Santoor Scholarships; ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್, ಸಂತೂರ್ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆ ಶುರುವಾಗಿದೆ ನೋಡಿ
Santoor Scholarship 2024: ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಸೇರಿದ ಗ್ರಾಮೀಣ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಆರ್ಥಿಕವಾಗಿ ನೆರವಾಗಲು ವಿಪ್ರೋ ಸಂತೂರ್ ಮಹಿಳಾ ವಿದ್ಯಾರ್ಥಿ ವೇತನ 2024 ಅನ್ನು ನೀಡುತ್ತದೆ. ಇದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೂರ್ಣ ವಿವರಕ್ಕೆ ವರದಿ ಗಮನಿಸಿ.
ಬೆಂಗಳೂರು: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ಸಲುವಾಗಿ ವಿಪ್ರೋ, “ಸಂತೂರ್ ಮಹಿಳಾ ವಿದ್ಯಾರ್ಥಿ ವೇತನ” (Santoor Scholarship) ನೀಡುತ್ತಿದೆ. ಈ ವರ್ಷದ ಸಂತೂರ್ ವಿದ್ಯಾರ್ಥಿ ವೇತನ (Santoor Scholarship 2024)ಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ ವ್ಯಾಸಂಗದಲ್ಲಿ ಉತ್ತಮ ಸಾಧನೆ ಮಾಡಿದ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕಾಗಿ ವರ್ಷಕ್ಕೆ 24,000 ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.
ಕಳೆದ ಎಂಟು ವರ್ಷಗಳಲ್ಲಿ ಸುಮಾರು 8000 ವಿದ್ಯಾರ್ಥಿಗಳಿಗೆ ಸಂತೂರ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಮೂಲಕ ಸಹಾಯ ಮಾಡಲಾಗಿದೆ. ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿನಿಯರ ಹೊರತಾಗಿ, ಹ್ಯುಮಾನಿಟೀಸ್, ಕಲೆ ಮತ್ತು ವಿಜ್ಞಾನ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಹುಡುಗಿಯರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕು.
ಕರ್ನಾಟಕ, ಆಂಧ್ರ, ತೆಲಂಗಾಣ, ಛತ್ತೀಸ್‌ಗಢಗಳ 1500 ಬಡ ವಿದ್ಯಾರ್ಥಿನಿಯರಿಗೆ ಸಂತೂರ್ ಸ್ಕಾಲರ್‌ಶಿಪ್
ಇಂಟರ್ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರು ಇದಕ್ಕೆ ಅರ್ಜಿ ಸಲ್ಲಿಸಬಹುದು. ವಿಪ್ರೋ ಕನ್ಸ್ಯೂಮರ್ ಕೇರ್ ಮತ್ತು ವಿಪ್ರೋ ಕೇರ್‌ಗಳು ಪ್ರತಿ ವರ್ಷವೂ ಬಡ ವಿದ್ಯಾರ್ಥಿನಿಯರ ಶಿಕ್ಷಣವನ್ನು ಉತ್ತೇಜಿಸಲು ಈ ವಿದ್ಯಾರ್ಥಿವೇತನವನ್ನು ನೀಡುತ್ತವೆ. ಈ ವರ್ಷ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಛತ್ತೀಸ್‌ಗಢ ರಾಜ್ಯಗಳ 1500 ಬಡ ವಿದ್ಯಾರ್ಥಿನಿಯರಿಗೆ ಈ ಪ್ರೋತ್ಸಾಹಧನ ನೀಡಲು ಅದು ತೀರ್ಮಾನಿಸಿದೆ. ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ವಿದ್ಯಾರ್ಥಿಗಳು ಸೆಪ್ಟೆಂಬರ್ 20 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿಗೆ ಅಗತ್ಯವಿರುವ ದಾಖಲೆಗಳು: ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ ಪದವಿ ಕಾಲೇಜು ಗುರುತಿನ ಚೀಟಿ 12 ನೇ ತರಗತಿ, 10 ನೇ ತರಗತಿಯ ಮಾರ್ಕ್ ಶೀಟ್‌ಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್‌ನ ಯಾವುದೇ ಗುರುತಿನ ಪುರಾವೆ ಫೋಟೋಕಾಪಿ (ಗ್ರಾಮೀಣ ಬ್ಯಾಂಕ್ ಹೊರತುಪಡಿಸಿ)
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆ ಮತ್ತು ದಾಖಲೆಗಳು
ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
2023-24 ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆ ಅಥವಾ ಜೂನಿಯರ್ ಕಾಲೇಜಿನಲ್ಲಿ ಇಂಟರ್ ಕ್ಲಾಸ್ ಪಾಸ್ ಆಗಿರಬೇಕು.
2024-25 ಶೈಕ್ಷಣಿಕ ವರ್ಷದಲ್ಲಿ ಪದವಿ ಕಾರ್ಯಕ್ರಮಕ್ಕೆ ದಾಖಲಾಗಿರಬೇಕು.
ಗ್ರಾಜುಯೇಟ್ ಕೋರ್ಸ್ ಕನಿಷ್ಠ 3 ವರ್ಷಗಳ ಅವಧಿಯಾಗಿರಬೇಕು, ಹ್ಯುಮಾನಿಟೀಸ್, ಲಿಬರಲ್ ಆರ್ಟ್ಸ್, ಸೈನ್ಸಸ್‌ನಲ್ಲಿ ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗುವುದು.
ಸಂತೂರ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
1) ಸಂತೂರ್ ಸ್ಕಾಲರ್‌ಶಿಪ್ ವೆಬ್‌ಸೈಟ್ (www.santoorscholarships.com) ಗೆ ಭೇಟಿ ಕೊಡಿ.
2) ಸಂತೂರ್ ಸ್ಕಾಲರ್‌ಶಿಪ್ ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ 'Apply Online Now' ಬಟನ್ ಕ್ಲಿಕ್ ಮಾಡಿ
3) ಅದಾಗಿ ತೆರೆದುಕೊಳ್ಳುವ ಪುಟದಲ್ಲಿ 'Apply Now' ಆಪ್ಶನ್ ಕ್ಲಿಕ್ ಮಾಡಿ
4) ಮೊಬೈಲ್ ನಂಬರ್, ಇಮೇಲ್ ಐಡಿ ದಾಖಲಿಸಿ ರಿಜಿಸ್ಟರ್ ಮಾಡಿ ಲಾಗಿನ್ ಐಡಿ ಪಡೆದುಕೊಳ್ಳಿ.
5) ನಿಮ್ಮ ಲಾಗಿನ್ ಐಡಿ ಮೂಲಕ buddy4study ಖಾತೆಯಲ್ಲಿ ಲಾಗಿನ್ ಆಗಿ
6) ಅಲ್ಲಿ ಸಂತೂರ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25 ಅರ್ಜಿ ಇರುವ ಪೇಜ್ ಓಪನ್ ಆಗುತ್ತದೆ.
7) ಆ ಅರ್ಜಿಯನ್ನು ಭರ್ತಿ ಮಾಡುವ ಸಲುವಾಗಿ, 'Application Start' ಬಟನ್ ಕ್ಲಿಕ್ ಮಾಡಬೇಕು.
8) ಆನ್‌ಲೈನಲ್ಲೇ ದಾಖಲೆಗಳನ್ನು ಸಲ್ಲಿಸುತ್ತ, ವಿದ್ಯಾರ್ಥಿನಿಯ ಅರ್ಜಿಯನ್ನು ಭರ್ತಿ ಮಾಡಿ
9) ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿ
10) ನಿಬಂಧನೆ ಮತ್ತು ಷರತ್ತುಗಳನ್ನು ಅಂಗೀಕರಿಸಿದ ಬಳಿಕ ಪ್ರಿವ್ಯೂ ಕ್ಲಿಕ್ ಮಾಡಿ.
11) ಪ್ರಿವ್ಯೂವ್‌ನಲ್ಲಿ ಎಲ್ಲವೂ ಸರಿ ಇದೆಯೇ ಎಂಬುದನ್ನು ಚೆಕ್ ಮಾಡಿ. ನಂತರ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಅಲ್ಲಿಗೆ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆಯಾದಂತೆ.
ಸ್ಕಾಲರ್ ಶಿಪ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಮೂರು ವರ್ಷ ಅಥವಾ ಕೋರ್ಸ್ ಮುಗಿಯುವವರೆಗೆ ವರ್ಷಕ್ಕೆ 24 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ. ಹಣವನ್ನು ನೇರವಾಗಿ ಅವರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ವಿದ್ಯಾರ್ಥಿವೇತನ ಅರ್ಜಿಗಳಿಗೆ ಕೊನೆಯ ದಿನಾಂಕ ಸೆಪ್ಟೆಂಬರ್ 20 - ಇದು ಮರೆಯಬೇಡಿ.