ಎಲ್ಲ ಹೆಣ್ಣುಮಕ್ಕಳಿಗೂ ಸಂಪೂರ್ಣ ಶಾಲಾ ಶಿಕ್ಷಣ ಗುರಿ; ಸಿಆರ್‌ವೈನಿಂದ ಪೂರ್ಣ ಶಿಕ್ಷಣ, ದೇಶದ ರಕ್ಷಣೆ ಎಂಬ 7 ವಾರಗಳ ಅಭಿಯಾನ
ಕನ್ನಡ ಸುದ್ದಿ  /  ಕರ್ನಾಟಕ  /  ಎಲ್ಲ ಹೆಣ್ಣುಮಕ್ಕಳಿಗೂ ಸಂಪೂರ್ಣ ಶಾಲಾ ಶಿಕ್ಷಣ ಗುರಿ; ಸಿಆರ್‌ವೈನಿಂದ ಪೂರ್ಣ ಶಿಕ್ಷಣ, ದೇಶದ ರಕ್ಷಣೆ ಎಂಬ 7 ವಾರಗಳ ಅಭಿಯಾನ

ಎಲ್ಲ ಹೆಣ್ಣುಮಕ್ಕಳಿಗೂ ಸಂಪೂರ್ಣ ಶಾಲಾ ಶಿಕ್ಷಣ ಗುರಿ; ಸಿಆರ್‌ವೈನಿಂದ ಪೂರ್ಣ ಶಿಕ್ಷಣ, ದೇಶದ ರಕ್ಷಣೆ ಎಂಬ 7 ವಾರಗಳ ಅಭಿಯಾನ

ಎಲ್ಲಾ ಹೆಣ್ಣುಗಳು ಸಂಪೂರ್ಣ ಶಾಲಾ ಶಿಕ್ಷಣ ಪಡೆಯಬೇಕೆಂಬ ಗುರಿಯೊಂದಿಗೆ ಚೈಲ್ಡ್ ರೈಟ್ಸ್‌ ಆಂಡ್ ಯು-ಸಿಆರ್‌ವೈ ಸಂಸ್ಥೆ ಹೆಣ್ಣುಮಕ್ಕಳಿಗಾಗಿ 7 ವಾರಗಳ “ಪೂರ್ಣ ಶಿಕ್ಷಣ, ದೇಶದ ರಕ್ಷಣೆ” ರಾಷ್ಟ್ರೀಯ ಅಭಿಯಾನ ಆರಂಭಿಸಿದ್ದು, ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಸಮಾಜದಲ್ಲಿ ಜಾಗೃತಿ ಮತ್ತು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಿದೆ.

ಎಲ್ಲ ಹೆಣ್ಣುಮಕ್ಕಳಿಗೂ ಸಂಪೂರ್ಣ ಶಾಲಾ ಶಿಕ್ಷಣ ಗುರಿ; ಸಿಆರ್‌ವೈನಿಂದ ಪೂರ್ಣ ಶಿಕ್ಷಣ, ದೇಶದ ರಕ್ಷಣೆ ಎಂಬ 7 ವಾರಗಳ ಅಭಿಯಾನ
ಎಲ್ಲ ಹೆಣ್ಣುಮಕ್ಕಳಿಗೂ ಸಂಪೂರ್ಣ ಶಾಲಾ ಶಿಕ್ಷಣ ಗುರಿ; ಸಿಆರ್‌ವೈನಿಂದ ಪೂರ್ಣ ಶಿಕ್ಷಣ, ದೇಶದ ರಕ್ಷಣೆ ಎಂಬ 7 ವಾರಗಳ ಅಭಿಯಾನ

ಬೆಂಗಳೂರು: ದೇಶಾದ್ಯಂತ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿಯುವುದರ ಜೊತೆಗೆ ಹಲವು ಹೆಣ್ಣು ಮಕ್ಕಳು ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಂತದವರೆಗೆ ತಲುಪಲುವುದಿಲ್ಲ. ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಮಕ್ಕಳ ಹಕ್ಕುಗಳ ಪ್ರಮುಖ ಸಂಸ್ಥೆಯಾಗಿರುವ ಚೈಲ್ಡ್ ರೈಟ್ಸ್ ಆಂಡ್ ಯು (CRY) ಸಂಸ್ಥೆ “ಪೂರ್ಣ ಶಿಕ್ಷಣ, ದೇಶದ ರಕ್ಷಣೆ” ಎಂಬ 7 ವಾರಗಳ ರಾಷ್ಟ್ರೀಯ ಜಾಗೃತಿ ಅಭಿಯಾನ ಆರಂಭಿಸಿದೆ. ಈ ಕಾರ್ಯಕ್ರಮವು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿ ಮತ್ತು ಸಾಮಾಜಿಕ ವರ್ತನೆಗಳನ್ನು ಬದಲಾಯಿಸುವ ಮತ್ತು ಪ್ರತಿ ಹೆಣ್ಣುಮಗುವನ್ನೂ ಶಾಲೆ ಮತ್ತು ಕಾಲೇಜಿಗೆ ಕರೆತರುವುದಕ್ಕೆ ಹೆಚ್ಚಿನ ಗಮನವನ್ನು ಹರಿಸಿದೆ. ಅಷ್ಟೇ ಅಲ್ಲ, ಪ್ರತಿ ಹೆಣ್ಣು ಮಗುವೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಂತದವರೆಗೆ ವ್ಯಾಸಂಗ ನಡೆಸಬೇಕು ಎಂಬ ಧ್ಯೇಯವನ್ನು ಇದು ಹೊಂದಿದೆ.

ಭಾರತದ 20 ರಾಜ್ಯಗಳಲ್ಲಿ ಅಭಿಯಾನವು ಸೋಮವಾರದಿಂದ ಆರಂಭವಾಗಿದೆ. ಇದರಲ್ಲಿ ಕರ್ನಾಟಕದ 5 ಜಿಲ್ಲೆಗಳಾದ ಬೆಂಗಳೂರು, ರಾಯಚೂರು, ಕಲಬುರಗಿ, ಬೆಳಗಾವಿ ಹಾಗೂ ಕೋಲಾರ ಸೇರಿದೆ. 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವುದಕ್ಕಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ 2009 ರೂಪಿಸಲಾಗಿದೆ. ಈ ಏಪ್ರಿಲ್‌ನಲ್ಲಿ ಈ ಕಾಯ್ದೆಗೆ 15 ವರ್ಷ ಪೂರೈಸುತ್ತಿದ್ದರೂ, ಇಂದಿಗೂ ಹಲವು ಮಕ್ಕಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಮಾಧ್ಯಮಿಕ ಮತ್ತು ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಂತದವರೆಗೆ ತಲುಪುವಲ್ಲಿ ಇನ್ನೂ ಅಡೆತಡೆಯನ್ನು ಎದುರಿಸುತ್ತಿದ್ದಾರೆ. 2030 ರ ವೇಳೆಗೆ ಸಮಾನ ಶಿಕ್ಷಣಕ್ಕೆ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್‌ಡಿಜಿ ಗುರಿ-4) ಅನುಗುಣವಾಗಿ 18 ವರ್ಷದವರೆಗೆ ಸಮಾನ, ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020 ಹೊಂದಿದೆ.

ಇಂತಹ ಪ್ರಯತ್ನಗಳ ಹೊರತಾಗಿಯೂ, ಶಿಕ್ಷಣಕ್ಕಾಗಿ ಸಮಗ್ರ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡೈಸ್‌+) 2021-2022 ಇಂದ ಪಡೆದ ಇತ್ತೀಚಿನ ಡೇಟಾದಲ್ಲಿ, ಭಾರತದಲ್ಲಿ ಪ್ರತಿ ಐದು ಹೆಣ್ಣುಮಕ್ಕಳ ಪೈಕಿ ಮೂರು ಹೆಣ್ಣುಮಕ್ಕಳು ಮಾತ್ರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಂತದವರೆಗೆ ತೆರಳುತ್ತಾರೆ ಎಂಬುದು ತಿಳಿಯುತ್ತಿದೆ. ಎಲ್ಲರನ್ನೂ ತೊಡಗಿಸಿಕೊಳ್ಳುವುದು ಈ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ, “ಪೂರ್ಣ ಶಿಕ್ಷಣ, ದೇಶದ ರಕ್ಷಣೆ” ಎಂಬ ಅಭಿಯಾನವನ್ನು ಸಿಆರ್‌ವೈ ಆರಂಭಿಸಿದೆ. ಇದು ಜೂನ್ 24 ರಿಂದ ಆರಂಭವಾಗಿ ಸ್ವಾತಂತ್ರೋತ್ಸವ ಸಂಭ್ರಮದ ದಿನ ಆಗಸ್ಟ್‌ 15 ರ ವರೆಗೆ ನಡೆಯಲಿದೆ. ಶಿಕ್ಷಣದಲ್ಲಿ ಲಿಂಗ ತಾರತಮ್ಯವನ್ನು ಪರಿಹರಿಸಲು ಎಲ್ಲ ಪಾಲುದಾರರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಈ ಅಭಿಯಾನವು ಹೊಂದಿದೆ.

ಹೆಣ್ಣುಮಕ್ಕಳ ಶಿಕ್ಷಣದಿಂದ ಸಬಲೀಕರಣ ಮತ್ತು ದೇಶದ ವಿಕಾಸಕ್ಕೆ ಅತ್ಯಂತ ಅಗತ್ಯ; ಸಿಆರ್‌ವೈ ಸಿಇಒ ಪೂಜಾ ಮಾರ್ವಾಹ

ಸಿಆರ್‌ವೈ ಸಿಇಒ ಪೂಜಾ ಮಾರ್ವಾಹ ಅಭಿಯಾನ ಕುರಿತು ಮಾತನಾಡಿ, “ಪ್ರೌಢಶಾಲೆ ಮತ್ತು ಪದವಿ ಪೂರ್ವ ಹಂತದವರೆಗೆ ಹೆಣ್ಣುಮಕ್ಕಳಿಗೆ ಶಾಲಾ ಶಿಕ್ಷಣವನ್ನು ಒದಗಿಸುವುದು ಅವರ ಸಬಲೀಕರಣ ಮತ್ತು ದೇಶದ ವಿಕಾಸಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಪ್ರಾಥಮಿಕ ಶಿಕ್ಷಣದ ನಂತರವೂ ಮಕ್ಕಳಿಗೆ ಶಿಕ್ಷಣ ಒದಗಿಸುವುದಕ್ಕೆ ನಿರ್ದಿಷ್ಟ ಗುರಿಗಳು ಮತ್ತು ಕ್ರಿಯಾ ಯೋಜನೆಗಳನ್ನು ಹೊಂದಿರುವ ಕಾರ್ಯಕ್ರಮವು ಅಗತ್ಯವಿದೆ. ಇದರಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಹಣಕಾಸು ಪ್ರೋತ್ಸಾಹಧನ, ಸುಧಾರಿತ ಮೂಲಸೌಕರ್ಯ, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಬಾಲ್ಯ ವಿವಾಹದ ವಿರುದ್ಧ ಬಲವಾದ ಕಾನೂನು ಕ್ರಮ ಅಗತ್ಯವಿದೆ. ಆದರೆ, ಹೆಣ್ಣುಮಕ್ಕಳ ಶಿಕ್ಷಣದ ವಿಷಯದಲ್ಲಿ ಸಾಮೂಹಿಕ ಜಾಗೃತಿ ಮೂಡಿಸುವುದು ಮತ್ತು ಸಾಮಾಜಿಕ ಪ್ರತಿ ಧ್ವನಿ ಇಲ್ಲದೇ ಇದು ಸಾಧ್ಯವಿಲ್ಲ ಎಂದಿದ್ದಾರೆ.

ಹೆಣ್ಣು ಮಕ್ಕಳ ಬಾಲ್ಯ ವಿವಾಹದ ವಿಚಾರ ಬಂದಾಗ ಪದವಿಪೂರ್ವ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಪೂಜಾ ಅವರು “ಪದವಿಪೂರ್ವ ಶಿಕ್ಷಣವನ್ನು ಹೆಣ್ಣು ಮಕ್ಕಳಿಗೆ ಒದಗಿಸುವುದಕ್ಕೂ ವಿಳಂಬವಾಗಿ ವಿವಾಹವಾಗುವುದಕ್ಕೂ ನೇರ ಸಂಬಂಧವಿವೆ. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯವೂ ಸುಧಾರಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಹೆಚ್ಚು ಆರ್ಥಿಕ ಸುಧಾರಣೆಯೂ ಆಗಲಿದೆ. ಅಷ್ಟೇ ಅಲ್ಲ, ಹೆಚ್ಚು ಹೆಚ್ಚು ಕಲಿತಷ್ಟೂ ಹೆಣ್ಣುಮಕ್ಕಳಲ್ಲಿ ಹೆಚ್ಚು ಉತ್ಪಾದಕತೆ ಮತ್ತು ಹೆಚ್ಚು ಉದ್ಯೋಗ ಅವಕಾಶಗಳು ಸಿಗುತ್ತವೆ. ಇದರಿಂದ ತಲೆಮಾರುಗಳಿಂದ ಬಂದಿರುವ ಬಡತನ ನಿವಾರಣೆಯಾಗಲಿದೆ” ಎಂದು ಹೇಳಿದ್ದಾರೆ.

ಶಿಕ್ಷಣ ಸೌಲಭ್ಯಗಳ ಕೊರತೆ, ಸುರಕ್ಷತೆ ಕಳವಳಗಳೆಲ್ಲವೂ ಹೆಣ್ಣುಮಕ್ಕಳ ಶಿಕ್ಷಣದ ವಿಷಯದಲ್ಲಿ ಅಡ್ಡಿ - ಜಾನ್ ರಾಬರ್ಟ್ಸ್

ಅಡೆತಡೆಗಳನ್ನು ಮೀರುವುದು ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಪ್ರಗತಿಯನ್ನು ತಡೆಯುವ ಕ್ರಮಗಳ ಬಗ್ಗೆ ಮಾತನಾಡಿದ ಸಿಆರ್‌ವೈ ಸೌಥ್‌ನ ಪ್ರಾದೇಶಿಕ ನಿರ್ದೇಶಕ ಜಾನ್ ರಾಬರ್ಟ್ಸ್ “ಸಾಮಾಜಿಕ ಆರ್ಥಿಕ ಸವಾಲುಗಳು, ಸಾಂಸ್ಕೃತಿಕ ನಿಯಮಗಳು, ಲಿಂಗ ತಾರತಮ್ಯಗಳು, ಬಾಲ್ಯ ವಿವಾಹ, ಶಿಕ್ಷಣ ಸೌಲಭ್ಯಗಳ ಕೊರತೆ, ದೂರದವರೆಗೆ ಪ್ರಯಾಣ ಮಾಡುವುದು ಮತ್ತು ಸುರಕ್ಷತೆ ಕಳವಳಗಳೆಲ್ಲವೂ ಹೆಣ್ಣುಮಕ್ಕಳ ಶಿಕ್ಷಣದ ವಿಷಯದಲ್ಲಿ ಅಡ್ಡಿ ಉಂಟು ಮಾಡುತ್ತವೆ. ಇವು ಪದವಿಪೂರ್ವ ಶಿಕ್ಷಣವನ್ನು ಪುರೈಸುವಲ್ಲಿ ಗಮನಾರ್ಹ ಅಡೆತಡೆಗಳನ್ನು ಎದುರಿಸುತ್ತವೆ. ಅಷ್ಟೇ ಅಲ್ಲ, ಇದರಿಂದಾಗಿ ಹೆಣ್ಣು ಮಕ್ಕಳು ಶಾಲೆ ತೊರೆಯುವುದಕ್ಕೂ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಜೊತೆಗೆ, ಬಾಲ್ಯ ವಿವಾಹ, ಹದಿಹರೆಯದಲ್ಲಿ ಗರ್ಭಧರಿಸುವುದು, ದೌರ್ಜನ್ಯಕ್ಕೆ ಒಳಗಾಗುವುದು, ಅಷ್ಟೇ ಅಲ್ಲ, ಮಕ್ಕಳ ಕಳ್ಳಸಾಗಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಅವರು ಒಡ್ಡಿಕೊಳ್ಳುವಂತಾಗುತ್ತದೆ.” ಸಿಆರ್‌ವೈ ಅಭಿಯಾನದ ಧ್ಯೇಯೋದ್ದೇಶಗಳನ್ನು ವಿವರಿಸಿದ ಜಾನ್ ರಾಬರ್ಟ್ಸ್ ಅವರು, “ಸಿಆರ್‌ವೈ ಮತ್ತು ಅದರ ಪಾಲುದಾರ ಸಂಸ್ಥೆಗಳು ಶಾಲೆಯ ವಿವಿಧ ಹಂತಗಳಲ್ಲಿ ಹೆಣ್ಣು ಮಕ್ಕಳು ಮುಂದುವರಿಕೆಯನ್ನು ಪ್ರೋತ್ಸಾಹಿಸುತ್ತವೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪದವಿ ಪೂರ್ವ ಹಂತದಲ್ಲಿ ಹೆಣ್ಣುಮಕ್ಕಳು ಶಾಲೆ ತೊರೆಯದಂತೆ ನೋಡಿಕೊಳ್ಳುವ ಗುರಿ ಹೊಂದಿದೆ. ಅಷ್ಟೇ ಅಲ್ಲ, ಮಕ್ಕಳು, ಅವರ ಕುಟುಂಬ, ಬೋಧಕರು, ಸಮುದಾಯದ ಸದಸ್ಯರು, ಪ್ರಭಾವಿಗಳು, ರಾಜ್ಯದ ಅಧಿಕಾರಿಗಳು, ವಿವಿಧ ಶಿಕ್ಷಣ ಹಂತಗಳಲ್ಲಿರುವ ಮಕ್ಕಳು, ಮಾಧ್ಯಮ ಸಂಸ್ಥೆಗಳು, ಕಾರ್ಪೊರೇಟ್‌ಗಳು ಮತ್ತು ಸಾರ್ವಜನಿಕರನ್ನು ತೊಡಗಿಸಿಕೊಂಡು ಜಾಗೃತಿ ಮೂಡಿಸುವ ಗುರಿಯನ್ನು ನಾವು ಹೊಂದಿದ್ದೇವೆ.”

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner