಗಳಿಗೆ ಯಾವುದೇ ಅಂಕ ಕಳೆಯುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಕೆಸೆಟ್‌ 2023ರ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ

ಕೆಸೆಟ್‌ 2023ರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.

1. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.in ಗೆ ಹೋಗಬೇಕು.

2. ವೆಬ್‌ಸೈಟ್‌ನ ಮುಖಪುಟದಲ್ಲಿರುವ ಕೆಸೆಟ್‌ 2023ರ ಅಡ್ಮಿಟ್ ಕಾರ್ಡ್‌ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.

3. ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಅಭ್ಯರ್ಥಿಗಳು ಅಗತ್ಯ ವಿವರಗಳನ್ನು ತುಂಬಬೇಕು.

4. ವಿವರಗಳನ್ನು ಭರ್ತಿ ಮಾಡಿದ ಬಳಿಕ ಸಬ್‌ಮಿಟ್‌ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಷ್ಟು ಮಾಡಿದ ಬಳಿಕ ಸ್ಕ್ರೀನ್ ಮೇಲೆ ನಿಮ್ಮ ಅಡ್ಮಿಟ್ ಕಾರ್ಡ್ ಕಾಣಿಸಿಕೊಳ್ಳಲಿದೆ.

5. ಅಡ್ಮಿಟ್ ಕಾರ್ಡ್ ಪರಿಶೀಲಿಸಿ ಮತ್ತು ಆ ಪುಟವನ್ನು ಡೌನ್‌ಲೋಡ್ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ತೆಗೆದಿರಿಸಿಕೊಳ್ಳಿ.

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET 2023)ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಕೃತ ಟಿಪ್ಪಣಿ ಗಮನಿಸಬಹುದು.

Whats_app_banner