ಅಮ್ಮನ ಆಸೆ ಈಡೇರಿಸಿದ ಚಿನ್ನದ ಹುಡುಗಿ: ಮಂಗಳೂರು ವಿವಿ ಕಾಲೇಜಿನಲ್ಲಿ ಸ್ವೀಪರ್ ಸುಜಾತಾ ಮಗಳು ವೀಕ್ಷಿತಾಗೆ ಎಂಎ ಪರೀಕ್ಷೆಯಲ್ಲಿ ಮೊದಲ ಸ್ಥಾನ
ಕನ್ನಡ ಸುದ್ದಿ  /  ಕರ್ನಾಟಕ  /  ಅಮ್ಮನ ಆಸೆ ಈಡೇರಿಸಿದ ಚಿನ್ನದ ಹುಡುಗಿ: ಮಂಗಳೂರು ವಿವಿ ಕಾಲೇಜಿನಲ್ಲಿ ಸ್ವೀಪರ್ ಸುಜಾತಾ ಮಗಳು ವೀಕ್ಷಿತಾಗೆ ಎಂಎ ಪರೀಕ್ಷೆಯಲ್ಲಿ ಮೊದಲ ಸ್ಥಾನ

ಅಮ್ಮನ ಆಸೆ ಈಡೇರಿಸಿದ ಚಿನ್ನದ ಹುಡುಗಿ: ಮಂಗಳೂರು ವಿವಿ ಕಾಲೇಜಿನಲ್ಲಿ ಸ್ವೀಪರ್ ಸುಜಾತಾ ಮಗಳು ವೀಕ್ಷಿತಾಗೆ ಎಂಎ ಪರೀಕ್ಷೆಯಲ್ಲಿ ಮೊದಲ ಸ್ಥಾನ

ಅಮ್ಮ ಕೆಲಸ ಮಾಡುವ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಬೇಕೆಂಬುದು ಇವರ ಗುರಿ. ನನ್ನ ಅಮ್ಮನ ಆಸೆಯಂತೆ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದೇನೆ. ಅಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದರು. ಅವರ ಕನಸನ್ನು ನನಸು ಮಾಡಿದ್ದೇನೆ ಎಂದು ವೀಕ್ಷಿತಾ ಹೆಮ್ಮೆಯಿಂದ ಹೇಳುತ್ತಾರೆ.

ಮಂಗಳೂರು ವಿವಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವೀಕ್ಷಿತಾ (ಎಡಚಿತ್ರ) ಮತ್ತು ಅವರ ತಾಯಿ ಸುಜಾತಾ
ಮಂಗಳೂರು ವಿವಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವೀಕ್ಷಿತಾ (ಎಡಚಿತ್ರ) ಮತ್ತು ಅವರ ತಾಯಿ ಸುಜಾತಾ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ವೀಪರ್ ಒಬ್ಬರ ಮಗಳು ಅದೇ ಕಾಲೇಜಿನಲ್ಲಿ ಕಲಿತು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಎಂಎ ಕನ್ನಡದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ವೀಕ್ಷಿತಾ ಅವರ ತಾಯಿ ಸುಜಾತ ಅವರು ಮಂಗಳೂರು ವಿಶ್ವವಿದ್ಯಾನಿಯಲದ ಅಧೀನದಲ್ಲಿರುವ ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದಾರೆ. ಇವರ ಮಗಳು ವೀಕ್ಷಿತಾ ಇದೇ ಸಂಸ್ಥೆಯಲ್ಲಿ ಇದೀಗ ಎಂಎ ಕನ್ನಡದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಪ್ರಾಥಮಿಕ ಶಾಲೆಯನ್ನು ರಾಣಿಪುರದಲ್ಲಿ , ಪ್ರೌಢಶಾಲೆ ಬಬ್ಬುಕಟ್ಟೆಯಲ್ಲಿ ಮಾಡಿ ಬಳಿಕ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಪಿಯುಸಿಯಲ್ಲಿ ಡಿಸ್ಟಿಂಕ್ಸನ್‌ನಲ್ಲಿ ತೇರ್ಗಡೆಯಾಗಿದ್ದರು.

ಪದವಿಯನ್ನು ಅಮ್ಮ ಕೆಲಸ ಮಾಡುವ ಹಂಪನಕಟ್ಟೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಕಲಿತ ಇವರು, ಕನ್ನಡ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದರು. ಇದೀಗ ಬಿಎಡ್ ಕಲಿಯುತ್ತಿರುವ ಇವರು, ಮುಂದೆ ಎಂಎಡ್ ಮಾಡುವ ಗುರಿಯನ್ನು ಹೊಂದಿದ್ದಾರೆ.

ಉಪನ್ಯಾಸಕಿ ಆಗುವ ಗುರಿ

ಅಮ್ಮ ಕೆಲಸ ಮಾಡುವ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಬೇಕೆಂಬುದು ಇವರ ಗುರಿ. ನನ್ನ ಅಮ್ಮನ ಆಸೆಯಂತೆ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದೇನೆ. ಅಮ್ಮ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದರು. ಅವರ ಕನಸನ್ನು ನನಸು ಮಾಡಿದ್ದೇನೆ. ಅಮ್ಮನಿಗೆ ನಾನು ತಾನು ಕಲಸ ಮಾಡಿದ ಸಂಸ್ತೆಯಲ್ಲಿ ನಾನು ಶಿಕ್ಷಕಿಯಾಗಿ ಬರಬೇಕೆಂಬ ಆಸೆ ಇದೆ. ಅಮ್ಮನ ಅರ್ಧ ಆಸೆ ಈಡೇರಿಸಿದ್ದೇನೆ. ಉಳಿದದ್ದು ಶೀಘ್ರ ಪೂರ್ಣಗೊಳಿಸುತ್ತೇನೆ ಎಂದರು.

ವೀಕ್ಷಿತಾ ಅವರ ತಾಯಿ ಸುಜಾತ ಅವರು ಮಾತನಾಡಿ, ನಾನು ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳು ಎಂಎ ಪರೀಕ್ಷೆ ಯಲ್ಲಿ ರ‍್ಯಾಂಕ್ ಬರಬೇಕೆಂದು ಬಹಳ ಆಸೆಯಿತ್ತು. ಅವಳು ಅದನ್ನು ಈಡೇರಿಸಿದ್ದಾಳೆ ಎಂದರು.

ಡಿ.ಎಂ.ಘನಶ್ಯಾಮ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸಂಪಾದಕ. ಊರು ಸುತ್ತುವುದು, ಜನರ ಒಡನಾಟ, ಪುಸ್ತಕಗಳನ್ನು ಓದುವುದು ಇಷ್ಟ. ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಪ್ರಜಾವಾಣಿ ದಿನಪತ್ರಿಕೆಗಳ ವಿವಿಧ ವಿಭಾಗಗಳು ಹಾಗೂ ಟಿವಿ9 ಜಾಲತಾಣದಲ್ಲಿ ಒಟ್ಟು 20 ವರ್ಷ ಕಾರ್ಯನಿರ್ವಹಿಸಿದ ಅನುಭವ. ಫೀಚರ್ ರೈಟಿಂಗ್ ಇಷ್ಟದ ಪ್ರಕಾರ. ಆರ್ಥಿಕ ವಿದ್ಯಮಾನ, ಕದನ ಕಥನ, ಅಧ್ಯಾತ್ಮ, ಗ್ರಾಮೀಣ ಅಭಿವೃದ್ಧಿ ಕುರಿತು ಆಸ್ಥೆಯಿಂದ ಬರೆಯುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸ್ವಂತ ಊರು. ಸಮಾಜದಲ್ಲಿ ಒಳಿತಿನ ಕನಸು, ಆಕಾಂಕ್ಷೆ, ಮೌಲ್ಯ ಬಿತ್ತುವುದೇ ಪತ್ರಿಕೋದ್ಯಮದ ಮೂಲ ಉದ್ದೇಶ ಎಂದು ನಂಬಿದವರು. ಇಮೇಲ್: dm.ghanashyam@htdigital.in